ಸಿಸಿಬಿ ಇನ್‌ಸ್ಪೆಕ್ಟರ್ ಮೇಲೆ ಐಎಎಸ್ ಅಧಿಕಾರಿ ಹಲ್ಲೆ

ಆಂಧ್ರಪ್ರದೇಶದ ಅಧಿಕಾರಿ ವಿರುದ್ಧ ಎ್ಐಆರ್ , ಪಬ್ ತಪಾಸಣೆ ವೇಳೆ ಗಲಾಟೆ
Vikram IAS
Vikram IAS
Published on: 

ಬೆಂಗಳೂರು: ಪಬ್‌ಗಳ ತಪಾಸಣೆ ವೇಳೆ ಸಿಸಿಬಿ ಇನ್‌ಸ್ಪೆಕ್ಟರ್ ಮೇಲೆ ಆಂಧ್ರಪ್ರದೇಶದ ಐಎಎಸ್ ಅಧಿಕಾರಿ ಅವಾಚ್ಯ ಶಬ್ದಗಳಿಂದ ನಿಂದಿಸಿ, ಹಲ್ಲೆ ಮಾಡಿರುವುದು ಬೆಳಕಿಗೆ ಬಂದಿದೆ.

ಆಂಧ್ರಪ್ರದೇಶದ ಕುಪ್ಪಂ ಪ್ರದೇಶಾಭಿವೃದ್ಧಿ ಪ್ರಾಧಿಕಾರದ ಯೋಜನಾ ನಿರ್ದೇಶಕರಾಗಿರುವ ವಿಕಾಸ್ ಮರ್ಮಟ್ ಹಾಗೂ ಇತರರಾದ ಅಭಯ್ ಉದಯ್ ಸಿಂಗ್, ನಿತೀಶ್ ಹಾಗೂ ರೋಷನ್ ಎಂಬುವರ ವಿರುದ್ಧ ಕಬ್ಬನ್ ಪಾಕ್ ಪೊಲೀಸ್ ಠಾಣೆಯಲ್ಲಿ ಎ್ಐಆರ್ ದಾಖಲಾಗಿದೆ.

ಸಿಸಿಬಿ ವಿಶೇಷ ದಳದ ಇನ್‌ಸ್ಪೆಕ್ಟರ್ ಅರುಣ್ ಸಾಳುಂಕೆ ನೀಡಿದ ದೂರಿನ ಮೇಲೆ ಪ್ರಕರಣ ದಾಖಲಾಗಿದೆ. ನಿಯಮ ಮಿರಿ ತಡರಾತ್ರಿವರೆಗೂ ನಗರದಲ್ಲಿ ಪಬ್, ಬಾರ್, ರೆಸ್ಟೋರೆಂಟ್‌ಗಳನ್ನು ನಡೆಸಲಾಗುತ್ತಿತ್ತು. ಈ ಬಗ್ಗೆ ನಗರ ಪೊಲೀಸ್ ಆಯುಕ್ತ ಸೀಮಂತ್ ಕುಮಾರ್ ಸಿಂಗ್ ನೇತೃತ್ವದಲ್ಲಿ ಅ.9ರ ರಾತ್ರಿ 843 ಪಬ್, ಹೋಟೆಲ್‌ಗಳ ಮೇಲೆ ದಾಳಿ ನಡೆಸಿ ತಪಾಸಣೆ ನಡೆಸಿದ್ದರು.

ಅದರಂತೆ ಅಶೋಕನಗರ ಪೊಲೀಸ್ ಠಾಣೆ ಸಮೀಪದ ಎಂ.ಜೆ.ಎಂ ಕಾವೋರ್ ಪಬ್ ಮೇಲೆ ದಾಳಿ ನಡೆಸಿ, ತಪಾಸಣೆಗೆ ಮುಂದಾಗಿದ್ದರು. ಪಬ್‌ಗೆ ಆಗಮಿಸಿದ್ದ ಗ್ರಾಹಕರ ವಯಸ್ಸನ್ನು ದೃಢಪಡಿಸಿಕೊಳ್ಳಲು ಗುರುತಿನ ಚೀಟಿ ಕೇಳಿದ್ದಾರೆ. ಸ್ನೇಹಿತರೊಂದಿಗೆ ಪಬ್‌ಗೆ ಬಂದಿದ್ದ ಐಎಎಸ್ ಅಧಿಕಾರಿ ವಿಕಾಸ್ ಮರ್ಮಟ್ ಐಡಿ ಕಾರ್ಡ್ ವಿಚಾರವಾಗಿ ಗಲಾಟೆಯಾಗಿದೆ.

ಈ ವೇಳೆ ವಿಕಾಸ್ ಮರ್ಮಟ್ ಪೊಲೀಸ್ ಅಧಿಕಾರಿಗಳು ಹಾಗೂ ಸಿಬ್ಬಂದಿಗಳಿಗೆ ಅವಾಚ್ಯ ಶಬ್ದಗಳಿಂದ ನಿಂದಿಸಿ, ಸಿಸಿಬಿ ಇನ್ಸ್‌ಪೆಕ್ಟರ್ ಮೇಲೆ ಹಲ್ಲೆ ನಡೆಸಿ, ಬೆದರಿಕೆ ಹಾಕಿದ್ದಾರೆ ಎಂದು ದೂರಿನಲ್ಲಿ ತಿಳಿಸಿದ್ದಾರೆ.

ಹಲ್ಲೆಯಿಂದ ಗಾಯಗೊಂಡಿದ್ದ ಇನ್ಸ್‌ಪೆಕ್ಟರ್ ಅರುಣ್ ಸಾಳುಂಕೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು, ಅ.10ರಂದು ಕಬ್ಬನ್ ಪಾರ್ಕ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಈ ಕುರಿತು ಪೊಲೀಸರು ತನಿಖೆ ನಡೆಸಿದ್ದಾರೆ.

----

ೆಟೋ: ವಿಕಾಸ್ ಮರ್ಮಟ್

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net