ರೇಸ್‌ಕೋರ್ಸ್ ರಸ್ತೆ ಕಾಮಗಾರಿ ಕಿರಿಕಿರಿ

ಸವಾರರು ಸುತ್ತಿ ಬಳಸಿ ಸಾಗಬೇಕಾದ ಪರಿಸ್ಥಿತಿ
Due to ongoing white-topping work on Race Course Road, vehicles are permitted to move on one side only.
ರೇಸ್​ ಕೋರ್ಸ್​ ರಸ್ತೆಯಲ್ಲಿ ವೈಟ್ ಟಾಪಿಂಗ್ ಕಾಮಗಾರಿ ನಡೆಯುತ್ತಿರುವ ಹಿನ್ನೆಲೆಯಲ್ಲಿ ವಾಹನಗಳು ಒಂದು ಬದಿಯಲ್ಲಿ ಮಾತ್ರ ಸಂಚರಿಸಲು ಅವಕಾಶ ನೀಡಲಾಗಿದೆ.
Published on: 

ಪ್ರಶಾಂತ ರಿಪ್ಪನ್​ಪೇಟೆ, ಬೆಂಗಳೂರು : ಬಿಬಿಎಂಪಿ 5 ಭಾಗವಾಗಿ ಗ್ರೇಟರ್ ಬೆಂಗಳೂರು ಪ್ರಾಧಿಕಾರ ಅಸ್ತಿತ್ವಕ್ಕೆ ಬಂದಿದ್ದು, ನಗರದ ಮೂಲಸೌಕರ್ಯದ ಹೊಣೆಗಾರಿಕೆ ನಿರ್ವಹಿಸುತ್ತಿದೆ. ಜಿಬಿಎ ನಗರದ ಹಲವು ರಸ್ತೆಗಳ ವೈಟ್ ಟ್ಯಾಪಿಂಗ್ ಕಾಮಗಾರಿಯನ್ನು ಕೈಗೆತ್ತಿಕೊಂಡಿದ್ದು, ಬೆಂಗಳೂರಿನ ಹೃದಯ ಭಾಗದಲ್ಲಿರುವ ರೇಸ್‌ಕೋರ್ಸ್ ರಸ್ತೆಯ ವೈಟ್ ಟ್ಯಾಪಿಂಗ್ ಕಾಮಗಾರಿ ಕಳೆದ ಕೆಲ ದಿನಗಳಿಂದ ನಡೆಯುತ್ತಿದೆ. ಇದರಿಂದಾಗಿ ಸುತ್ತಮುತ್ತ ಓಡಾಡುವ ವಾಹನ ಸವಾರರು, ಪ್ರಯಾಣಿಕರು ತೀವ್ರ ಕಿರಿಕಿರಿ ಅನುಭವಿಸುವಂತಾಗಿದೆ.

ಯಾವುದೇ ರಸ್ತೆಯ ಕಾಂಕ್ರೀಟ್ ಕಾಮಗಾರಿ ಕೇವಲ ರಸ್ತೆಗೆ ಸಂಬಂಧಿಸಿರುವುದಿಲ್ಲ. ಬದಲಾಗಿ ದೀರ್ಘಾವಧಿ ಕಾಮಗಾರಿಯಾಗಿರುವುದರಿಂದ ರಸ್ತೆಯ ಇಕ್ಕೆಲಗಳಲ್ಲಿ ಬರುವ ನೀರು ಸರಬರಾಜು ಪೈಪ್‌ಗಳು, ಒಳಚರಂಡಿ ಪೈಪ್‌ಗಳು, ಸ್ಯಾನಿಟರಿ ಕನೆಕ್ಷನ್, ವಿದ್ಯುತ್, ಟೆಲಿೆನ್ ಕೇಬಲ್ ಹೀಗೆ ವಿವಿಧ ಸೌಲಭ್ಯಗಳನ್ನು ಶ್‌ಟಿ ಮಾಡುವುದರ ಜೊತೆಗೆ ಕಾಮಗಾರಿಯನ್ನು ಪೂರ್ಣಗೊಳಿಸಬೇಕಾದ ಅನಿವಾರ್ಯತೆ ಇರುತ್ತದೆ. ಜಿಬಿಎ ಅಧಿಕಾರಿಗಳು ಹೇಳುವ ಪ್ರಕಾರ ನಗರದ ಪ್ರಮುಖ ಸಂಚಾರ ಮಾರ್ಗವಾಗಿರುವ ರೇಸ್‌ಕೋರ್ಸ್ ರಸ್ತೆಯಲ್ಲಿ ಸಂಚಾರ ಪೊಲೀಸರ ಅನುಮತಿಯಂತೆ ಕಾಮಗಾರಿ ಮಾಡಲಾಗುತ್ತಿದ್ದು, ಪೊಲೀಸರು ನೀಡಿರುವ ಒಟ್ಟು 6 ಹಂತಗಳ ಅನುಮತಿಯಲ್ಲಿ 4 ಹಂತದ ಕಾಮಗಾರಿ ಈಗಾಗಲೇ ಮುಕ್ತಾಯವಾಗಿದೆ. ಇನ್ನುಳಿದ 2 ಹಂತದ ಕಾಮಗಾರಿಯನ್ನು ಕೂಡಾ ನಿಗಧಿತ ಅವಧಿಯೊಳಗೆ ಮುಕ್ತಾಯ ಮಾಡಲಾಗುವುದು. ಆದರೆ ಸಿಮೆಂಟ್ ರಸ್ತೆಯಾಗಿರುವುದರಿಂದ ಕ್ಯೂರಿಂಗ್ ಮಾಡಲು ಕನಿಷ್ಟ 15 ರಿಂದ 20 ದಿನ ಬೇಕಾಗುತ್ತದೆ. ಅದಾದ ನಂತರ ಸಾರ್ವಜನಿಕ ಸಂಚಾರಕ್ಕೆ ಮುಕ್ತಗೊಳಿಸುವುದಾಗಿ ತಿಳಿಸಿದ್ದಾರೆ. ಈಗಾಗಲೇ ಕಾಮಗಾರಿ ಆರಂಭವಾಗಿ ತಿಂಗಳು ಕಳೆದಿದ್ದು, 60 ದಿನಗಳ ಅವಧಿಯಂತೆ ಇನ್ನೂ ಒಂದು ತಿಂಗಳ ಅವಧಿ ಬಾಕಿ ಇದೆ. ಈಗಿರುವ ಡೆಡ್‌ಲೈನ್ ಪ್ರಕಾರ ನ.10ಕ್ಕೆ ಕಾಮಗಾರಿ ಪೂರ್ಣಗೊಳಿಸಬೇಕಿದ್ದು, ಅಷ್ಟರೊಳಗೆ ಕಾಮಗಾರಿ ಪೂರ್ಣಗೊಳಿಸುವುದಾಗಿ ಅಧಿಕಾರಿಗಳು ತಿಳಿಸಿದ್ದಾರೆ.

Due to roadworks, motorists are compelled to take a detour.
ರಸ್ತೆ ಕಾಮಗಾರಿ ಹಿನ್ನೆಲೆಯಲ್ಲಿ ವಾಹನ ಸವಾರರು ಸುತ್ತಿ ಬಳಸಿ ಹೋಗಬೇಕಾದ ಅನಿವಾರ್ಯತೆ ಉಂಟಾಗಿದೆ.

ಕಿಲೋಮೀಟರ್‌ಗಟ್ಟಲೆ ಸುತ್ತುವ ಅನಿವಾರ್ಯತೆ:

ಆನಂದ್‌ರಾವ್ ಸರ್ಕಲ್‌ನಿಂದ ಕೆ.ಆರ್.ಸರ್ಕಲ್ ಕಡೆಗೆ ಹೋಗುವ ಮಾರ್ಗದಲ್ಲಿ ಮೌರ್ಯ ಸರ್ಕಲ್‌ನಿಂದ ರೇಸ್‌ಕೋರ್ಸ್ ಪ್ರವೇಶದ್ವಾರದವರೆಗಿನ ಸಿಗ್ನಲ್‌ವರೆಗೆ ವೈಟ್ ಟ್ಯಾಪಿಂಗ್ ಕಾಮಗಾರಿ ನಡೆಯುತ್ತಿದೆ. ಗಾಂಧಿನಗರದ ಕಡೆಯಿಂದ ಬರುವ ವಾಹನಗಳು ಮೌರ್ಯ ಸರ್ಕಲ್ ಬಳಿ ಎಡಕ್ಕೆ ಅಥವಾ ಬಲಕ್ಕೆ ತಿರುಗಿ 2-3 ಕಿ.ಮೀ. ಸುತ್ತಿಕೊಂಡು ಶಿವಾನಂದ ಸರ್ಕಲ್ ಕಡೆಗೆ ಸಾಗಬೇಕು. ನೇರರಸ್ತೆ ಕ್ಲೋಸ್ ಆಗಿರುವುದರಿಂದ ಗಾಂಧಿನಗರದ ರಸ್ತೆಯಲ್ಲಿ ಕಿಲೋಮೀಟರ್‌ಗಟ್ಟಲೆ ಸಂಚಾರ ಸಿಕ್ಕು ಉಂಟಾಗುತ್ತಿದೆ. ಶಿವಾನಂದ ಸರ್ಕಲ್ ಕಡೆಯಿಂದ ಕಾಂಗ್ರೆಸ್ ಕಚೇರಿ ಮುಂಭಾಗದ ರಸ್ತೆಯನ್ನು ಬಳಸಿಕೊಂಡು ಆನಂದರಾವ್ ಸರ್ಕಲ್ ಮೂಲಕ ಮೆಜೆಸ್ಟಿಕ್ ಕಡೆ ಹೋಗುವವರು; ಚಾಲುಕ್ಯ ಸರ್ಕಲ್ ಮೂಲಕ ಮಹಾರಾಣಿ ಕಾಲೇಜು ಅಂಡರ್‌ಪಾಸ್ ಬಳಸಿಕೊಂಡು ಮೈಸೂರು ಬ್ಯಾಂಕ್ ವೃತ್ತದ ಕಡೆ ಸಾಗಿ, ಕೆ.ಜಿ.ರಸ್ತೆ ಮೂಲಕ ಮೆಜೆಸ್ಟಿಕ್ ತಲುಪಬೇಕಾದ ಅನಿವಾರ್ಯತೆ ಇದೆ. ಅಥವಾ ಶಿವಾನಂದ ಸರ್ಕಲ್‌ನಲ್ಲಿ ಬಲಕ್ಕೆ ತಿರುವು ಪಡೆದು ಶೇಷಾದ್ರಿಪುರ, ಸೆಂಟ್ರಲ್ ಮೂಲಕ ಮೆಜೆಸ್ಟಿಕ್ ಹೋಗಬೇಕಾಗಿದೆ. ಮೆಜೆಸ್ಟಿಕ್ ಸುತ್ತಮುತ್ತ ವಾಹನ ದಟ್ಟಣೆ ಹೆಚ್ಚಾಗಿರುವುದರಿಂದ, ಅದರಲ್ಲೂ ರೇಸ್‌ಕೋರ್ಸ್ ರಸ್ತೆಯ ಸುತ್ತಮುತ್ತ ಖಾಸಗಿ ಬಸ್‌ಗಳ ಸಂಚಾರ ಹೆಚ್ಚಾಗಿರುವುದರಿಂದ ರಸ್ತೆ ಕಾಮಗಾರಿಯನ್ನು ಆದಷ್ಟು ಬೇಗ ಮುಗಿಸುವ ಅಗತ್ಯವಿದೆ.

ರೇಸ್‌ಕೋರ್ಸ್ ರಸ್ತೆ ಇನ್ಮುಂದೆ ಅಂಬರೀಷ್ ರಸ್ತೆ

ರೇಸ್‌ಕೋರ್ಸ್ ರಸ್ತೆಗೆ ಜಿಬಿಎ ಎಂ.ಎಚ್.ಅಂಬರೀಷ್ ರಸ್ತೆ ಎಂದು ನಾಮಕರಣ ಮಾಡಿದ್ದು, ಕಾಮಗಾರಿ ಮುಗಿದ ನಂತರ ಈ ರಸ್ತೆಗೆ ಅಧಿಕೃತವಾಗಿ ಅಂಬರೀಷ್ ರಸ್ತೆ ಎಂಬ ನಾಮಲಕವನ್ನು ಹಾಕಿ ಸಾರ್ವಜನಿಕರಿಗೆ ಸಂಚಾರ ಮುಕ್ತಗೊಳಿಸುವುದಾಗಿ ಜಿಬಿಎ ಮೂಲಗಳು ತಿಳಿಸಿವೆ.

ಬಹು ಸಂಚಾರವುಳ್ಳ ರೇಸ್‌ಕೋರ್ಸ್ ರಸ್ತೆಗೆ ಮೆಜೆಸ್ಟಿಕ್‌ನಿಂದ ಹೆಬ್ಬಾಳ, ಯಲಹಂಕ ಕಡೆಗಳಿಗೆ ಹೋಗುವ ಹೆಚ್ಚಿನ ಬಸ್ಸು ಮತ್ತಿತರ ವಾಹನಗಳು ಬರುತ್ತವೆ. ಮೆಜೆಸ್ಟಿಕ್ ಕಡೆಯ ಮೇಲ್ಸೇತುವೆ ಮತ್ತಿತರ ಮೂರ್ನಾಲ್ಕು ರಸ್ತೆಗಳು ಸೇರುವ ಜಂಕ್ಷನ್ ರೇಸ್‌ಕೋರ್ಸ್ ರಸ್ತೆಗೆ ಹೊಂದಿಕೊಂಡಿದ್ದು, ಇಲ್ಲಿನ ವಾಹನ ದಟ್ಟಣೆಯನ್ನು ಡೈವರ್ಟ್ ಮಾಡಿ ಕಾಮಗಾರಿ ಪೂರ್ಣಗೊಳಿಸುವುದು ದೊಡ್ಡ ಸವಾಲು.

The road next to the Race Course has been named 'Actor M.H. Ambarish Road'.
ರೇಸ್ ಕೋರ್ಸ್​ ಪಕ್ಕದಲ್ಲಿದ್ದ ರಸ್ತೆಗೆ ನಟ ಎಂ.ಎಚ್.ಅಂಬರೀಶ್ ರಸ್ತೆ ಎಂದು ಹೆಸರಿಡಲಾಗಿದೆ.
ರೇಸ್‌ಕೋರ್ಸ್ ರಸ್ತೆಯಲ್ಲಿ ಇನ್ನು ಮುಂದೆ ಖಾಸಗಿ ವಾಹನಗಳ ಪಾರ್ಕಿಂಗ್‌ಗೆ ಅವಕಾಶ ನೀಡುವುದಿಲ್ಲ. ಅದಕ್ಕಾಗಿ ಪಾದಚಾರಿಗಳಿಗೆ ಅನುಕೂಲವಾಗುವಂತೆ ುಟ್‌ಪಾತ್ ನಿರ್ಮಾಣವನ್ನು ಮಾಡುತ್ತಿದ್ದೇವೆ. ಒಂದು ಬದಿಯಲ್ಲಿ ಮಾತ್ರ ಪಾರ್ಕಿಂಗ್‌ಗೆ ಅವಕಾಶ ಇರುತ್ತದೆ. ಕಾಮಗಾರಿಯನ್ನು ಸ್ವತಃ ಪರಿಶೀಲನೆ ನಡೆಸಿ ವೇಗವಾಗಿ ಮುಗಿಸುಂತೆ ಅಧಿಕಾರಿಗಳಿಗೆ ಸೂಚಿಸಿದ್ದೇನೆ.
ದಿನೇಶ್ ಗುಂಡೂರಾವ್, ಶಾಸಕರು

ಯಾವುದೇ ರೋಡ್ ರಿಪೇರಿ ಅಥವಾ ಕಾಮಗಾರಿ ನಡೆಯುವಾಗ ಸಾರ್ವಜನಿಕರಿಗೆ ತೊಂದರೆಯಾಗುವುದು ಸಹಜ. ರೇಸ್‌ಕೋರ್ಸ್ ರಸ್ತೆ ಕೆಲಸದಿಂದ ಟ್ರಾಫಿಕ್ ಜಾಮ್ ಹೆಚ್ಚಾಗಿದೆ. ವ್ಯಾಪಾರದ ಮೇಲೆ ಕೂಡ ಪರಿಣಾಮ ಬೀರಿದೆ.

ವೆಂಕಟೇಶ್, ಬೀದಿಬದಿ ವ್ಯಾಪಾರಿ

ಶಾಶ್ವತ ಕಾಮಗಾರಿ ಮಾಡುವಾಗ ಅಡಚಣೆಗಳಿರುತ್ತವೆ. ಈಗಾಗಲೇ ಯುಟಿಲಿಟಿಗಳ ಶಿಪ್ಟಿಂಗ್ ಆಗಿದೆ. ಒಂದು ಕಡೆಯಲ್ಲಿ ಬಹುತೇಕ ಕಾಂಕ್ರೀಟ್ ಕೆಲಸ ಮುಗಿದಿದೆ. ಏಕಮುಖ ಸಂಚಾರವನ್ನು ಇರಿಸಿಕೊಂಡು ಕಾಮಗಾರಿ ಮಾಡುತ್ತಿದ್ದೇವೆ. ಇತರೆ ಇಲಾಖೆಯ ಸಹಕಾರದೊಂದಿಗೆ ನಮಗೆ ಇರುವ ಸಮಯ ಮಿತಿಯಲ್ಲಿ ಕಾಮಗಾರಿ ಮುಗಿಸುತ್ತೇವೆ.
ನಾಗೇಂದ್ರ, ಪ್ರಾಜೆಕ್ಟ್ ಇನ್‌ಚಾರ್ಜ್

ರಸ್ತೆ ಕಾಮಗಾರಿಗಾಗಿ ರಸ್ತೆ ಬಂದ್ ಮಾಡಿದ್ದಾರೆ. ಮೆಜೆಸ್ಟಿಕ್ ಹೋಗೋಕೆ 3 ಕಿ.ಮೀ.ಸುತ್ತಬೇಕಾಗಿದೆ. ಈ ರಸ್ತೆಯಲ್ಲಿರುವ ಗ್ರಾಹಕರು ಓಲಾ, ಊಬರ್ ಆನ್‌ಲೈನ್ ಬುಕ್ ಮಾಡುವುದಕ್ಕೂ ಆಗುತ್ತಿಲ್ಲ. ಬ್ಯುಸಿನೆಸ್‌ಗೆ ತೊಂದರೆ ಆಗಿದೆ.

ರಾಜು, ಆಟೋ ಚಾಲಕ

ಮುಖ್ಯರಸ್ತೆಯನ್ನು ಕ್ಲೋಸ್ ಮಾಡಿರುವುದರಿಂದ ವ್ಯಾಪಾರ ಕಡಿಮೆ ಆಗಿದೆ. ಗಿರಾಕಿಗಳು ಬರ್ತಿಲ್ಲ. ಇನ್ನೊಂದು ಕಡೆ ುಲ್ ಟ್ರಾಫಿಕ್ ಜಾಮ್. ಕಾಮಗಾರಿ ಅನಿವಾರ್ಯ ಸರಿ ಆದರೆ ಆದಷ್ಟು ಬೇಗ ಮುಗಿಸಿದರೆ ಒಳ್ಳೆಯದು.
ಶಶಿಕುಮಾರ್, ರಸ್ತೆಬದಿ ವ್ಯಾಪಾರಿ
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net