ಅಂತರ್ ಶಾಲಾ ಎಸ್‌ಐಪಿ ಅಬ್ಯಾಕಸ್ ಪ್ರತಿಭಾ ಸ್ಪರ್ಧೆ

ವಿದ್ಯಾರ್ಥಿಗಳ ಕಲಿಕೆಯ ವೇಗ, ಬೌದ್ಧಿಕ ಮಟ್ಟ ವೃದ್ಧಿ
Students and staff who participated in the SIP Abacus inter-school level competition
ಎಸ್​ಐಪಿ ಅಬ್ಯಾಕಸ್ ಅಂತರ ಶಾಲಾ ಮಟ್ಟದ ಸ್ಪರ್ಧೆಯಲ್ಲಿ ಪಾಲ್ಗೊಂಡಿದ್ದ ವಿದ್ಯಾರ್ಥಿಗಳು ಹಾಗೂ ಸಿಬ್ಬಂದಿಗಳು
Published on: 

ಬೆಂಗಳೂರು : ಎಸ್‌ಐಪಿ ಅಬಾಕಸ್ ಸಂಸ್ಥೆ, ಮಲ್ಲೇಶ್ವರದ 13ನೇ ಕ್ರಾಸ್‌ನ ಬಾಲಕಿಯರ ಸರ್ಕಾರಿ ಪದವಿಪೂರ್ವ ಕಾಲೇಜಿನಲ್ಲಿ ಭಾನುವಾರ ಆಯೋಜಿಸಿದ್ದ ಅಂತರ್ ಶಾಲಾ ಎಸ್‌ಐಪಿ ಅಬ್ಯಾಕಸ್ ಪ್ರತಿಭಾ ಸ್ಪರ್ಧೆಯಲ್ಲಿ ನಗರದ ವಿವಿಧ ಶಾಲೆಗಳ 5 ಸಾವಿರ ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.

ವಿವಿಧ ಅಂಶಗಳ ಕುರಿತು 45 ನಿಮಿಷದ ಲಿಖಿತ ಸ್ಪರ್ಧೆ ನಡೆಸಲಾಯಿತು. ಬೆಳಗ್ಗೆಯಿಂದ ಸಂಜೆವರೆಗೆ ಸ್ಪರ್ಧೆಗಳ ನಡೆದವು. ವಿದ್ಯಾರ್ಥಿಗಳನ್ನು 6 ತಂಡವನ್ನಾಗಿ ವಿಂಗಡಿಸಲಾಗಿತ್ತು. ಪಾಲಕರು ತಮ್ಮ ಮಕ್ಕಳ ಜೊತೆ ಆಗಮಿಸಿ ಕಾರ್ಯಕ್ರಮಕ್ಕೆ ಪ್ರೇರಣೆ ನೀಡಿದರು. ಆಯೋಜಕರು ಸ್ಪರ್ಧೆ ಮತ್ತು ಪರೀಕ್ಷೆಗೆ ಬೇಕಾದ ಅಗತ್ಯ ಪರಿಕರಗಳನ್ನು ವಿದ್ಯಾರ್ಥಿಗಳಿಗೆ ಒದಗಿಸಿದರು.

ಎಸ್‌ಐಪಿ ಅಬಾಕಸ್ ಎಂಬುದು ಕೌಶಲ ಅಭಿವೃದ್ಧಿ ಕಾರ್ಯಕ್ರಮವಾಗಿದ್ದು, ಮಗುವಿನ ಕಲಿಕಾ ಕೌಶಲದ ಜೊತೆಗೆ ವ್ಯವಸ್ಥಿತ ತರಬೇತಿಯಿಂದ ಮಗುವಿನ ಬೌದ್ಧಿಕ ಮಟ್ಟವನ್ನೂ ವೃದ್ಧಿಸಲಾಗುತ್ತದೆ. ಗಣಿತವನ್ನು ಸುಲಭವಾಗಿ ಮಕ್ಕಳಿಗೆ ಕಲಿಸುವ ಮೂಲಕ ಪರೀಕ್ಷೆಯಲ್ಲಿ ಗಣಿತದ ವಿಷಯದಲ್ಲಿ ನೂರಕ್ಕೆ ನೂರು ಅಂಕ ಪಡೆಯಲು ಮಗುವಿಗೆ ನೆರವಾಗುತ್ತಿದೆ. 6ರಿಂದ 12 ವಯಸ್ಸಿನ ಮಕ್ಕಳಿಗೆ ಅಂತಾರಾಷ್ಟ್ರೀಯ ಕಾರ್ಯಕ್ರಮವನ್ನು ಸಂಯೋಜಿಸಲಾಗುತ್ತದೆ. ಅಬಾಕಸ್, ಬ್ರೈನ್ ಜಿಮ್, ಸ್ಪೀಡ್ ರೈಟಿಂಗ್ ಬಗ್ಗೆ ಸಂಸ್ಥೆ ತರಬೇತಿ ನೀಡುತ್ತಿದೆ.

ಪಾಲ್ಗೊಂಡಿದ್ದ ಶಾಲೆಗಳು

ಎಂ.ಇ.ಎಸ್. ಕಿಶೋರ್ ಕೇಂದ್ರ ಪಬ್ಲಿಕ್ ಸ್ಕೂಲ್, ಹಿಮಾಂಶು ಜ್ಯೋತಿ ಕಲಾಪೀಠ, ಕ್ರೈಸ್ಟ್ ದಿ ಕಿಂಗ್ ಪಬ್ಲಿಕ್ ಸ್ಕೂಲ್, ಕೆ.ಎಲ್.ಇ. ಸೊಸೈಟಿ, ರಾಜಾಜಿನಗರ, ವಿದ್ಯಾ ವರ್ಧಕ ಸಂಘ, ನ್ಯಾಷನಲ್ ಪಬ್ಲಿಕ್ ಸ್ಕೂಲ್, ರಾಜಾಜಿನಗರ, ಎಸ್.ಜೆ.ಆರ್. ಪಬ್ಲಿಕ್ ಸ್ಕೂಲ್, ಎಸ್. ಕದಂಬಿ ವಿದ್ಯಾ ಕೇಂದ್ರ, ಕಾರ್ಮೆಲ್ ಹೈಸ್ಕೂಲ್, ಡಿವೈನ್ ಇಂಗ್ಲಿಷ್ ಸ್ಕೂಲ್, ವಿ.ಎಲ್.ಎಸ್. ಇಂಟರ್‌ನ್ಯಾಷನಲ್ ಸ್ಕೂಲ್,

ಎಸ್.ಜಿ. ಇಂಟರ್‌ನ್ಯಾಷನಲ್ ಪಬ್ಲಿಕ್ ಸ್ಕೂಲ್ನ 5 ಸಾವಿರಕ್ಕೂ ಹೆಚ್ಚಿನ ವಿದ್ಯಾರ್ಥಿಗಳು ಸ್ಪರ್ಧೆಯಲ್ಲಿ ಭಾಗಿಯಾಗಿದ್ದರು. ಇಲ್ಲಿ ಆಯ್ಕೆಯಾದವರು ರಾಜ್ಯ ಮಟ್ಟಕ್ಕೆ ಹೋಗಲಿದ್ದಾರೆ.

Students and parents who participated in the inter-school level Abacus competition
ಅಂತರ್ ಶಾಲಾ ಮಟ್ಟದ ಅಬ್ಯಾಕಸ್ ಸ್ಪರ್ಧೆಯಲ್ಲಿ ಪಾಲ್ಗೊಂಡಿದ್ದ ವಿದ್ಯಾರ್ಥಿಗಳು ಮತ್ತು ಪೋಷಕರು
ಎಸ್‌ಐಪಿ ಅಬಾಕಸ್ ಸಂಸ್ಥೆ 2003ರಿಂದ ಕಾರ್ಯನಿರ್ವಹಿಸುತ್ತಿದೆ. ದೇಶದ ಸುಮಾರು 300 ನಗರಗಳಲ್ಲಿ ಗಣಿತದ ವಿವಿಧ ವಿಷಯಗಳ ಕುರಿತು ಬೌದ್ಧಿಕ ಮಟ್ಟ ಹೆಚ್ಚಿಸಲು ನಿರಂತರವಾಗಿ ಲಿಖಿತ ಸ್ಪರ್ಧೆ ಆಯೋಜಿಸಿಕೊಂಡು ಬರುತ್ತಿದ್ದೇವೆ. 11ನೇ ಆವೃತ್ತಿಯ ಅಂಕಗಣಿತ ಪ್ರತಿಭಾ ಸ್ಪರ್ಧೆ ಇದಾಗಿದ್ದು, ಈವರೆಗೆ ದೇಶಾದ್ಯಂತ 10 ಲಕ್ಷಕ್ಕೂ ಹೆಚ್ಚು ವಿದ್ಯಾರ್ಥಿಗಳು ಸ್ಪರ್ಧೆಯಲ್ಲಿ ಪಾಲ್ಗೊಂಡಿದ್ದಾರೆ. ವಿಭಾಗೀಯ, ರಾಜ್ಯ, ರಾಷ್ಟ್ರೀಯ ಮಟ್ಟದ ಪ್ರತಿಭಾ ಸ್ಪರ್ಧೆಯನ್ನು ಹಂತ ಹಂತವಾಗಿ ಆಯೋಜಿಸಲಾಗುತ್ತಿದೆ. ಅತ್ಯುತ್ತಮ ಬೌದ್ಧಿಕ ಮಟ್ಟ ಪ್ರದರ್ಶಿಸಿದವರಿಗೆ ಬಹುಮಾನ, ಪ್ರಮಾಣ ಪತ್ರ ವಿತರಿಸಲಾಗುವುದು.
ನರೇಂದ್ರ, ಕರ್ನಾಟಕ ಗೋವಾ ಎಸ್‌ಐಪಿ ಅಬ್ಯಾಕಸ್ ಸಂಸ್ಥೆ ಮುಖ್ಯಸ್ಥ
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net