ಬೆಳೆವಿಮೆ ಪರಿಹಾರ ವಿತರಣೆ ಮಾಡಿ

ಬಸವರಾಜ ಯಳಸಂಗಿ
ಬಸವರಾಜ ಯಳಸಂಗಿ
Published on

ಆಳಂದ: ಹಲವು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಹಳ್ಳಿಯ ರೈತರಿಗೆ ಪ್ರಧಾನಮಂತ್ರಿ ಫಸಲ್​ ಬಿಮಾ ಯೋಜನೆಯ ಬೆಳೆವಿಮೆ ಪರಿಹಾರ ದೊರೆತಿಲ್ಲ. ಕೂಡಲೇ ಸಂಬಂಧಪಟ್ಟ ಅಧಿಕಾರಿಗಳು ಗಮನಹರಿಸಿ ಪರಿಹಾರ ವಿತರಣೆಗೆ ಕ್ರಮ ಕೈಗೊಳ್ಳಬೇಕು ಎಂದು ಕರ್ನಾಟಕ ರಕ್ಷಣಾ ವೇದಿಕೆ ತಾಲೂಕು ಅಧ್ಯಕ್ಷ ಬಸವರಾಜ ಯಳಸಂಗಿ ಆಗ್ರಹಿಸಿದ್ದಾರೆ. ಕಳೆದ ವರ್ಷ ತಾಲೂಕಿನಲ್ಲಿ ಒಟ್ಟು 77,979 ರೈತರು ಬೆಳೆ ವಿಮೆ ನೋಂದಣಿ ಮಾಡಿದ್ದರು. ಮಧ್ಯಂತರ ಪರಿಹಾರವಾಗಿ ತಾಲೂಕಿಗೆ 62 ಕೋಟಿ ರೂ. ಬಿಡುಗಡೆಯಾಗಿತ್ತು. ಈ ಪರಿಹಾರ ಬಹುತೇಕ ಎಲ್ಲ ರೈತರಿಗೂ ತಲುಪಿದೆ. ಆದರೆ ಇದೀಗ 2025-26ನೇ ಸಾಲಿನ ಎರಡನೇ ಕಂತು 68 ಕೋಟಿ ರೂ. ಬಿಡುಗಡೆ ಮಾಡಲಾಗಿದೆ. ಆದರೆ ಇದು ಯಾವೊಬ್ಬ ರೈತರಿಗೆ ದೊರೆತಿಲ್ಲ. ಈಗಾಗಲೇ ಬರ ಛಾಯೆ ಆವರಿಸಿದ್ದು, ಕೂಡಲೇ ಪರಿಹಾರ ವಿತರಣೆ ಕಾರ್ಯ ಆರಂಭಿಸಬೇಕು ಎಂದು ಒತ್ತಾಯಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net