ತಕ್ಷಣ ಸಿಗಲಿದೆ ಎಲ್​ಪಿಜಿ ಗ್ಯಾಸ್​ ಸಂಪರ್ಕ

ಕಲಬುರಗಿಯಲ್ಲಿ ಭಾರತ ಗ್ಯಾಸ್​ ಲೈಟ್​ ಜಿಪ್​ ನೂತನ ಅಡುಗೆ ಅನಿಲ ಸಿಲಿಂಡರ್​ ಅನ್ನು ಕಾನೂನು ಮಾಪನಶಾಸ್ತ್ರ ಇಲಾಖೆ ವಿಭಾಗದ ಉಪ ನಿಯಂತ್ರಕ ರಫೀಕ್​ ಲಾಡಜಿ ಮಾರುಕಟ್ಟೆಗೆ ಬಿಡುಗಡೆ ಮಾಡಿದರು. ನಿರ್ಮಲಕುಮಾರ ಗೌತಮ, ಬಾಪುಗೌಡ ಪಾಟೀಲ್​, ಕಾರ್ತಿಕೇಯನ್​, ಬಾಬುರಾವ ಯಡ್ರಾಮಿ, ಆನಂದ ಕೆ.ಮೆಹತಾ, ಚಿತ್ತರಂಜನ್​ ಪಾಟೀಲ್​, ಚಂದ್ರರ್ಕಿತಿ ಸಂಗಾವಿ ಇತರರಿದ್ದರು.

Published on

ಪ್ರಮುಖ ಮುಖ್ಯಾಂಶಗಳು

  • ಬಿಪಿಸಿಎಲ್​ನಿಂದ ಕಲಬುರಗಿಯಲ್ಲಿ ಭಾರತ ಗ್ಯಾಸ್​ ಲೈಟ್​ ಜಿಪ್​ ಬಿಡುಗಡೆ
ಕಲಬುರಗಿ: ಅಡುಗೆ ಅನಿಲ ಇಲ್ಲದವರಿಗೆ ತಕ್ಷಣವೇ ಸಂಪರ್ಕ ನೀಡುವುದರ ಜತೆಗೆ ಮದುವೆ ಇನ್ನಿತರ ಕಾರ್ಯಕ್ರಮಗಳಿಗೆ ಬೇಕಿರುವ ಎಲ್​ಪಿಜಿ ಸಿಲಿಂಡರ್​ಗಳನ್ನು ಗಂಟೆಯಲ್ಲಿ ನೀಡುವ ಉದ್ದೇಶದೊಂದಿಗೆ ಭಾರತ ಪೆಟ್ರೋಲಿಯಂ ಕಾಪೋರ್ರೇಷನ್​ ಲಿಮಿಟೆಡ್​ (ಬಿಪಿಸಿಎಲ್​) ಸಂಸ್ಥೆಯು "ಭಾರತ ಗ್ಯಾಸ್​ ಲೈಟ್​ ಜಿಪ್​' ನೂತನ ಗ್ರಾಹಕಸ್ನೇಹಿ ಅಡುಗೆ ಅನಿಲ ಸಿಲಿಂಡರ್​ ಮಾರುಕಟ್ಟೆಗೆ ಬಿಡುಗಡೆ ಮಾಡಿದೆ.
ಗುಬ್ಬಿ ಕಾಲನಿಯಲ್ಲಿರುವ ಭಾರತ ಗ್ಯಾಸ್​ ವಿತರಕರ ಮಳಿಗೆಯಲ್ಲಿ ಶನಿವಾರ ಹಮ್ಮಿಕೊಂಡಿದ್ದ ಸಮಾರಂಭದಲ್ಲಿ ಕಾನೂನು ಮಾಪನಶಾಸ ಇಲಾಖೆ ವಿಭಾಗದ ಉಪ ನಿಯಂತ್ರಕ ರಫೀಕ್​ ಲಾಡಜಿ ಮಾರುಕಟ್ಟೆಗೆ ಬಿಡುಗಡೆ ಮಾಡಿ ಮಾತನಾಡಿ, ಈ ಉತ್ಪನ್ನವನ್ನು ಗ್ರಾಹಕರು ಸದುಪಯೋಗ ಮಾಡಿಕೊಂಡು ತುರ್ತು ಸಂದರ್ಭದಲ್ಲಿ ಬಳಸಿಕೊಳ್ಳಬೇಕು ಎಂದು ಸಲಹೆ ನೀಡಿದರು.
ಬಿಪಿಸಿಎಲ್​ ಕಲಬುರಗಿ ಘಟಕ ಮುಖ್ಯಸ್ಥ ನಿರ್ಮಲಕುಮಾರ ಗೌತಮ ಮಾತನಾಡಿ, ಕಲಬುರಗಿ ಸೇರಿ ದೇಶದ ಆಯ್ದ ನೂರು ನಗರಗಳಲ್ಲಿ ಸ್ವಾತಂತ್ರ್ಯ ದಿನಾಚರಣೆಯಂದು ಹೊಸ ಉತ್ಪನ್ನ ಮಾರುಕಟ್ಟೆಗೆ ಬಿಡುಗಡೆ ಮಾಡಲಾಗಿದೆ. ಇದೊಂದು ಗ್ರಾಹಕ ಸ್ನೇಹಿಯಾಗಿದ್ದು, ಎಲ್ಲರಿಗೂ ಮುಕ್ತವಾಗಿ ಅಡುಗೆ ಅನಿಲ ಸಿಗಬೇಕು ಎಂಬ ಉದ್ದೇಶದಿಂದ ಭಾರತ ಗ್ಯಾಸ್​ ಲೈಟ್​ ಜಿಪ್​ ಸಿಲಿಂಡರ್​ ಹೊರತರಲಾಗಿದೆ ಎಂದರು.
ಬಿಪಿಸಿಎಲ್​ ಮಾರುಕಟ್ಟೆ ಅಧಿಕಾರಿ ಕಾರ್ತಿಕೇಯನ್​, ಕಾರ್ಯನಿರತ ಪತ್ರಕರ್ತರ ಸಂಘದ ಜಿಲ್ಲಾಧ್ಯಕ್ಷ ಬಾಬುರಾವ ಯಡ್ರಾಮಿ, ವಿಜಯವಾಣಿ ಮುಖ್ಯವರದಿಗಾರ ಜಯತೀರ್ಥ ಪಾಟೀಲ್​, ವಿತರಕರಾದ ಆನಂದ ಕೆ.ಮೆಹತಾ, ಬಾಪುಗೌಡ ಪಾಟೀಲ್​ ಜೇವರ್ಗಿ, ಚಿತ್ತರಂಜನ್​ ಪಾಟೀಲ್​ ಕಮಲಾಪುರ, ಚಂದ್ರರ್ಕಿತಿ ಸಂಗಾವಿ ಮಳಖೇಡ ಇತರರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net