ಈ ಕುರಿತು ಪ್ರಧಾನಮಂತ್ರಿ, ವಿಮಾನಯಾನ ಸಚಿವರಿಗೆ ಪತ್ರ ಬರೆದಿರುವ ಅವರು, 2026-27ರಿಂದ 2035-36ರವರೆಗೆ 100 ವಿಮಾನ ನಿಲ್ದಾಣಗಳ ಅಭಿವೃದ್ಧಿ ಹಾಗೂ ಸೇವೆ ಸಿಗದ ವಿಮಾನ ಹಾರಾಟ ಪಟ್ಟಿಗಳನ್ನು ಮೇಲ್ದರ್ಜೆಗೆ ತರುವುದಕ್ಕಾಗಿ 28,840 ಕೋಟಿ ರೂ. ಮೀಸಲಿಡಲಾಗಿದೆ. 447 ವಿಮಾನ ನಿಲ್ದಾಣಗಳಿಗೆ ಮೂರು ವರ್ಷಗಳ ಅವಧಿಗೆ 2,577 ಕೋಟಿ ರೂ. ಸಹಾಯಧನ ಒದಗಿಸಲಾಗುತ್ತಿದೆ. ಖಾಸಗಿ ವಿಮಾನ ಸಂಸ್ಥೆಗಳಿಗೆ ಪ್ರೋತ್ಸಾಹವಾಗಿ 10,043 ಕೋಟಿ ರೂ. ವ್ಯವಹಾರ ಅಂತರ ನಿಧಿ ಒದಗಿಸಲಾಗುತ್ತಿದೆ. ಸಚಿವ ಸಂಪುಟದ ಈ ಮಹತ್ವದ ನಿರ್ಧಾರ ದೇಶದ ಸಮಗ್ರ ಅಭಿವೃದ್ಧಿಗೆ ಸರ್ಕಾರದ ಬದ್ಧತೆ ತೋರಿಸುತ್ತದೆ. ಆದರೆ ಇದರ ನಿಜವಾದ ಫಲಿತಾಂಶವು ಈಗಾಗಲೇ ಅಭಿವೃದ್ಧಿ ಹೊಂದಿರುವ, ನಿರ್ಲಕ್ಷ್ಯಕ್ಕೆ ಒಳಗಾಗಿರುವ ಕಲಬುರಗಿ ವಿಮಾನ ನಿಲ್ದಾಣದಂತಹ ಪ್ರದೇಶಗಳಲ್ಲಿ ಗೋಚರಿಸಬೇಕಿದೆ ಎಂದು ತಿಳಿಸಿದ್ದಾರೆ.