

ಇಲ್ಲಿಯವರೆಗೆ 29 ಮಂದಿ ಬಲಿ!
ಒಂದೂವರೆ ವರ್ಷದ ಹಿಂದೆ ಕೋಟಿಲಿಂಗ ಕಮ್ಮಸಂದ್ರ ಗ್ರಾಮದ ಒಂದೇ ಕುಟುಂಬದ ನಾಲ್ವರು ಅಪಘಾತದಲ್ಲಿ ಮೃತಪಟ್ಟರು. ನಂತರ ಹೊಸಕೋಟೆಯಿಂದ ಕೆಜಿಎ್ನ ಕೃಷ್ಣಾಪುರ ಟೋಲ್ ಪ್ಲಾಜಾವರೆಗಿನ ರಸ್ತೆಯಲ್ಲಿ ಈವರೆಗೆ ಒಟ್ಟು 25ಮಂದಿ ಮೃತಪಟ್ಟಿದ್ದಾರೆ. ಇದೀಗ ಸುಂದರಪಾಳ್ಯ ಟೋಲ್ ವ್ಯಾಪ್ತಿಯಲ್ಲಿ ನಾಲ್ವರು ಸೇರಿ ಒಟ್ಟಾರೆ 29 ಮಂದಿ ಈ ರಸ್ತೆಯಲ್ಲಿ ಪ್ರಾಣ ಕಳೆದುಕೊಂಡಿದ್ದಾರೆ.