ತಳವಾರ ಸಮಾಜದ ಬೃಹತ್​ ಪ್ರತಿಭಟನೆ

ಎಸ್ಟಿ ಮತ್ತು ಸಿಂಧುತ್ವ ಪ್ರಮಾಣಪತ್ರ ವಿತರಣೆ ಸೇರಿ ನಾನಾ ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ರಾಜ್ಯ ತಳವಾರ ಸಮಾಜದ ಕಾರ್ಯಕರ್ತರು ಕಲಬುರಗಿ ಡಿಸಿ ಕಚೇರಿ ಎದುರು ಮಂಗಳವಾರ ಬೃಹತ್​ ನಡೆದ ಪ್ರತಿಭಟನೆಯಲ್ಲಿ ಮುಖಂಡ ಬಸವರಾಜ ಬೂದಿಹಾಳ್​ ಮಾತನಾಡಿದರು. ರಾಜಗುರು ಮಹಾಸ್ವಾಮಿಗಳು, ಪೂಜ್ಯ ಚಿದಾನಂದ ಮಹಾಸ್ವಾಮಿಗಳು, ಧಂಗಾಪುರದ ಗುರುದಾಸ ಪರೋಪಕಾರ ಗುರುಜಿ, ಬೆಂಗಳೂರಿನ ಪೂಜ್ಯ ನಿರಂಜನ್​ ಶ್ರೀಗಳು, ಡಾ.ಸರದಾರ ರಾಯಪ್ಪ, ಅವ್ವಣ್ಣ ಮ್ಯಾಕೇರಿ, ಶಿವಕುಮಾರ ನಾಟೀಕಾರ್​ ಇತರರಿದ್ದರು.
ಎಸ್ಟಿ ಮತ್ತು ಸಿಂಧುತ್ವ ಪ್ರಮಾಣಪತ್ರ ವಿತರಣೆ ಸೇರಿ ನಾನಾ ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ರಾಜ್ಯ ತಳವಾರ ಸಮಾಜದ ಕಾರ್ಯಕರ್ತರು ಕಲಬುರಗಿ ಡಿಸಿ ಕಚೇರಿ ಎದುರು ಮಂಗಳವಾರ ಬೃಹತ್​ ನಡೆದ ಪ್ರತಿಭಟನೆಯಲ್ಲಿ ಮುಖಂಡ ಬಸವರಾಜ ಬೂದಿಹಾಳ್​ ಮಾತನಾಡಿದರು. ರಾಜಗುರು ಮಹಾಸ್ವಾಮಿಗಳು, ಪೂಜ್ಯ ಚಿದಾನಂದ ಮಹಾಸ್ವಾಮಿಗಳು, ಧಂಗಾಪುರದ ಗುರುದಾಸ ಪರೋಪಕಾರ ಗುರುಜಿ, ಬೆಂಗಳೂರಿನ ಪೂಜ್ಯ ನಿರಂಜನ್​ ಶ್ರೀಗಳು, ಡಾ.ಸರದಾರ ರಾಯಪ್ಪ, ಅವ್ವಣ್ಣ ಮ್ಯಾಕೇರಿ, ಶಿವಕುಮಾರ ನಾಟೀಕಾರ್​ ಇತರರಿದ್ದರು.
Published on

ಪ್ರಮುಖ ಮುಖ್ಯಾಂಶಗಳು

  • ಎಸ್ಟಿ ಪ್ರಮಾಣಪತ್ರ ವಿತರಣೆಗೆ ಆಗ್ರಹ
  • ಕಲಬುರಿಗಿ ವಿಧಾನಸೌಧ ಎದುರು ಟೆಂಟ್​ ನಿರ್ಮಾಣ
ಕಲಬುರಗಿ: ಎಸ್ಟಿ ಮತ್ತು ಸಿಂಧುತ್ವ ಪ್ರಮಾಣಪತ್ರ ವಿತರಣೆ ಸೇರಿ ನಾನಾ ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ರಾಜ್ಯ ತಳವಾರ ಸಮಾಜದ ಕಾರ್ಯಕರ್ತರು ಕಲಬುರಗಿಯಲ್ಲಿ ಮಂಗಳವಾರ ಬೃಹತ್​ ಪ್ರತಿಭಟನೆ ನಡೆಸಿದರು.
ಕಲಬುರಗಿ ಜಗತ್​ ವೃತ್ತದಲ್ಲಿ ಸೇರಿದ ಸಮಾಜದ ಸಾವಿರಾರು ಜನ ಕಾರ್ಯಕರ್ತರು, ಮುಖಂಡರು ಅಲ್ಲಿಂದ ಮುಖ್ಯರಸ್ತೆ ಮಾರ್ಗವಾಗಿ ಜಿಲ್ಲಾಧಿಕಾರಿ ಕಚೇರಿವರೆಗೆ ಬೃಹತ್​ ಪ್ರತಿಭಟನಾ ರ್ಯಾಲಿ ನಡೆಸಿದರು.
ವಿಧಾನಸೌಧದ ಮುಖ್ಯದ್ವಾರವನ್ನು ಪೊಲೀಸರು ಬಂದ್​ ಮಾಡಿದರು. ತಕ್ಷಣ ಪ್ರತಿಭಟನಾಕಾರರು ರಸ್ತೆಯಲ್ಲೇ ಬೃಹತ್​ ತಾತ್ಕಾಲಿಕ ಟೆಂಟ್​ ಹಾಕಿ ಖಡಕ್​ ಬಿಸಿಲು ಲೆಕ್ಕಿಸದೆ ಟೆಂಟ್​ನಲ್ಲಿ ಸೇರಿದರು. ಈ ಬಿಸಿಲಿನಲ್ಲೂ ಕೆಲ ಶಾಲಾ ಮಕ್ಕಳು ಪಾಲ್ಗೊಂಡಿದ್ದು ಗಮನ ಸೆಳೆಯಿತು.
ಬಿಜೆಪಿ ಒಬಿಸಿ ಮೋರ್ಚಾ ಕಾರ್ಯದರ್ಶಿ ಅವ್ವಣ್ಣ ಮ್ಯಾಕೇರಿ ಮಾತನಾಡಿ, ಹಿಂದಿನ ಬಿಜೆಪಿ ಸರ್ಕಾರ ಆದೇಶ ಹೊರಡಿಸಿ ತಳವಾರ ಸಮುದಾಯ ಎಸ್ಟಿಗೆ ಸೇರ್ಪಡೆ ಮಾಡಿ, ಪ್ರಮಾಣ ಪತ್ರ ನೀಡಲು ಶುರು ಮಾಡಿತ್ತು. ಇದಗೀ ಆಡಳಿತಕ್ಕೆ ಬಂದ ಕಾಂಗ್ರೆಸ್​ ಸರ್ಕಾರ ಲೋಕಸಭೆ ಚುನಾವಣೆ ನಂತರ ಪ್ರಮಾಣ ಪತ್ರ ನೀಡುವುದನ್ನು ಸ್ಥಗಿತಗೊಳಿಸಿ ಸಮಾಜಕ್ಕೆ ಅನ್ಯಾಯ ಮಾಡಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಜಿಲ್ಲಾ ಉಸ್ತುವಾರಿ ಸಚಿವರು, ಜಿಲ್ಲಾಧಿಕಾರಿಗಳು ಪ್ರಮಾಣಪತ್ರ ನೀಡುವುದನ್ನು ತಡೆ ಹಿಡಿದಿದ್ದಾರೆ. ರಾಜ್ಯದ 29 ಜಿಲ್ಲೆಗಳಲ್ಲಿ ತಳವಾರ ಸಮುದಾಯಕ್ಕೆ ಎಸ್ಟಿ ಪ್ರಮಾಣಪತ್ರ ನೀಡುತ್ತಿದ್ದು ಕಲಬುರಗಿ, ಯಾದಗಿರಿ ಜಿಲ್ಲೆಗಳಲ್ಲಿ ಮಾತ್ರ ತಡೆ ಹಿಡಿಯಲಾಗಿದೆ. ವಿದ್ಯಾರ್ಥಿಗಳು, ರೈತರು ಸಾರ್ವಜನಿಕರು ತೀರ್ವ ತೊಂದರೆಗೆ ಒಳಗಾಗಿದ್ದಾರೆ ಎಂದು ಹೇಳಿದರು.
ಸಿಂಧುತ್ವ ಪ್ರಮಾಣ ಪತ್ರ ನೀಡುವುದನ್ನು ಬಂದ್​ ಮಾಡಿದ ಪರಿಣಾಮ ತಳವಾರ ಸಮಾಜದ ಮಕ್ಕಳು ಶಿಣದಿಂದ ವಂಚಿರಾಗುತ್ತಿದ್ದಾರೆ. ಸಿಇಟಿ ಮತ್ತು ನೀಟ್​ ಪರೀೆ ಸಂದರ್ಭದಲ್ಲಿ ತೊಂದರೆ ಅನುಭವಿಸಿದ್ದಾರೆ ಎಂದರು.
ಜೆಡಿಎಸ್​ ರಾಜ್ಯ ಪ್ರಧಾನ ಕಾರ್ಯದರ್ಶಿ ಶಿವಕುಮಾರ ನಾಟೀಕಾರ್​ ಮಾತನಾಡಿದರು. ತೊನಸನಹಳ್ಳಿಯ ಪೂಜ್ಯ ಕೊಟ್ಟೂರೇಶ್ವರ ಶಿವಯೋಗಿ ಶ್ರೀಗಳು ಮಾತನಾಡಿದರು. ವಿಧಾನಸೌಧ ಮುಂಭಾಗದಲ್ಲಿ ಹಾಕಿದ ಟೆಂಟ್​ನಲ್ಲಿ ಸ್ವಾಮೀಜಿಗಳು, ಮುಖಂಡರು, ಯುವಕರು ಮಾತನಾಡಿ ಆಕ್ರೋಶ ವ್ಯಕ್ತಪಡಿಸಿದರು. ಈ ಸಂದರ್ಭದಲ್ಲಿ ಹೋರಾಟಗಾರರಿಗೆ ಊಟದ ವ್ಯವಸ್ಥೆ, ಕುಡಿಯುವ ನೀರಿಗೆ ವ್ಯವಸ್ಥೆ ಮಾಡಲಾಗಿತ್ತು.
ರಾಜಗುರು ಮಹಾಸ್ವಾಮಿಗಳು, ಪೂಜ್ಯ ಚಿದಾನಂದ ಮಹಾಸ್ವಾಮಿಗಳು, ಧಂಗಾಪುರದ ಗುರುದಾಸ ಪರೋಪಕಾರ ಗುರುಜಿ, ಬೆಂಗಳೂರಿನ ಪೂಜ್ಯ ನಿರಂಜನ್​ ಶ್ರೀಗಳು, ಡಾ.ಸರದಾರ ರಾಯಪ್ಪ, ರೇವಣಸಿದ್ದ ಕಮಾನಮನಿ, ವಸಂತ ನರಬೋಳ, ಭಾಷಾ ಪಟೇಲ್​ ಹಸರಗುಂಡಗಿ, ಸಂತೋಷ ಬೆಣ್ಣೂರ, ಸಂತೋಷ ತಳವಾರ, ಅನಿಲ್​ ಕೂಡಿ, ಶಿವಶರಣ ಬೆಣ್ಣೂರ್​, ಬಸವರಾಜ ಬೂದಿಹಾಳ, ಸಂಗಣ್ಣಾ ಹಣಮಂತಗೋಳ, ಮಹಾರಾಯ ಅಗಸಿ, ಶಿವಲಿಂಗಪ್ಪ ಜಮಾದಾರ, ರಾಜು ಉಕ್ಕಲಿ, ಬಸವರಾಜ ಸಪ್ಪನಗೋಳ, ವಿದ್ಯಾಧರ ಮಂಗಳೂರೆ, ಶಂಕು ಮ್ಯಾಕೇರಿ, ಪ್ರೇಮ್​ ಕೋಲಿ ಇತರರಿದ್ದರು.
ಭಾರಿ ಭದ್ರತೆ, ರಸ್ತೆಯಲ್ಲೇ ಟೆಂಟ್​
ನಗರದ ಜೀವನಾಡಿಯಂತ್ತಿರುವ ಜಿಲ್ಲಾಧಿಕಾರಿ ಕಚೇರಿ ಎದುರಿನ ರಸ್ತೆಯಲ್ಲಿಯೇ ತಳವಾರ ಸಮಾಜದವರು ತಾತ್ಕಾಲಿಕ ಟೆಂಟ್​ ಹೊಡೆದು, ಹೋರಾಟಕ್ಕೆ ಕುಳಿತರು. ಹೋರಾಟಕ್ಕೆ ಮುನ್ನ ಪೊಲೀಸರಿಂದ ವಿಶೇಷ ಬ್ಯಾರಿಕೇಡ ಅಳವಡಿಸಿ, ಹೋರಾಟವನ್ನು ನಿಯಂತ್ರಿಸುವ ಪ್ರಯತ್ನ ಮಾಡಲಾಯಿತು. ಆದರೆ ಹೋರಾಟಗಾರರು ಬ್ಯಾರಿಕೇಡ್​ ಪಕ್ಕಕ್ಕೆ ಸರಿಸಿ, ಡಿಸಿ ಕಚೇರಿ ಪ್ರವೇಶಕ್ಕೆ ಯತ್ನಿಸಿದರು. ಆದರೆ ಲ ಕೊಡದಿದ್ದಾಗ ದ್ವಾರ ಮುಚ್ಚಿ, ಹೋರಾಟ ಮುಂದುವರಿಸಿದರು.
"

ಎಸ್ಟಿ ಪ್ರಮಾಣ ನೀಡದ ಕಾರಣ ಸಮುದಾಯ ಮಕ್ಕಳಿಗೆ ತೊಂದರೆ ಆಗುತ್ತಿದೆ. ದೇಶದ ಎಲ್ಲ ಭಾಗದಲ್ಲೂ ನಮ್ಮ ಸಮುದಾಯಕ್ಕೆ ಎಸ್ಟಿ ಹಕ್ಕು ನೀಡಲಾಗುತ್ತಿದ್ದರೂ ಕಲಬುರಗಿಯಲ್ಲಿ ಮಾತ್ರ ಇದನ್ನು ತಡೆಯುತ್ತಿದ್ದಾರೆ ಎಂಬುದು ಅರ್ಥವಾಗುತ್ತಿಲ್ಲ. ತಕ್ಷಣ ಪ್ರಮಾಣಪತ್ರ ವಿತರಿಸಬೇಕು. ಆವರೆಗೂ ಹೋರಾಟ ಮುಂದುವರಿಯಲಿದೆ.

"

ಈ ಸರ್ಕಾರ ಸಮುದಾಯದ ಹಕ್ಕು ಕಸಿದುಕೊಂಡಿದೆ. ಹೀಗಾಗಿ ಉಗ್ರ ಸ್ವರೂಪದ ಹೋರಾಟಕ್ಕೆ ಇಳಿಯುವುದು ಅನಿವಾರ್ಯವಾಗಿದೆ. ಸರ್ಕಾರ ಪ್ರಮಾಣಪತ್ರ ವಿತರಣೆಗೆ ಸೂಕ್ತ ಕ್ರಮ ಕೈಗೊಳ್ಳದಿದ್ದಲ್ಲಿ ಹೋರಾಟ ಚುರುಕುಗೊಳಿಸಲಾಗುವುದು.

"

ತಳವಾರ ಸಮುದಾಯವನ್ನು ಎಸ್ಟಿಗೆ ಸೇರ್ಪಡೆ ಮಾಡುವವರೆಗೆ ಹೋರಾಟ ಮುಂದುವರಿಯಲಿದೆ. ಯಾದಗಿರಿ ಮತ್ತು ಕಲಬುರಗಿ ಜಿಲ್ಲೆಯ ಸಮುದಾಯ ಜನ ಹೋರಾಟದಲ್ಲಿ ಭಾಗಿಯಾಗಿದ್ದಾರೆ. ಕಳೆದ ಒಂದೂವರೆ ವರ್ಷದಿಂದ ಎಸ್ಟಿ ಸೌಲಭ್ಯ ಸ್ಥಗಿತಗೊಳಿಸಲಾಗಿದೆ.

"

ಜೇವರ್ಗಿಯಿಂದ ಪಾದಯಾತ್ರೆ ಮೂಲಕ ಆಗಮಿಸಿ ಜಿಲ್ಲಾಧಿಕಾರಿ ಕಚೇರಿ ಎದುರು ತಳವಾರ ಎಸ್​ಟಿ ಪ್ರಮಾಣ ಪತ್ರಕ್ಕೆ ಆಗ್ರಹಿಸಿ, ಹೋರಾಟ ಆರಂಭಿಸಿ ಒಂದು ವರ್ಷವಾಯಿತು. ಜಿಲ್ಲಾಡಳಿತಕ್ಕೆ ಕನಿಷ್ಠ ಕಳಕಳಿ ಇಲ್ಲ. ಆದ್ದರಿಂದಲೇ ಮಾಡು ಇಲ್ಲವೇ ಮಡಿ ಹೋರಾಟಕ್ಕೆ ಸಿದ್ಧತೆ ಮಾಡಿಕೊಂಡಿದ್ದು, ಈ ಭಾರಿ ಸ್ಪಂದಿಸಬೇಕು ಇಲ್ಲವೇ ಮಡಿಯಬೇಕು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net