ಈ ಕುರಿತು ಪತ್ರಿಕಾ ಪ್ರಕಟಣೆ ನೀಡಿದ ಅವರು, ಜನಸಂಖ್ಯೆಗೆ ಅನುಗುಣವಾಗಿ ಒಳ ಮೀಸಲಾತಿ ಜಾರಿ ಮಾಡುವಂತೆ ಕಳೆದ 40 ವರ್ಷಗಳಿಂದ ಮಾದಿಗರು ನಿರಂತರ ಹೋರಾಟ ಮಾಡುತ್ತಲೇ ಬಂದಿದ್ದು ಮನವರಿಕೆ ಮಾಡಿಕೊಂಡಿದ್ದ ಹಿಂದಿನ ಬಿಜೆಪಿ ಸರಕಾರದ ಸಿ.ಎಂ ಬಸವರಾಜ ಬೊಮ್ಮಾಯಿ ಅವರು ಒಳ ಮೀಸಲಾತಿ ನೀಡಲು ರಾಜ್ಯ ಸರಕಾರದ ಸಚಿವ ಸಂಪುಟ ಒಪ್ಪಿಗೆ ಮೇರೆಗೆ ಕೇಂದ್ರಕ್ಕೆ ಶಿಪಾರಸ್ಸು ಮಾಡಿದ ನಂತರ ಇದನ್ನು ಕೆಲವರು ವಿರೋಧಿಸಿ ಸುಪ್ರೀಂ ಕೋರ್ಟ್ ದಾವೆ ಹಾಕಿದರು. ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿ ಸುಪ್ರೀಂ ಕೋರ್ಟ್ ತ್ರಿಪೀಠ ಸದಸ್ಯ ಪೀಠ ಒಳ ಮೀಸಲಾತಿ ನೀಡುವಂತೆ ಆದೇಶ ಮಾಡಿತು.ಇದೆಲ್ಲವೂ ಆದ ಮೇಲೆ ನಾಗಮೋಹನ ದಾಸ ವರದಿ ಆಧಾರದ ಮೇಲೆ ಮೀಸಲಾತಿ ಹೆಚ್ಚಳ ಆಧಾರದಲ್ಲಿ ಶೇ.6 ಒಳ ಮೀಸಲಾತಿ ನಿರ್ಣಯ ತಗೆದುಕೊಂಡು ರಾಜ್ಯ ಸರಕಾರ ಆದೇಶ ಪತ್ರ ಹೊರಡಿಸಲಾಯಿತು. ಆದರೆ ಇದರಲ್ಲಿ ಕಾನೂನಿನ ತೊಡಕು ಇಟ್ಟು ಮೀಸಲಾತಿ ಕೊಟ್ಟ ರಾಜ್ಯ ಸರಕಾರದ ದಂದ್ವವನ್ನು ಸುಪ್ರೀಂ ಮೀಸಲಾತಿ ಹೆಚ್ಚಳ ಬಗ್ಗೆ ಪ್ರಶ್ನೆ ಮಾಡಿದೆ. ಇದರಿಂದ ಒಳ ಮೀಸಲಾತಿಗೆ ದೊಡ್ಡ ಕೊಡಲಿ ಏಟು ಬಿದ್ದಿದೆ. ಸಿ.ಎಂ ಸಿದ್ದರಾಮಯ್ಯನವರು ಬಸವಣ್ಣನವರ ತತ್ವ ಆದರ್ಶದಡಿಯಲ್ಲಿ ರಾಜ್ಯದಲ್ಲಿ ಎರಡನೇ ಬಾರಿಗೆ ಸಿ.ಎಂ ಆಗಿದ್ದಾರೆ. ನಮ್ಮೊಳಗೆ ಇರುವ ಕೊಂಡಿ ಮಂಜಣ್ಣ ಮತ್ತು ಮಲ್ಲಪ್ಪ ಶೆಟ್ಟಿ ಅಂತವರ ಮಾತನ್ನು ಕೇಳಿದರೆ ಸಮಸ್ಯೆಗೆ ಪರಿಹಾರ ಸಿಗಲು ಸಾಧ್ಯವಿಲ್ಲ.ತುಳಿತಕ್ಕೊಳಗಾದ ಮಾದಿಗರ ಅನ್ಯಾಯ ಆಗುತ್ತಿದೆ. ಎಸ್.ಸಿ ಗಳಿಗೆ ಈಗಿರುವ ಶೇ.15 ರಲ್ಲಿ ಮಾದಿಗರಿಗೆ ಶೇ.6 ರಷ್ಟು ಜನಸಂಖ್ಯೆಗೆ ಅನುಗುಣವಾಗಿ ಶಿಕ್ಷಣ ಮತ್ತು ಉದ್ಯೋಗದಲ್ಲಿ ಒಳಮೀಸಲಾತಿ ಜಾರಿಗೊಳಿಸಿ 58 ಸಾವಿರ ಸರಕಾರಿ ಉದ್ಯೋಗ ಭರ್ತಿ ಆಗಬೇಕೆಂದು ಅವರು ಆಗ್ರಹಿಸಿದ್ದಾರೆ.ರಾಜ್ಯದಲ್ಲಿ ನೀವು ಎರಡು ಬಾರಿ ಅಧಿಕಾರಕ್ಕೆ ಬರಲು ರಾಜ್ಯದ ಬಹುಸಂಖ್ಯಾತ ಮಾದಿಗರು ಸಂಪೂರ್ಣ ಶಕ್ತಿ ನೀಡಿದ್ದಾರೆ. ಈ ಜನರಿಗೆ ಒಳ ಮೀಸಲಾತಿ ಜಾರಿ ಮಾಡದೇ ಹೋದಲ್ಲಿ ಬರುವ ಚುನಾವಣೆಯಲ್ಲಿ ತಕ್ಕ ಪಾಠ ಕಲಿಸಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.