ಗಡಿ ಗ್ರಾಮಗಳಿಗೆ ನೀರಾವರಿ ಸೌಲಭ್ಯ ಕಲ್ಪಿಸಲು ಒತ್ತಾಯ

ಹೊರ್ತಿ ರೇವಣಸಿದ್ದೇಶ್ವರ ಏತ ನೀರಾವರಿ ಯೋಜನೆಯಡಿ ಕನ್ನೂರ ಗ್ರಾ.ಪಂ. ವ್ಯಾಪ್ತಿಗೆ ನೀರಾವರಿ ಸೌಲಭ್ಯ ಕಲ್ಪಿಸುವಂತೆ ಒತ್ತಾಯಿಸಿ ಸಮಗ್ರ ಹೋರಾಟ ಸಮಿತಿ ನೇತೃತ್ವದಲ್ಲಿ ವಿಜಯಪುರದ ಜಿಲ್ಲಾಧಿಕಾರಿಗಳ ಕಚೇರಿ ಬಳಿ ಪ್ರತಿಭಟನೆ ನಡೆಸಿದರು. ಎಂ.ಎಸ್.ಅಥಣಿ, ಕಲ್ಲಪ್ಪ ಬೆಳ್ಳುಂಡಗಿ, ಭೀಮು ಶಿಂದೆ, ಮಾಳಪ್ಪ ಪೂಜಾರಿ, ಶಂಕರಗೌಡ ಪಾಟೀಲ ಮತ್ತಿತರರಿದ್ದರು.
ಹೊರ್ತಿ ರೇವಣಸಿದ್ದೇಶ್ವರ ಏತ ನೀರಾವರಿ ಯೋಜನೆಯಡಿ ಕನ್ನೂರ ಗ್ರಾ.ಪಂ. ವ್ಯಾಪ್ತಿಗೆ ನೀರಾವರಿ ಸೌಲಭ್ಯ ಕಲ್ಪಿಸುವಂತೆ ಒತ್ತಾಯಿಸಿ ಸಮಗ್ರ ಹೋರಾಟ ಸಮಿತಿ ನೇತೃತ್ವದಲ್ಲಿ ವಿಜಯಪುರದ ಜಿಲ್ಲಾಧಿಕಾರಿಗಳ ಕಚೇರಿ ಬಳಿ ಪ್ರತಿಭಟನೆ ನಡೆಸಿದರು. ಎಂ.ಎಸ್.ಅಥಣಿ, ಕಲ್ಲಪ್ಪ ಬೆಳ್ಳುಂಡಗಿ, ಭೀಮು ಶಿಂದೆ, ಮಾಳಪ್ಪ ಪೂಜಾರಿ, ಶಂಕರಗೌಡ ಪಾಟೀಲ ಮತ್ತಿತರರಿದ್ದರು.
Published on

ಪ್ರಮುಖ ಮುಖ್ಯಾಂಶಗಳು

  • ಡಿಸಿ ಮೂಲಕ ಮುಖ್ಯಮಂತ್ರಿಗೆ ಮನವಿ
  • ಸಮಗ್ರ ಹೋರಾಟ ಸಮಿತಿಯಿಂದ ಪ್ರತಿಭಟನೆ

ವಿಜಯಪುರ: ಹೊರ್ತಿ ರೇವಣಸಿದ್ಧೇಶ್ವರ ಏತ ನೀರಾವರಿ ಯೋಜನೆಯಡಿ ವಿಜಯಪುರ ತಾಲೂಕಿನ ನಾಗಠಾಣ ಮತಕ್ಷೇತ್ರದ ನೀರಾವರಿ ವಂಚಿತ ಗಡಿ ಗ್ರಾಮವಾದ ಕನ್ನೂರ ಗ್ರಾ.ಪಂ. ವ್ಯಾಪ್ತಿಗೆ ನೀರಾವರಿ ಸೌಲಭ್ಯ ಕಲ್ಪಿಸುವಂತೆ ಒತ್ತಾಯಿಸಿ ಸಮಗ್ರ ಹೋರಾಟ ಸಮಿತಿಯ ನೇತೃತ್ವದಲ್ಲಿ ಪ್ರತಿಭಟನಾ ಮೆರವಣಿಗೆ ನಡೆಸಿದರು.

ಮಂಗಳವಾರ ನಗರದ ಡಾ. ಬಿ.ಆರ್. ಅಂಬೇಡ್ಕರ್ ವೃತ್ತದಿಂದ ಆರಂಭಗೊಂಡ ಬೃಹತ್ ಮೆರವಣಿಗೆಯು ನಗರದ ಜಿಲ್ಲಾಧಿಕಾರಿಗಳ ಕಚೇರಿವರೆಗೂ ಸಾಗಿತು. ನಂತರ ಜಿಲ್ಲಾಧಿಕಾರಿಗಳ ಮೂಲಕ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಲಾಯಿತು.
ಸಮಗ್ರ ಹೋರಾಟ ಸಮಿತಿಯ ಕನ್ನೂರಿನ ಅಧ್ಯಕ್ಷ ಕಾಳಪ್ಪ ಬೆಳ್ಳುಂಡಗಿ, ಉಪಾಧ್ಯಕ್ಷ ಎಂ.ಎಚ್. ಪಠಾಣ ಮಾತನಾಡಿ, ಗಡಿ ಗ್ರಾಮವಾದ ಕನ್ನೂರ ಗ್ರಾಮ ಪಂಚಾಯಿತಿ ವ್ಯಾಪ್ತಿಯನ್ನು ರೇವಣಸಿದ್ಧೇಶ್ವರ ಏತ ನೀರಾವರಿ 1ನೇ ಹಂತದಲ್ಲಿ ಕನ್ನೂರ ಗ್ರಾಮವನ್ನು ಸೇರಿಸಿ ಯೋಜನಾ ವರದಿ ಹಾಗೂ ಅಂದಾಜು ಪತ್ರಿಕೆ ತಯಾರಿಸಿ ಅತೀ ಶೀಘ್ರದಲ್ಲಿ ಕಾಮಗಾರಿಯನ್ನು ಕೈಗೆತ್ತಿಕೊಳ್ಳಬೇಕೆಂದು ಆಗ್ರಹಿಸಿದರು.
ಎಂ.ಎಸ್.ಅಥಣಿ, ಕಲ್ಲಪ್ಪ ಬೆಳ್ಳುಂಡಗಿ, ಭೀಮು ಶಿಂದೆ, ಮಾಳಪ್ಪ ಪೂಜಾರಿ, ಶಂಕರಗೌಡ ಪಾಟೀಲ, ಹಣಮಂತರಾಯಗೌಡ ಪಾಟೀಲ, ಸಂತೋಷ ತಳವಾರ, ರವಿ ಗಲಗಲಿ, ಬಸುಗೌಡ ಪಾಟೀಲ, ಸಂಜೀವ ಯಾದವಾಡ, ರಾಜುಗೌಡ ಪಾಟೀಲ, ಸುಭಾಸಗೌಡ ಪಾಟೀಲ, ರಫೀಕ ಮುಲ್ಲಾ, ಬಸು ಸೊಡ್ಡಿ, ದೇವೇಂದ್ರ ಒಡೆಯರ, ಅಪ್ಪಾಸಾಹೇಬ ಕಾಂಬಳೆ, ತುಕಾರಾಮ ಘೋರ್ಪಡೆ, ಪಾಂಡು ಧಾತೆ, ವಿಠಲ ಭಜಂತ್ರಿ, ರಮೇಶ ಮೈಲಾರ, ಲೋಕು ಹೊಸೂರ, ಮಹಾದೇವ ನಾಠಗಾಣ, ದೇವಾನಂದ ರಾಠೋಡ, ವಿಜು ರಾಠೋಡ, ಮಹಾದೇವ ತಾಂಬೆ, ಶಕೀಲ ಮಧಭಾವಿ, ಮಶಾಕ ಚೌದರಿ ಮತ್ತಿತರರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net