ಡಿ.10 ರಿಂದ 13ರವರೆಗೆ ಕರುನಾಡ ಸಂಭ್ರಮ ಕಾರ್ಯಕ್ರಮ

ವಿವಿಧ ಧಾರ್ಮಿಕ, ಸಾಂಸ್ಕೃತಿಕ ಕಾರ್ಯಕ್ರಮಗಳು
A groundbreaking ceremony (*guddali pooje*) was held on Friday at the Kempegowda Playground in Srinivasnagar for the installation of a *pandal* for the 'Karunada Sambhrama' event.
ಕರುನಾಡ ಸಂಭ್ರಮ ಕಾರ್ಯಕ್ರಮದ ಪೆಂಡಾಲ್ ಅಳವಡಿಸಲು ಶ್ರೀನಿವಾಸನಗರದ ಕೆಂಪೇಗೌಡ ಆಟದ ಮೈದಾನದಲ್ಲಿ ಶುಕ್ರವಾರ ಗುದ್ದಲಿ ಪೂಜೆ ನೆರವೇರಿಸಲಾಯಿತು.
Published on: 

ಬೆಂಗಳೂರು : ಪ್ರತಿವರ್ಷದಂತೆ ಗೆಲುವು ಕನ್ನಡ ಗೆಳೆಯರ ಸಮಿತಿಯಿಂದ ಹಮ್ಮಿಕೊಳ್ಳುವ ಕರುನಾಡ ಸಂಭ್ರಮ ಬೃಹತ್ ಕಾರ್ಯಕ್ರಮವು ಡಿ.10ರಿಂದ 13ರವರೆಗೆ ನಡೆಯಲಿದೆ.

ಶ್ರೀನಿವಾಸನಗರದ ಶಂಕರ್‌ನಾಗ್ ವೃತ್ತದ ಬಳಿ ಇರುವ ಕೆಂಪೇಗೌಡ ಆಟದ ಮೈದಾನದಲ್ಲಿ ಪ್ರತಿದಿನ ಸಂಜೆ 6ಕ್ಕೆ ನಡೆಯಲಿರುವ ಕರುನಾಡ ಸಂಭ್ರಮದಲ್ಲಿ ವಿವಿಧ ಧಾರ್ಮಿಕ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿವೆ.

ಡಿ.10ಕ್ಕೆ ಶ್ರೀರಾಘವೇಂದ್ರ ಸ್ವಾಮಿ ವೈಭವೋತ್ಸವ ನಡೆಯಲಿದ್ದು, ಮುಳಬಾಗಿಲು ಶ್ರೀಪಾದರಾಜ ಮಠದ ಶ್ರೀಸುಜಯನಿಧಿ ಶ್ರೀಪಾದ ತೀರ್ಥ ಸ್ವಾಮೀಜಿ ಪಾಲ್ಗೊಳ್ಳಲಿದ್ದಾರೆ.

ಡಿ.11ಕ್ಕೆ ಶ್ರೀನಿವಾಸ ಕಲ್ಯಾಣೋತ್ಸವ ಜರುಗಲಿದ್ದು, ತಂಬಿಹಳ್ಳಿ ಮಾಧವ ತೀರ್ಥ ಮಠದ ಶ್ರೀ ವಿದ್ಯಾವಲ್ಲಭ ಮಾಧವ ತೀರ್ಥ ಸ್ವಾಮೀಜಿ ಪಾಲ್ಗೊಳ್ಳಲಿದ್ದಾರೆ.

ಡಿ.12ಕ್ಕೆ ಗಾಯಕ ಹಾಗೂ ಸಂಗೀತ ನಿರ್ದೇಶಕ ಸಾಧು ಕೋಕಿಲ ಮತ್ತು ತಂಡದವರಿಂದ ಸಂಗೀತ ಸಂಜೆ ನಡೆಯಲಿದೆ. ಇದೇ ಸಂದರ್ಭದಲ್ಲಿ ನಟಿ ಸುಧಾರಾಣಿಯವರಿಗೆ ಕರುನಾಡ ಸಂಭ್ರಮ ಪ್ರಶಸ್ತಿ ಪ್ರದಾನ ಮಾಡಲಾಗುವುದು.

ಡಿ.13ಕ್ಕೆ ಗಾಯಕ ನವೀನ್ ಸಜ್ಜು ಮತ್ತು ತಂಡದಿಂದ ಸಂಗೀತ ಸಂಜೆ ಆಯೋಜಿಸಲಾಗಿದೆ. ಅಂದು ನಟ ವಿಜಯ್ ರಾಘವೇಂದ್ರ ಅವರಿಗೆ ಕನ್ನಡ ಕಲಾಭೂಷಣ ಪ್ರಶಸ್ತಿ ಪ್ರದಾನ ಮಾಡಲಾಗುವುದು.