ವೈದ್ಯಕೀಯ ಸಂಶೋಧನೆಯಲ್ಲಿ ಭಾರತ ವೇಗವಾಗಿ ಬೆಳೆಯುತ್ತಿದೆ

ಸಂಸದ ಸಿ. ಎನ್. ಮಂಜುನಾಥ್
ಸಂಸದ ಸಿ. ಎನ್. ಮಂಜುನಾಥ್
Published on
ಬೆಂಗಳೂರು: ಭಾರತ ಆರೋಗ್ಯ ರಕ್ಷಣಾ ವ್ಯವಸ್ಥೆಯನ್ನು ಬಲಪಡಿಸುತ್ತಿರುವ ಸಂದರ್ಭದಲ್ಲಿ ಇಂತಹ ವೇದಿಕೆಗಳು, ದೇಶವನ್ನು ವೈದ್ಯಕೀಯ ಶಿಕ್ಷಣ, ಸಂಶೋಧನೆ ಮತ್ತು ರೋಗಿಗಳ ಉತ್ತಮ ಗುಣಮಟ್ಟದ ಆರೈಕೆಯ ಜಾಗತಿಕ ಕೇಂದ್ರವನ್ನಾಗಿ ರೂಪಿಸುವಲ್ಲಿ ನಿರ್ಣಾಯಕ ಪಾತ್ರ ವಹಿಸುತ್ತದೆ ಎಂದು ಸಂಸದ ಸಿ. ಎನ್. ಮಂಜುನಾಥ್ ಹೇಳಿದ್ದಾರೆ.
ಬೆಂಗಳೂರು ನೇತ್ರೌಷಧ ಸೊಸೈಟಿಯ (ಬಿಓಎಸ್) ಸಹಯೋಗದಲ್ಲಿ ಕರ್ನಾಟಕ ನೇತ್ರೌಷಧ ಸೊಸೈಟಿ (ಕೆಓಎಸ್) ನಗರದಲ್ಲಿ ಆಯೋಜಿಸಿದ್ದ ‘ಫ್ಯಾಕೋ ಫೆಸ್ಟಿವಲ್-2026’ ಹಾಗೂ ಆಯೋಜನೆ; ಭಾರತದ ಮುಂದಿನ ಪೀಳಿಗೆಯ ನೇತ್ರ ಶಸ್ತ್ರಚಿಕಿತ್ಸಾ ಆವಿಷ್ಕಾರಗಳ ಪ್ರದರ್ಶನ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಕಣ್ಣಿನ ಆರೈಕೆ ಮತ್ತು ವೈದ್ಯಕೀಯ ಸಂಶೋಧನೆಯಲ್ಲಿ ಭಾರತದ ಬೆಳೆಯುತ್ತಿದೆ. "ಪ್ರಸ್ತುತ ನಿರಂತರ ಕಲಿಕೆ ಮತ್ತು ಜಾಗತಿಕ ತಜ್ಞರ ಜೊತೆಗಿನ ಅರ್ಥಪೂರ್ಣ ಸಹಯೋಗಕ್ಕೆ ಅನುವು ಮಾಡಿಕೊಡುವ ಫ್ಯಾಕೋ ಸಮ್ಮೇಳ ಹೆಚ್ಚಿನ ವೇದಿಕೆಗಳ ಅಗತ್ಯವಿದೆ. ಇಂತಹ ವೇದಿಕೆಗಳು ವೈದ್ಯರು ಅಂತಾರಾಷ್ಟ್ರೀಯ ಮಟ್ಟದ ಉತ್ತಮ ಪದ್ಧತಿಗಳು ಮತ್ತು ಆಧುನಿಕ ತಂತ್ರಜ್ಞಾನಗಳೊಂದಿಗೆ ಸಬಲರಾಗಲು ಸಹಾಯ ಮಾಡುತ್ತವೆ ಎಂದರು.
ಈ ಸಮ್ಮೇಳನವು ನೇತ್ರವಿಜ್ಞಾನ ವಿಭಾಗದ ಕುರಿತು ಜ್ಞಾನ ಹಂಚಿಕೆ, ಶಸ್ತ್ರಚಿಕಿತ್ಸಾ ಕೌಶಲಗಳನ್ನು ಸುಧಾರಿಸುವುದು ಮತ್ತು ಕಣ್ಣಿನ ಪೊರೆ (ಕೆಟರಾಕ್ಟ್) ಹಾಗೂ ವಕ್ರೀಕಾರಕ ನೇತ್ರ ಶಸ್ತ್ರಚಿಕಿತ್ಸೆಯಲ್ಲಿನ ಹೊಸ ಆವಿಷ್ಕಾರಗಳನ್ನು ಪ್ರದರ್ಶಿಸುವತ್ತ ಗಮನ ಹರಿಸಿದೆ. ಭಾರತ ಸೇರಿ ವಿಶ್ವದಾದ್ಯಂತ ಇರುವ ಪ್ರಮುಖ ನೇತ್ರ ತಜ್ಞರು, ಶಸ್ತ್ರಚಿಕಿತ್ಸಕರು ಮತ್ತು ವೈದ್ಯಕೀಯ ತಂತ್ರಜ್ಞಾನದ ಪರಿಣತರು ವಿಚಾರ ಮಂಡಿಸಿದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net