ಮಹಿಳಾ ಸಬಲೀಕರಣದಿಂದ ಕುಟುಂಬ ನಿರ್ವಹಣೆ ಸುಲಭ

Family management becomes easier with women's empowerment
Family management becomes easier with women's empowerment
Published on
ತುರುವೇಕೆರೆ: ಮಹಿಳೆಯರು ಸ್ವಾವಲಂಭಿಗಳಾಗಿ ಎಲ್ಲ ಕ್ಷೇತ್ರಗಳಲ್ಲಿ ಸಾಧನೆ ಮಾಡಬೇಕು ಎಂದು ರೋಟರಿ ಕ್ಲಬ್​ನ ಜಿಲ್ಲಾಪಾಲಕ ಎಲಿಜಬೆತ್​ ಚೆರಿಯನ್​ ಹೇಳಿದರು.
ಪಟ್ಟಣದ ಶ್ರೀ ಗುರು ಸಿದ್ದರಾಮೇಶ್ವರ ಸಮುದಾಯ ಭವನದಲ್ಲಿ ತಾಲೂಕು ರೋಟರಿ ಕ್ಲಬ್​ನಿಂದ ಶನಿವಾರ ಆಯೋಜಿಸಿದ್ದ ಬೃಹತ್​ ವೃತ್ತಿಪರ ಉಚಿತ ಸೇವಾ ಯೋಜನಾ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.\
ರೋಟರಿ ಸಂಸ್ಥೆಯಿಂದ ನಡೆದ ಸೇವಾ ಚಟುವಟಿಕೆಗಳಲ್ಲಿ 58 ಮಹಿಳೆಯರಿಗೆ ಹೊಲಿಗೆ ಯಂತ್ರ ನೀಡಿರುವುದು ಸಾಧನೆಯೇ ಸರಿ. ಇದರಿಂದ 58 ಕುಟುಂಬ ಆರ್ಥಿಕವಾಗಿ ಸಬಲಗೊಳ್ಳಲು ಸಹಕಾರಿಯಾಗಿದೆ. ಇನ್ನು ಹಲವಾರು ವೃತ್ತಿಪರತೆಯ ತರಬೇತಿ ನೀಡಿ ಮಹಿಳೆಯರನ್ನು ಸ್ವಾವಲಂಭಿಯಾಗಿ ಮಾಡಿರುವ ರೋಟರಿ ಸಂಸ್ಥೆಯ ಎಲ್ಲ ಪದಾದಿಕಾರಿಗಳ ಪ್ರಯತ್ನ ನಿಜಕ್ಕೂ ಶ್ಲಾಘನೀಯ ಎಂದರು.
ರೋಟರಿ ಕ್ಲಬ್​ನ ಅಧ್ಯಕ್ಷ ಬಿ.ಎಂ.ಎಸ್​.ಉಮೇಶ್​ ಮಾತನಾಡಿ, ತಮ್ಮ ಸಂಸ್ಥೆಯಿಂದ ಉಚಿತವಾಗಿ ಹೊಲಿಗೆ ಯಂತ್ರ ಪಡೆದಿರುವ ಎಲ್ಲ 58 ಮಂದಿ ಮಹಿಳೆಯರು ಪಟ್ಟಣವನ್ನು ಪ್ಲಾಸ್ಟಿಕ್​ ಮುಕ್ತ ಮಾಡುವ ಸಲುವಾಗಿ 58 ಸಾವಿರ ಬಟ್ಟೆ ಚೀಲ ಹೊಲಿದುಕೊಡುವ ಆಶ್ವಾಸನೆ ನೀಡಿದ್ದಾರೆ. ತಾವು ಮಾಡಿದ ಈ ವೃತ್ತಿಪರ ಸೇವಾ ಯೋಜನೆಯಿಂದ ನೂರು ಕುಟುಂಬ ಸ್ವಾಭಿಮಾನದಿಂದ ಬದುಕುವ ಸಾಧ್ಯತೆ ಇದೆ. ಇದು ಸಾರ್ಥಕ ಕಾರ್ಯವಾಗಿದೆ ಎಂದರು.
ಜಿಲ್ಲಾ ಕಾರ್ಯದರ್ಶಿ ಎಂ.ಬಿ.ಉಮೇಶ್​, ಜನಾರ್ದನ್​, ಮಹಾದೇವ ಪ್ರಸಾದ್​, ಬಿಳಿಗೆರೆ ಶಿವಕುಮಾರ್​, ಪ್ರಕಾಶ್​ ಗುಪ್ತಾ, ನಾಗರಾಜು, ಪ್ರಸನ್ನ ಕುಮಾರ್​ ಇದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net