51 ಸಾವಿರಕ್ಕೂ ಅಧಿಕ ಯುವಕರಿಗೆ ಉದ್ಯೋಗ; ಕೇಂದ್ರ ಸರ್ಕಾರದ ರೋಜ್ಗಾರ್ ಮೇಳ

ಕೇಂದ್ರ ಸರ್ಕಾರದ ರೋಜ್ಗಾರ್ ಮೇಳದಲ್ಲಿ ನೂತನ ಆಭ್ಯರ್ಥಿಗಳಿಗೆ ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ನೇಮಕಾತಿ ಪತ್ರಗಳನ್ನು ವಿತರಿಸಿದರು. ಆದಾಯ ತೆರಿಗೆ ಪ್ರಧಾನ ಮುಖ್ಯ ಆಯುಕ್ತೆ ವಿದಿಶಾ ಕಲ್ರಾ ಮತ್ತಿತರರು ಉಪಸ್ಥಿತರಿದ್ದರು.
ಕೇಂದ್ರ ಸರ್ಕಾರದ ರೋಜ್ಗಾರ್ ಮೇಳದಲ್ಲಿ ನೂತನ ಆಭ್ಯರ್ಥಿಗಳಿಗೆ ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ನೇಮಕಾತಿ ಪತ್ರಗಳನ್ನು ವಿತರಿಸಿದರು. ಆದಾಯ ತೆರಿಗೆ ಪ್ರಧಾನ ಮುಖ್ಯ ಆಯುಕ್ತೆ ವಿದಿಶಾ ಕಲ್ರಾ ಮತ್ತಿತರರು ಉಪಸ್ಥಿತರಿದ್ದರು.
Published on

ಪ್ರಮುಖ ಮುಖ್ಯಾಂಶಗಳು

  • 51 ಸಾವಿರಕ್ಕೂ ಅಧಿಕ ಯುವಕರಿಗೆ ಉದ್ಯೋಗ
  • ಕೇಂದ್ರ ಸರ್ಕಾರದ ಮಹತ್ವಾಕಾಂಕ್ಷಿ ರೋಜ್ಗಾರ್ ಮೇಳ
  • ಆದಾಯ ತೆರಿಗೆ ಗೋವಾ ಕರ್ನಾಟಕ ವಲಯ ಕಚೇರಿಯಲ್ಲಿ ಕಾರ್ಯಕ್ರಮ

ಬೆಂಗಳೂರು: ಕೇಂದ್ರಸರ್ಕಾರದ ವಿವಿಧ ಹುದ್ದೆಗಳಿಗೆಆಯ್ಕೆಯಾಗಿರುವ ಅಭ್ಯರ್ಥಿಗಳಿಗೆನೇಮಕಾತಿ ಪತ್ರ ವಿತರಿಸುವ 20ನೇರೋಜ್ಗಾರ್ ಮೇಳವು ಶನಿವಾರ ನಡೆಯಿತು.

ಕರ್ನಾಟಕಮತ್ತು ಗೋವಾ ವಲಯದ ಆದಾಯ ತೆರಿಗೆಪ್ರಧಾನ ಮುಖ್ಯ ಆಯುಕ್ತರ ಕಚೇರಿಯಲ್ಲಿನಡೆದ ಕಾರ್ಯಕ್ರಮವನ್ನು ಕೇಂದ್ರಕಾರ್ಮಿಕ ಮತ್ತು ಉದ್ಯೋಗ ಖಾತೆರಾಜ್ಯ ಸಚಿವೆ ಶೋಭಾ ಕರಂದ್ಲಾಜೆಉದ್ಘಾಟಿಸಿದರು.

ಕೇಂದ್ರಸರ್ಕಾರದ ಮಹತ್ವಾಕಾಂಕ್ಷಿರೋಜ್ಗಾರ್ ಮೇಳದ 20ಆವೃತ್ತಿಯಲ್ಲಿದೇಶದ 45 ಸ್ಥಳಗಳಲ್ಲಿ51 ಸಾವಿರಕ್ಕೂಅಧಿಕ ಯುವಕರಿಗೆ ಹೊಸ ಉದ್ಯೋಗಾವಕಾಶದೊರೆತಿದ್ದು,ಇದುವರೆಗಿನಫಲಾನುಭವಿಗಳ ಸಂಖ್ಯೆ ಸುಮಾರು12.75 ಲಕ್ಷಕ್ಕೆತಲುಪಿತು.

ಈ ವೇಳೆಮಾತನಾಡಿದ ಸಚಿವೆ ಶೋಭಾ ಕರಂದ್ಲಾಜೆ,ರೋಜ್ಗಾರ್ ಮೇಳವು2047ರವಿಕಸಿತ ಭಾರತ ನಿರ್ಮಾಣದ ದೃಷ್ಟಿಕೋನದಭಾಗವಾಗಿದ್ದು,ಸರ್ಕಾರಿ ಉದ್ಯೋಗದಮೂಲಕ ಯುವಜನರನ್ನು ಸಬಲೀಕರಿಸುವಉದ್ದೇಶ ಹೊಂದಿದೆ.ಸರ್ಕಾರಿ ಸೇವೆಯನ್ನುಕೇವಲ ಜೀವನೋಪಾಯದ ಮಾರ್ಗವಾಗಿಪರಿಗಣಿಸದೆ,ದೇಶದ ಸೇವೆಗೆದೊರೆತಿರುವ ಅವಕಾಶವೆಂದು ಭಾವಿಸಬೇಕು.ಭಾರತದ ಅಭಿವೃದ್ಧಿಹಾಗೂ ಮುಂಬರುವ ವರ್ಷಗಳಲ್ಲಿಸಾರ್ವಜನಿಕ ಸೇವೆಯನ್ನು ಮತ್ತಷ್ಟುಬಲಪಡಿಸುವಲ್ಲಿ ಯುವಕರ ಪಾತ್ರಮಹತ್ವದ್ದಾಗಿದೆ ಎಂದರು.

ಕಾರ್ಯಕ್ರಮದಲ್ಲಿಪ್ರಧಾನಮಂತ್ರಿ ನರೇಂದ್ರ ಮೋದಿಅವರು ವಿಡಿಯೊ ಕಾನ್ಫರೆನ್ಸ್ಮೂಲಕ ದೇಶದ ವಿವಿಧೆಡೆ ಆಯೋಜಿಸಿದ್ದರೋಜ್ಗಾರ್ ಮೇಳಗಳಲ್ಲಿ ಪಾಲ್ಗೊಂಡಿದ್ದಅಭ್ಯರ್ಥಿಗಳನ್ನು ಉದ್ದೇಶಿಸಿಮಾತನಾಡಿದರು.

ಕಾರ್ಯಕ್ರಮದಲ್ಲಿಸಚಿವೆ ಶೋಭಾ ಕರಂದ್ಲಾಜೆ ಆದಾಯತೆರಿಗೆ ಇಲಾಖೆ ಸೇರಿದಂತೆ ವಿವಿಧಕೇಂದ್ರ ಸರ್ಕಾರಿ ಇಲಾಖೆಗಳಹುದ್ದೆಗಳಿಗೆ ನೇಮಕಾತಿಗೊಂಡಿರುವಸುಮಾರು 210ಅಭ್ಯರ್ಥಿಗಳಿಗೆನೇಮಕಾತಿ ಪತ್ರಗಳನ್ನು ವಿತರಿಸಿದರು.

ಸರ್ಕಾರಿ ಸೇವೆಯನ್ನು ಕೇವಲ ಉದ್ಯೋಗದ ಮಾರ್ಗವಾಗಿ ನೋಡದೆ, ಜನರ ಸೇವೆ ಹಾಗೂ ರಾಷ್ಟ್ರ ನಿರ್ಮಾಣಕ್ಕೆ ದೊರೆತಿರುವ ಅವಕಾಶವಾಗಿ ಪರಿಗಣಿಸಬೇಕು. ಪ್ರಾಮಾಣಿಕತೆ, ಶ್ರೇಷ್ಠತೆ ಮತ್ತು ಸಹಾನುಭೂತಿಯೊಂದಿಗೆ ಕರ್ತವ್ಯ ನಿರ್ವಹಿಸಬೇಕು. ಬದಲಾಗುತ್ತಿರುವ ಸಾರ್ವಜನಿಕ ಸೇವಾ ವ್ಯವಸ್ಥೆಗೆ ತಕ್ಕಂತೆ ನಿರಂತರ ಕಲಿಕೆ, ತಂತ್ರಜ್ಞಾನ ಅಳವಡಿಕೆ, ಹೊಂದಾಣಿಕೆ, ಸಹಕಾರ ಮತ್ತು ನವೀನತೆಗೆ ಆದ್ಯತೆ ನೀಡಬೇಕು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net