ಭೀಮಣ್ಣ ಖಂಡ್ರೆ ನಿಧನಕ್ಕೆ ಜಗದ್ಗುರು ಪಂಚಪೀಠಾಧೀಶ್ವರರ ಸಂತಾಪ

ಶತಾಯುಷಿ ಭೀಮಣ್ಣ ಖಂಡ್ರೆ ನಿಧನ
ಶತಾಯುಷಿ ಭೀಮಣ್ಣ ಖಂಡ್ರೆ ನಿಧನ
Published on

ಪ್ರಮುಖ ಮುಖ್ಯಾಂಶಗಳು

  • ಭೀಮಣ್ಣ ಖಂಡ್ರೆ ನಿಧನಕ್ಕೆ ಜಗದ್ಗುರು ಪಂಚಪೀಠಾಧೀಶ್ವರರು ಸಂತಾಪ
  • ಶ್ರೀರಂಭಾಪುರಿ, ಶ್ರೀಉಜ್ಜಯಿನಿ, ಶ್ರೀಕೇದಾರ, ಶ್ರೀ ಶ್ರೀಶೈಲ, ಶ್ರೀಕಾಶಿ
  • ಆತ್ಮಕ್ಕೆ ಶಾಂತಿ ದೊರೆಯವಂತೆ ಭಗವಂತನಲ್ಲಿ ಪ್ರಾರ್ಥನೆ

ಬೆಂಗಳೂರು:ಅಖಿಲ ಭಾರತವೀರಶೈವ ಲಿಂಗಾಯತ ಮಹಾಸಭೆಯ ಮಾಜಿಅಧ್ಯಕ್ಷರು,ಮಾಜಿಸಚಿವರು,ಸಮಾಜದ ಹಿರಿಯಧುರೀಣರಾಗಿದ್ದ ಭೀಮಣ್ಣ ಖಂಡ್ರೆನಿಧನಕ್ಕೆ ಜಗದ್ಗುರು ಪಂಚಪೀಠಾಧೀಶ್ವರರುತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ.

ಶ್ರೀರಂಭಾಪುರಿ ಜಗದ್ಗುರುಗಳು,ಶ್ರೀ ಉಜ್ಜಯಿನಿಜಗದ್ಗುರುಗಳು,ಶ್ರೀ ಕೇದಾರಜಗದ್ಗುರುಗಳು,ಶ್ರೀ ಶ್ರೀಶೈಲಜಗದ್ಗುರುಗಳು,ಶ್ರೀ ಕಾಶಿ ಉಭಯಜಗದ್ಗುರುಗಳು ತಮ್ಮ ಶೋಕ ಸಂದೇಶದಲ್ಲಿ,ವೀರಶೈವ ಲಿಂಗಾಯತಸಮಾಜದ ಸಂಘಟನೆಗಾಗಿ ತಮ್ಮ ಬಹುಪಾಲುಆಯುಷ್ಯವನ್ನು ಸವೆಸಿದ ಧೀಮಂತನಾಯಕರಾಗಿದ್ದ ಭೀಮಣ್ಣ ಖಂಡ್ರೆಲೋಕನಾಯಕ ಎಂಬ ಗೌರವಕ್ಕೆಪಾತ್ರರಾಗಿದ್ದರು.ಹಾನಗಲ್ಕುಮಾರಸ್ವಾಮಿಗಳು ಸ್ಥಾಪಿಸಿದವೀರಶೈವ ಮಹಾಸಭೆಗೆ ಹೊಸ ಕಾಯಕಲ್ಪಒದಗಿಸಿದ ಖಂಡ್ರೆಯವರನ್ನು ಸಮಾಜಎಂದಿಗೂ ಮರೆಯುವಂತಿಲ್ಲ.ಸಮಾಜದ ಭವಿಷ್ಯದಬಗ್ಗೆ ದೂರದೃಷ್ಟಿಯನ್ನಿರಿಸಿಕೊಂಡುಸಮನ್ವಯವನ್ನು ಸಾಧಿಸಿದ ಅಪರೂಪದನಾಯಕರಾಗಿದ್ದರು.ನಾಡಿನ ಎಲ್ಲಮಠ-ಪೀಠಗಳಬಗ್ಗೆ ಅಪಾರ ಶ್ರದ್ಧೆ ಅಭಿಮಾನಹೊಂದಿದ್ದ ಶ್ರೀಯುತರ ಪವಿತ್ರಆತ್ಮಕ್ಕೆ ಜಗದ್ಗುರು ರೇಣುಕಾದಿಪಂಚಾಚಾರ್ಯರು ಚಿರಶಾಂತಿ ಇತ್ತು,ಕುಟುಂಬ ವರ್ಗದವರಿಗೆ,ಅಭಿಮಾನಿಗಳಿಗದುಃಖವನ್ನು ಸಹಿಸಿಕೊಳ್ಳುವಶಕ್ತಿಯನ್ನು ಭಗವಂತ ಅನುಗ್ರಹಿಸಲಿಎಂದು ಸಂದೇಶದಲ್ಲಿ ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net