ಮಕ್ಕಳ ಮೊಬೈಲ್ ವ್ಯಸನಕ್ಕೆ ಸರ್ಕಾರದ ಬ್ರೇಕ್; 16 ವರ್ಷದೊಳಗಿನವರಿಗೆ ಸೋಶಿಯಲ್ ಮೀಡಿಯಾ ನಿಷೇಧ! | Karnataka Budget 2026-27

Karnataka Budget 2026-27 | 16 ವರ್ಷದೊಳಗಿನವರಿಗೆ ಸೋಶಿಯಲ್ ಮೀಡಿಯಾ ನಿಷೇಧ!
Karnataka Budget 2026-27 | 16 ವರ್ಷದೊಳಗಿನವರಿಗೆ ಸೋಶಿಯಲ್ ಮೀಡಿಯಾ ನಿಷೇಧ!
Published on
Karnataka Budget 2026-27: ಚಿಕ್ಕ ಮಕ್ಕಳನ್ನು ಕಾಡುತ್ತಿರುವ ಮೊಬೈಲ್ ಮತ್ತು ಸೋಶಿಯಲ್ ಮೀಡಿಯಾ ವ್ಯಸನಕ್ಕೆ ಬ್ರೇಕ್​ ಹಾಕಲು ಮುಂದಾಗಿರುವ ಸರ್ಕಾರ, 16 ವರ್ಷದೊಳಗಿನ ಮಕ್ಕಳು ಇನ್ಮುಂದೆ ಇನ್‌ಸ್ಟಾಗ್ರಾಮ್, ಫೇಸ್‌ಬುಕ್ ಸೇರಿದಂತೆ ಇತರ ಯಾವುದೇ ಸಾಮಾಜಿಕ ಜಾಲತಾಣಗಳನ್ನು ಬಳಸದಂತೆ ಅಧಿಕೃತವಾಗಿ ನಿಷೇಧ ಹೇರಿದೆ.
ದಿನವಿಡೀ ಮೊಬೈಲ್​ ಬಳಕೆಯನ್ನೇ ಮಗ್ನರಾಗಿರುತ್ತಿದ್ದ ಮಕ್ಕಳ ಭವಿಷ್ಯದ ದೃಷ್ಟಿಯಿಂದ ಸರ್ಕಾರ ಈ ಕಠಿಣ ನಿರ್ಧಾರ ಕೈಗೊಂಡಿದೆ.

ಇದರಿಂದ ಅನುಕೂಲವೇನು..?

ಮಾನಸಿಕ ಆರೋಗ್ಯ ಸುಧಾರಣೆ 
ಸೋಷಿಯಲ್ ಮೀಡಿಯಾದಲ್ಲಿ ಬರುವ ಲೈಕ್ಸ್​​ಗೋಸ್ಕರ ಮಕ್ಕಳು ಅವುಗಳ ವ್ಯಸನಕ್ಕೆ ತುತ್ತಾಗಿದ್ದು, ಖಿನ್ನತೆ ಮತ್ತು ಆತಂಕಕ್ಕೆ ಒಳಗಾಗುತ್ತಿದ್ದಾರೆ. ಸರ್ಕಾರ ಈಗ ನಿಷೇಧ ಹೇರಿರುವುದರಿಂದ ಮಕ್ಕಳು ಮಾನಸಿಕವಾಗಿ ಹೆಚ್ಚು ಸದೃಢರಾಗುತ್ತಾರೆ ಮತ್ತು ಅನಗತ್ಯ ಒತ್ತಡದಿಂದ ಮುಕ್ತರಾಗುತ್ತಾರೆ.
ವಿದ್ಯಾಭ್ಯಾಸದ ಕಡೆಗೆ ಗಮನ
ಮೊಬೈಲ್‌ನಿಂದ ದೂರವಾದರೆ ಮಕ್ಕಳು ಸಹಜವಾಗಿ ಓದಿನಲ್ಲಿ ಆಸಕ್ತಿ ವಹಿಸಲು ಮತ್ತು ಸೃಜನಾತ್ಮಕ ಕೆಲಸಗಳಲ್ಲಿ ತೊಡಗಿಸಿಕೊಳ್ಳಲು ಸಾಧ್ಯವಾಗುತ್ತದೆ. ಮೈದಾನಕ್ಕೆ ಇಳಿದು ಆಟವಾಡುತ್ತಾರೆ. ಇದರಿಂದ ಅವರ ದೈಹಿಕ ಆರೋಗ್ಯ ಸುಧಾರಿಸುತ್ತದೆ ಮತ್ತು ಕಣ್ಣಿನ ಸಮಸ್ಯೆಗಳು ಕಡಿಮೆಯಾಗುತ್ತವೆ.
ಪೋಷಕರಿಗೆ ನೆಮ್ಮದಿ
ಇತ್ತೀಚಿನ ದಿನಗಳಲ್ಲಿ ಮಕ್ಕಳಲ್ಲಿ ಹೆಚ್ಚುತ್ತಿರುವ ಮೊಬೈಲ್ ಗೀಳು, ಮಾನಸಿಕ ಒತ್ತಡ ಮತ್ತು ಸೈಬರ್ ಕ್ರೈಮ್‌ಗಳಿಗೆ ಕಡಿವಾಣ ಹಾಕಲು ಈ ಯೋಜನೆ ಜಾರಿಗೆ ತರಲಾಗಿದೆ. ಸರ್ಕಾರದ ಈ ನಿರ್ಧಾರವು ಕೇವಲ ನಿಷೇಧವಲ್ಲ, ಬದಲಾಗಿ ಮಕ್ಕಳನ್ನು ಡಿಜಿಟಲ್ ವ್ಯಸನದಿಂದ ಮುಕ್ತಗೊಳಿಸಿ ಅವರ ಬಾಲ್ಯವನ್ನು ಸುಭದ್ರಗೊಳಿಸುವ ಪ್ರಯತ್ನವಾಗಿ ನೋಡಲಾಗುತ್ತಿದೆ. ಇದಕ್ಕೆ ಪಾಲಕರ ಸಹಕಾರವು ಅಷ್ಟೆ ಮುಖ್ಯವಾಗುತ್ತದೆ.
ಸಿಎಂ ದಾಖಲೆ ಬಜೆಟ್​
ಸಿಎಂ ಸಿದ್ದರಾಮಯ್ಯ ಅವರು ಇಂದು ವಿಧಾನಸಭೆಯಲ್ಲಿ ಮಂಡಿಸುತ್ತಿರುವ ದಾಖಲೆಯ 17ನೇ ಬಜೆಟ್ (2026-27 ಸಾಲಿನ ರಾಜ್ಯ ಆಯವ್ಯಯ) ಕರ್ನಾಟಕ ಇತಿಹಾಸದಲ್ಲಿ ಒಂದು ಮಹತ್ವದ ಮೈಲುಗಲ್ಲಾಗಿದೆ. ಏಕೆಂದರೆ, ಯಾವುದೇ ಮುಖ್ಯಮಂತ್ರಿ ಇಷ್ಟೊಂದು ಬಾರಿ ಬಜೆಟ್ ಮಂಡಿಸಿಲ್ಲ. ಸುಮಾರು 4.48 ಲಕ್ಷ ಕೋಟಿ ಗಾತ್ರದ ಈ ಬಜೆಟ್‌ನಲ್ಲಿ ಪಂಚ ಗ್ಯಾರಂಟಿ ಯೋಜನೆಗಳಿಗೆ (ಗೃಹಲಕ್ಷ್ಮಿ, ಗೃಹಜ್ಯೋತಿ, ಶಕ್ತಿ, ಅನ್ನಭಾಗ್ಯ, ಯುವನಿಧಿ) ಮುಖ್ಯ ಆದ್ಯತೆ ನೀಡಲಾಗಿದ್ದು, ಆದಾಯ ಕೊರತೆ, ಜಿಎಸ್‌ಟಿ ಸುಧಾರಣೆಯಿಂದ ಉಂಟಾದ ನಷ್ಟ ಮತ್ತು ಹೆಚ್ಚುತ್ತಿರುವ ಖರ್ಚುಗಳ ನಡುವೆಯೂ ಮಹಿಳೆಯರು, ರೈತರು, ಯುವಕರು, ಶಿಕ್ಷಣ, ಆರೋಗ್ಯ, ಮೂಲಸೌಕರ್ಯ (ವಿಶೇಷವಾಗಿ ಬೆಂಗಳೂರು ಮತ್ತು ಹಿಂದುಳಿದ ಪ್ರದೇಶಗಳು) ಮತ್ತು ಉದ್ಯೋಗ ಸೃಷ್ಟಿಗೆ ಒತ್ತು ನೀಡಲಾಗಿದೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net