ಹಿಂದೂ ಯುವತಿಯರಿಗೆ ‘ಮೈ ಹೂಂ ದುರ್ಗಾ’ ಅಭಿಯಾನ

ಹಿಂದೂ ಜನಜಾಗೃತಿ ಸಮಿತಿ ಆಯೋಜನೆ

The Hindu Janajagruti Samiti has organized the ‘Main Hoon Durga’ (I Am Durga) campaign for Hindu young women as part of the Navaratri festival.
ನವರಾತ್ರಿ ಹಬ್ಬದ ಅಂಗವಾಗಿ ಹಿಂದೂ ಯುವತಿಯರಿಗೆ ಹಿಂದೂ ಜನಜಾಗೃತಿ ಸಮಿತಿ ‘ಮೈ ಹೂಂ ದುರ್ಗಾ’ ಅಭಿಯಾನ ಆಯೋಜಿಸಿದೆ.
Published on: 

ಬೆಂಗಳೂರು : ನವರಾತ್ರಿ ಉತ್ಸವದ ಹಿನ್ನೆಲೆಯಲ್ಲಿ ಹಿಂದೂ ಜನಜಾಗೃತಿ ಸಮಿತಿ (ಹಿಂಜಾಸ) ವತಿಯಿಂದ ದೇಶಾದ್ಯಂತ ‘ಮೈ ಹೂಂ ದುರ್ಗಾ’ ಅಭಿಯಾನವನ್ನು ಹಮ್ಮಿಕೊಳ್ಳಲಾಗಿದೆ. ಈ ಅಭಿಯಾನದಡಿಯಲ್ಲಿ ವಿವಿಧ ನಗರಗಳಲ್ಲಿ ಹಿಂದೂ ಯುವತಿಯರು ಮತ್ತು ಮಹಿಳೆಯರಿಗಾಗಿ ಉಚಿತ ಆತ್ಮರಕ್ಷಣಾ ತರಬೇತಿ ಶಿಬಿರಗಳನ್ನು ಆಯೋಜಿಸಲಾಗುತ್ತಿದ್ದು, ಮಹಿಳಾ ಸುರಕ್ಷತೆಯ ಬಗ್ಗೆ ಜಾಗೃತಿ ಮೂಡಿಸುವ ವಿಡಿಯೋಗಳು ಹಾಗೂ ಪ್ರೇರಣಾದಾಯಿ ಶೌರ್ಯಗೀತೆಯನ್ನು ಬಿಡುಗಡೆ ಮಾಡಲಾಗುವುದು ಎಂದು ಹಿಂಜಾಸ ರಾಷ್ಟ್ರೀಯ ವಕ್ತಾರ ರಮೇಶ ಶಿಂದೆ ತಿಳಿಸಿದ್ದಾರೆ.

ಯುವತಿಯರು ಚುಡಾಯಿಸುವಿಕೆ, ಹಿಂಬಾಲಿಸುವುದು, ಆನ್‌ಲೈನ್ ಕಿರುಕುಳ, ಲೈಂಗಿಕ ದೌರ್ಜನ್ಯ, ಬ್ಲ್ಯಾಕ್‌ಮೇಲ್ ಹಾಗೂ ಹಿಂಸಾತ್ಮಕ ದಾಳಿಗಳಂತಹ ಹಲವು ಅಪಾಯಗಳನ್ನು ಎದುರಿಸುತ್ತಿದ್ದಾರೆ. ಅನ್ಯಧರ್ಮೀಯರು ಸುಳ್ಳು ಹೆಸರು ಮತ್ತು ನಕಲಿ ಗುರುತನ್ನು ನೀಡಿ ಹಿಂದೂ ಹೆಣ್ಣುಮಕ್ಕಳನ್ನು ಪ್ರೇಮದ ಬಲೆಗೆ ಬೀಳಿಸಿ ಲವ್ ಜಿಹಾದ್ ಮೂಲಕ ಅವರ ಮೇಲೆ ಲೈಂಗಿಕ ಶೋಷಣೆ ನಡೆಸುತ್ತಿದ್ದಾರೆ. ನಂತರದ ದಿನಗಳಲ್ಲಿ ಇಂತಹ ಪ್ರಕರಣಗಳಲ್ಲಿ ಬ್ಲ್ಯಾಕ್‌ಮೇಲ್ ಅಥವಾ ಮತಾಂತರಕ್ಕಾಗಿ ಒತ್ತಡ ಹೇರಲಾಗುತ್ತದೆ. ಈ ಕುರಿತು ಯುವತಿಯರಲ್ಲಿ ಜಾಗೃತಿ ಮೂಡಿಸುವುದು ಅತ್ಯಂತ ಅಗತ್ಯವಾಗಿದೆ. ಈ ಹಿನ್ನೆಲೆಯಲ್ಲಿ ಭಯಪಡದೆ, ಜಾಗೃತಿ, ಆತ್ಮವಿಶ್ವಾಸ ಮತ್ತು ಆತ್ಮರಕ್ಷಣೆಯ ಕೌಶಲ್ಯವನ್ನು ಬೆಳೆಸಿಕೊಳ್ಳಲು ಮೈ ಹೂಂ ದುರ್ಗಾ ಅಭಿಯಾನವನ್ನು ನಡೆಸಲಾಗುತ್ತಿದೆ ಎಂದು ಅವರು ವಿವರಿಸಿದ್ದಾರೆ.

ಈ ಆತ್ಮರಕ್ಷಣಾ ತರಬೇತಿ ಶಿಬಿರಗಳಲ್ಲಿ ದೈಹಿಕ ಪ್ರತಿರೋಧದ ತಂತ್ರಗಳನ್ನು ಕಲಿಸುವುದರ ಜೊತೆಗೆ, ಅಪಾಯದ ಸುಳಿವನ್ನು ಗುರುತಿಸುವುದು, ಸೂಕ್ತ ಸಮಯದಲ್ಲಿ ನಿರ್ಧಾರ ತೆಗೆದುಕೊಳ್ಳುವುದು ಹಾಗೂ ಮಾನಸಿಕ ಮತ್ತು ಆಧ್ಯಾತ್ಮಿಕವಾಗಿ ಸದೃಢರಾಗಿರಲು ಮಾರ್ಗದರ್ಶನ ನೀಡಲಾಗುವುದು. ಈ ತರಬೇತಿ ಶಿಬಿರಗಳಲ್ಲಿ 15 ವರ್ಷಕ್ಕಿಂತ ಮೇಲ್ಪಟ್ಟ ಯುವತಿಯರಿಗೆ ಪ್ರವೇಶ ಕಲ್ಪಿಸಲಾಗುವುದು. ಹೆಚ್ಚಿನ ಸಂಖ್ಯೆಯಲ್ಲಿ ಹಿಂದೂ ಯುವತಿಯರು ಈ ಅಭಿಯಾನದಲ್ಲಿ ಪಾಲ್ಗೊಂಡು ಉಚಿತ ಆತ್ಮರಕ್ಷಣಾ ತರಬೇತಿ ಪಡೆದುಕೊಳ್ಳಬೇಕು ಎಂದು ಸಮಿತಿ ಕರೆ ನೀಡಿದೆ. ನೋಂದಣಿ ಮತ್ತು ಹೆಚ್ಚಿನ ಮಾಹಿತಿಗೆ : www.hindujagruti.org/hindi/navratri-festival ಸಂಪರ್ಕಿಸಬಹುದು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net