ನಮ್ಮ ತಾಯಿ ಅಪಾರ ದೈವಭಕ್ತೆ, ಅವರದ್ದು ಸರಳ ಜೀವನ; ತಾಯಿ ನೆನೆದು ಕಣ್ಣೀರು ಹಾಕಿದ ಕೇಂದ್ರ ಸಚಿವ ಹೆಚ್​.ಡಿ.ಕುಮಾರಸ್ವಾಮಿ | H.D. Kumaraswamy

ಹೆಚ್.ಡಿ.ಕುಮಾರಸ್ವಾಮಿ
ಹೆಚ್.ಡಿ.ಕುಮಾರಸ್ವಾಮಿ
Published on
ಬೆಂಗಳೂರು: ಮಾಜಿ ಪ್ರಧಾನಿ ಹೆಚ್ ಡಿ ದೇವೇಗೌಡರ ಧರ್ಮಪತ್ನಿ ಶ್ರೀಮತಿ ಚೆನ್ನಮ್ಮ(85) ಅವರು ನಿಧನರಾಗಿದ್ದು, ತಾಯಿಯನ್ನು ನೆನೆದು ಕಣ್ಣೀರು ಹಾಕಿರುವ ಕೇಂದ್ರ ಸಚಿವ ಹೆಚ್​.ಡಿ.ಕುಮಾರಸ್ವಾಮಿ(H.D. Kumaraswamy), ನಮ್ಮ ತಾಯಿ ಚೆನ್ನಮ್ಮನವರು ಅಪಾರ ದೈವಭಕ್ತೆಯಾಗಿದ್ದರು. ಅವರದ್ದಿ ಸರಳ ಜೀವನವಾಗಿತ್ತು. ಲಕ್ಷಾಂತರ ಕುಟುಂಬಗಳ ಬದುಕಿಗೆ ದಾರಿಯಾಗಿದ್ದರು ಎಂದು ಹೇಳಿದ್ದಾರೆ.
ಮಣಿಪಾಲ ಆಸ್ಪತ್ರೆಯಲ್ಲಿ ಮಾತನಾಡಿರುವ ಅವರು, ನಮ್ಮ ತಂದೆ ಸಂಗಾತಿಯಾಗಿ 60 ರಿಂದ 70 ವರ್ಷ ಜೀವನ ನಡೆಸಿದ್ದಾರೆ. ತಂದೆಯ ಬದುಕಿಗೆ ಅವರು ತಮ್ಮ ಜೀವನವನ್ನೇ ತ್ಯಾಗ ಮಾಡಿದ್ದಾರೆ. ನಾವು ಅಲ್ಪಸ್ವಲ್ಪ ಒಳ್ಳೆಯದನ್ನು ಕಲಿತಿದ್ದೇವೆ ಅಂದ್ರೆ ಅದಕ್ಕೆ ಕಾರಣ ನಮ್ಮ ತಾಯಿಯವರು. ನಾವು ಎಲ್ಲೆ ಇದ್ದರು ಅವರ ಸ್ಮರಣೆಯಲ್ಲೇ ಇರುತ್ತಿದ್ದೆವು. ಎರಡು ಬಾರಿ ಕೋವಿಡ್ ಬಂದಮೇಲೆ ಅವರ ಆರೋಗ್ಯದಲ್ಲಿ ಸಮಸ್ಯೆ ಹೆಚ್ಚಾಯ್ತು. ಕಳೆದ ಒಂದು ವರ್ಷದಿಂದ ಅವರ ಆರೋಗ್ಯದಲ್ಲಿ ತೀರಾ ಹೆಚ್ಚಾಗಿತ್ತು ಎಂದು ತಿಳಿಸಿದ್ದಾರೆ.
ಆ್ಯಸಿಡ್ ದಾಳಿಯಲ್ಲಿ ನಮ್ಮ ತಾಯಿ ಬದುಕಿದ್ದಿದ್ದೇ ಹೆಚ್ಚು, ದೇವರ ದಯೆಯಿಂದ ಅಂದು ನಮ್ಮ ತಾಯಿ ಬದುಕಿದ್ದರು. ಇಂದು ಆ ದೇವರು ನಮ್ಮ ತಾಯಿಯನ್ನು ಕರೆಸಿಕೊಂಡಿದ್ದಾನೆ. ಇಂದು ಮತ್ತು ನಾಳೆ ಪದ್ಮನಾಭನಗರದ ಮನೆಯಲ್ಲಿ ಅಂತಿಮ ದರ್ಶನಕ್ಕೆ ವ್ಯವಸ್ಥೆ. ಜನ ಜಾಸ್ತಿ ಬಂದರೆ ಮೈದಾನದಲ್ಲಿ ವ್ಯವಸ್ಥೆ ಮಾಡಲಾಗುವುದು ಎಂದಿದ್ದಾರೆ.
ಸೋಮವಾರ ಅಂತ್ಯಕ್ರಿಯೆಯನ್ನು ನೇರವೇರಿಸಲು ನಿರ್ಧರಿಸಲಾಗಿದೆ. ನಾಳೆ ಬೆಳಗ್ಗೆ 11 ಗಂಟೆ ಮೇಲೆ ಹಾಸನ ಜಿಲ್ಲೆಯ ಸ್ವಗ್ರಾಮಕ್ಕೆ ಅವರ ಪಾರ್ಥಿವ ಶರೀರ ಕೊಂಡೋಯ್ಯುತ್ತೇವೆ. ಅವರ ಹುಟ್ಟೂರು ಹರದನಹಳ್ಳಿ ಅವರ ತಾಯಿಯ ಹುಟ್ಟೂರಿನಲ್ಲೇ ಅಂತ್ಯಕ್ರಿಯೆ ನಡೆಸಬೇಕೆಂಬ ಎಲ್ಲರ ಅಭಿಪ್ರಾಯವಿದೆ. ಮನೆಯಲ್ಲಿ ಕುಟುಂಬದವರೆಲ್ಲರೂ ಚರ್ಚೆ ಮಾಡಿ ನಿರ್ಧಾರ ಮಾಡ್ತೇವೆ ಎಂದು ಹೇಳಿದ್ದಾರೆ.

ಎರಡನೇ ಬಾರಿ ಆಸ್ಪತ್ರೆ ಸೇರಿದ್ದ ಚೆನ್ನಮ್ಮ!

2001 ನೇ ಇಸವಿಯಲ್ಲಿ ಚೆನ್ನಮ್ಮ ಅವರ ಮೇಲೆ ಆಸಿಡ್​ ದಾಳಿಯಾದಾಗ ಆಸ್ಪತ್ರೆಯಲ್ಲಿ ದಾಖಲಾಗಿ ಐಸಿಯುನಲ್ಲಿ ಚಿಕಿತ್ಸೆ ಪಡೆದಿದ್ದರು. ಅದರ ಬಳಿಕ ಇವಾಗ ಉಸಿರಾಟದ ತೊಂದರೆ ಎಂದು ಆಸ್ಪತ್ರೆ ಸೇರಿದ್ದ ಚೆನ್ನಮ್ಮ ಈದೀಗ ವಿಧಿವಶರಾಗಿದ್ದಾರೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net