

ಬೆಂಗಳೂರು : ಚಳಿಗಾಲ ಹಾಗೂ ಹಬ್ಬದ ಋತುವಿನಲ್ಲಿ ಪ್ರಯಾಣಿಕರ ಹೆಚ್ಚುವರಿ ದಟ್ಟಣೆ ನಿಯಂತ್ರಿಸಲು ಯಶವಂತಪುರ, ಹುಬ್ಬಳ್ಳಿ, ಜೈಪುರ, ಖತಿಪುರ, ವಿಜಯಪುರ, ಪ್ರಯಾಗ್ರಾಜ್ ಮತ್ತು ರಾಮೇಶ್ವರಂ ಮಾರ್ಗಗಳಲ್ಲಿ ಸಂಚರಿಸುವ ವಿಶೇಷ ರೈಲುಗಳ ಸಂಚಾರ ಅವಧಿಯನ್ನು ರೈಲ್ವೆ ಇಲಾಖೆ ವಿಸ್ತರಿಸಿದೆ.
ಯಶವಂತಪುರ ಜೈಪುರ ವಿಶೇಷ ರೈಲು (06543) ಡಿ.2ರಿಂದ 30ರವರೆಗೆ ಹಾಗೂ ಜೈಪುರ ಬೆಂಗಳೂರು ಕಂಟೋನ್ಮೆಂಟ್ ರೈಲು (06544) ಡಿ.5ರಿಂದ ಜ.2ರವರೆಗೆ ಸಂಚರಿಸಲಿದೆ.
ಹುಬ್ಬಳ್ಳಿ ಖತಿಪುರ ವಿಶೇಷ ರೈಲು (07371) ಡಿ.12ರಿಂದ 26ರವರೆಗೆ ಹಾಗೂ ಖತಿಪುರ ಹುಬ್ಬಳ್ಳಿ ರೈಲು (07372) ಡಿ.14ರಿಂದ 28ರವರೆಗೆ ಸಂಚರಿಸಲಿದೆ. ಯಶವಂತಪುರ ವಿಜಯಪುರ ರೈಲು (06577) ಡಿ.5ರಿಂದ 26ರವರೆಗೆ ಹಾಗೂ ವಿಜಯಪುರ ಯಶವಂತಪುರ ರೈಲು (06578) ಡಿ.6ರಿಂದ 27ರವರೆಗೆ ಸಂಚಾರ ಮುಂದುವರಿಸಲಿದೆ.
ಪ್ರಯಾಗ್ರಾಜ್ ಹುಬ್ಬಳ್ಳಿ ವಿಶೇಷ ರೈಲು (04113) ಡಿ.19ರಿಂದ 26ರವರೆಗೆ ಹಾಗೂ ಹುಬ್ಬಳ್ಳಿ ಪ್ರಯಾಗ್ರಾಜ್ ರೈಲು (04114) ಡಿ.22ರಿಂದ 29ರವರೆಗೆ ಸಂಚರಿಸಲಿದೆ. ಅದೇ ರೀತಿ, ಹುಬ್ಬಳ್ಳಿ ರಾಮೇಶ್ವರಂ ವಿಶೇಷ ರೈಲು (07355) ಡಿ.13ರಿಂದ ಜ.24ರವರೆಗೆ ಹಾಗೂ ರಾಮೇಶ್ವರಂ ಹುಬ್ಬಳ್ಳಿ ರೈಲು (07356) ಡಿ.14ರಿಂದ ಜ.25ರವರೆಗೆ ಸಂಚರಿಸಲಿದೆ. ಜ.3ರಿಂದ ಹುಬ್ಬಳ್ಳಿ ರಾಮೇಶ್ವರಂ ರೈಲಿನ ಸಮಯದಲ್ಲಿ ಪರಿಷ್ಕರಣೆ ಮಾಡಲಾಗಿದೆ.