ಮೊಮ್ಮಗನನ್ನು ಕೊಂದಿದ್ದ ಅಜ್ಜಿಯ ಬಂಧನ

Grandmother arrested for killing grandson
Grandmother arrested for killing grandson
Published on
ಚೇಳೂರು: ನಲವತ್ತು ದಿನದ ಹಸುಗೂಸಾಗಿದ್ದ ಮರಿ ಮೊಮ್ಮಗನನ್ನು ಉಸಿರುಗಟ್ಟಿಸಿ ಕೊಂದಿದ್ದ ವೃದ್ಧೆಯನ್ನು ಚೇಳೂರು ಪೊಲೀಸರು ಬಂಧಿಸಿದ್ದಾರೆ.
ಚೇಳೂರಿನ ಮೆಹಬೂಬಿ (72) ಆರೋಪಿ. ಅನ್ಯ ಧರ್ಮದ ಯುವಕನ್ನು ಮದುವೆಯಾಗಿದ್ದ ಮೊಮ್ಮಗಳು ಗರ್ಭಿಣಿಯಾದ ಬಳಿಕ ಅಜ್ಜಿ ಮನೆಗೆ ಬಂದಿದ್ದಳು. ಈ ವಿಚಾರವಾಗಿ ಮೆಹಬೂಬಿ ಬೇಸರಗೊಂಡಿದ್ದರು. ಮಗು ಜನನವಾದ 40 ದಿನಗಳ ಬಳಿಕ ವೃದ್ಧೆ ಸಮಯ ನೋಡಿಕೊಂಡು ಕತ್ತು ಹಿಸುಕಿ ಕೊಲೆ ಮಾಡಿದ್ದಳು. ಇದನ್ನರಿಯದೇ ಅನಾರೋಗ್ಯದ ಹಿನ್ನೆಲೆಯಲ್ಲಿ ಹಸುಗೂಸು ಮೃತಪಟ್ಟಿದೆ ಎಂದು ಭಾವಿಸಿ ಅಂತ್ಯಸಂಸ್ಕಾರ ನೆರವೇರಿಸಲಾಗಿತ್ತು.
ವರದಿಯಲ್ಲಿ ರಹಸ್ಯ ಬಯಲು: ಮಗುವಿನ ಸಾವಿನ ಬಗ್ಗೆ ಅನುಮಾನ ವ್ಯಕ್ತಪಡಿಸಿ ತಾಯಿ ಚೇಳೂರು ಪೊಲೀಸ್​ ಠಾಣೆಗೆ ದೂರು ನೀಡಿದ್ದರು. ಇದರಿಂದ ತಹಸೀಲ್ದಾರ್​ ಸಮ್ಮುಖದಲ್ಲಿ ಸ್ಮಶಾನದಲ್ಲಿ ಹೂತಿದ್ದ ಹಸುಗೂಸಿನ ಶವವನ್ನು ಹೊರ ತೆಗೆದು ಮರಣೋತ್ತರ ಪರೀೆ ನಡೆಸಲಾಗಿತ್ತು. ಈಗ ಎಫ್​ಎಸ್​ಎಲ್​ ವರದಿಯಲ್ಲಿ ಕೊಲೆ ಮಾಡಿರುವುದು ದೃಢಪಟ್ಟಿದೆ. ಇದರಿಂದ ವೃದ್ಧೆಯನ್ನು ವಶಕ್ಕೆ ಪಡೆದುಕೊಂಡು ಪೊಲೀಸರು ವಿಚಾರಣೆ ನಡೆಸಿದ್ದು ಆಕೆ ಕೊಲೆ ಮಾಡಿರುವುದನ್ನು ಒಪ್ಪಿಕೊಂಡಿದ್ದಾಳೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net