ಮಂಡ್ಯ ಜಿಲ್ಲೆಯ ಮಳವಳ್ಳಿಯವರಾದ ನಟರಾಜ್, 'ಕಾಮಿಡಿ ಕಿಲಾಡಿಗಳು' ಮೂಲಕ ಗುರುತಿಸಿಕೊಂಡಿದ್ದರು. ನಂತರ ಯೂಟ್ಯೂಬ್ ಮತ್ತು ಬೆಳ್ಳಿ ಪರದೆಯಲ್ಲೂ ನಟಿಸಿದ್ದರು. ಬಿಗ್ ಬಾಸ್ ಮನೆಯಲ್ಲಿ ಅವರ ಸಮಯಪ್ರಜ್ಞೆ, ಕೌಂಟರ್ ಡೈಲಾಗ್ ಮತ್ತು ಟಾಸ್ಕ್‌ನಲ್ಲಿನ ಚತುರತೆ ಅವರನ್ನು 'ಮಾತಿನ ಮಲ್ಲ'ನನ್ನಾಗಿ ಮಾಡಿತು. ನಟಿ ರಕ್ಷಿತಾ ಶೆಟ್ಟಿ ಅವರು ರನ್ನರ್ ಅಪ್ ಆಗಿ ಹೊರಹೊಮ್ಮಿದರೆ, ಅಶ್ವಿನಿ ಗೌಡ ಮೂರನೇ ಸ್ಥಾನ ಪಡೆದರು.