

ಸೂಲಿಬೆಲೆ :
ಹೈನುಗಾರಿಕೆಯು ಬಡ ರೈತರಿಗೆ ಗ್ಯಾರಂಟಿ ಆದಾಯ ತರುವ ಉಪಕಸುಬಾಗಿದ್ದು, ಇದಕ್ಕೆ ಪೂರಕವಾಗಿ ಬೆಂಗಳೂರು ಹಾಲು ಒಕ್ಕೂಟ ಬೆನ್ನೆಲುಬಾಗಿ ನಿಂತಿದೆ ಎಂದು ಶಾಸಕ ಶರತ್ ಬಚ್ಚೇಗೌಡ ಹೇಳಿದರು.
ಬೆಂಡಿಗಾನಹಳ್ಳಿಯಲ್ಲಿ ಹಮ್ಮಿಕೊಂಡಿದ್ದ ಆರೋಗ್ಯ, ರಾಸುಗಳ ಮರಣ ವಿಮೆ, ವೈದ್ಯಕಿಯ ವೆಚ್ಚಗಳ ಚೆಕ್ ವಿತರಣಾ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಹೊಸಕೋಟೆ ತಾಲೂಕಿನ 155 ಹಾಲು ಉತ್ಪಾದಕರ ಸಹಕಾರ ಸಂಘಗಳ ಮೂಲಕ 1.55 ಲಕ್ಷ ಲೀಟರ್ ಹಾಲನ್ನು ಉತ್ಪಾದಿಸಿ, ಬಮುಲ್ಗೆ ಸರಬರಾಜು ಮಾಡಲಾಗುತ್ತದೆ. ಸರ್ಕಾರದ ಸೌಲಭ್ಯಗಳನ್ನು ಹೈನುಗಾರರು ಸದ್ಬಳಸಿಕೊಳ್ಳಬೇಕು ಎಂದರು.
ಬಮುಲ್ ನಿರ್ದೇಶಕ ಬಿ.ವಿ.ಸತೀಶಗೌಡ ಮಾತನಾಡಿ, ಹೊಸಕೋಟೆಯಲ್ಲಿ ಮಳೆ ಕಡಿಮೆ ಇದ್ದರೂ ಪಶುಗಳ ಮೇವಿಗಾಗಿ 300 ಕ್ವಿಂಟಾಲ್ ಜೋಳ ವಿತರಣೆ ಮಾಡಿದ್ದರಿಂದ ಸಮಸ್ಯೆಯಾಗಿಲ್ಲ. ಮೃತ ಸದಸ್ಯರಿಗೆ 2025&26ನೇ ಸಾಲಿನಲ್ಲಿ ಬಮುಲ್ ವಿಮೆ ಯೋಜನೆಯಡಿ ತಲಾ 1 ಲಕ್ಷ ರೂ.ನಂತೆ ನಾಲ್ವರಿಗೆ 4 ಲಕ್ಷ ರೂ. ವಿಮೆ ಚೆಕ್, 2026-&27ನೇ ಸಾಲಿನ ಸಕ್ರಿಯ ಸದಸ್ಯರ ಹಾಗೂ ಅವಲಂಬಿತರ ಒಳರೋಗಿ ವೃದ್ಯಕಿಯ ವೆಚ್ಚವಾಗಿ 2.13 ಲಕ್ಷ ರೂ, ಹಾಗೂ 70 ವರ್ಷ ಮೇಲ್ಪಟ್ಟ ಸದಸ್ಯರ ಮರಣ ಪರಿಹಾರ 90 ಸಾವಿರ ರೂ. ಸೇರಿ 7.3 ಲಕ್ಷ ರೂ. ಚೆಕ್ ನೀಡಲಾಗಿದೆ ಎಂದು ತಿಳಿಸಿದರು.
ಹೊಸಕೋಟೆ ಶಿಬಿರದ ವೈದ್ಯಾಧಿಕಾರಿ ಡಾ.ಸಂತೋಷ್ ಮಾತನಾಡಿ, ಪಶು ಆಹಾರದಲ್ಲಿ ವ್ಯತ್ಯಾಸವಾಗಿದ್ದು, ಲ್ಯಾಬ್ಗೆ ಕಳುಹಿಸಲಾಗಿದೆ. ವರದಿ ಬಳಿಕ ಪರಿಶೀಲಿಸಿ ಕ್ರಮ ಕೈಗೊಳ್ಳಲಾಗುವುದು. ತಾಲೂಕಿನಲ್ಲಿ ಪ್ರಸ್ತುತ 1.55 ಲಕ್ಷ ಲೀಟರ್ ಹಾಲು ಉತ್ಪಾದನೆಯಾಗುತ್ತಿದ್ದು, ಮುಂದಿನ ದಿನಗಳಲ್ಲಿ 2ರಿಂದ 3 ಲಕ್ಷ ಲೀ.ವರಗೆ ಹೆಚ್ಚಾಗಬಹುದು. ಕೊಳತೂರು ಹಾಲು ಉತ್ಪಾದಕರ ಸಂಘ ಸರಬರಾಜಿನಲ್ಲಿ ಪ್ರಥಮ ಸ್ಥಾನ ಹಾಗೂ ಬೆಂಡಿಗಾನಹಳ್ಳಿ 2ನೇ ಸ್ಥಾನದಲ್ಲಿದೆ ಎಂದರು.
ಒಬಳಹಳ್ಳಿ (ಪ್ರ), ಎಂ.ಸತ್ಯವಾರ (ದ್ವೀ) ಖಾಜಿಹೊಸಹಳ್ಳಿ ಸಂಕ್ಕೆ (ತೃ)ಬಹುಮಾನ ನೀಡಲಾಯಿತು.
ಉತ್ತಮ ಮುಖ್ಯ ಕಾರ್ಯನಿವಾಹಕ ಕಂಬಳಿಪುರ ಡೇರಿ, ಅತ್ಯುತ್ತಮ ಹಾಲು ಪರೀಕ್ಷಕ ಬಿಸನಹಳ್ಳಿ ಡೇರಿ ಮಾರೇಶ್, ಅತ್ಯುತ್ತಮ ಶುಚಿಗಾರ ಚಂದ್ರೆಶೇಖರ್, ಅತ್ಯುತ್ತಮ ಕೃತಕ ಗರ್ಭಧಾರಣೆ ಕಾರ್ಯಕರ್ತ ಹೆತ್ತಕ್ಕಿ ಮಂಜುನಾಥ್, ಅತ್ಯುತ್ತಮ ಹಾಲು ಉತ್ಪಾದಕರ ಮಹಿಳಾ ಸಂಘ ಮಂಚಪನಹಳ್ಳಿ ನಗದು ಗೌರವ ಪುರಸ್ಕಾರ ನಡೆಸಲಾಯಿತು.
ವಿನಯಕುಮಾರ್, ವಿಸ್ತರಣಾಧಿಕಾರಿ ಅನಂದ್, ರಮೇಶ್, ವಿದ್ಯಾಶ್ರೀ, ಪವಿತ್ರಾ, ರಘುನಾಥ್, ಬಮುಲ್ ಟ್ರಸ್ಟ್ ನವೀನ್ ಕುಮಾರ್, ಕೃಷಿ ಅಧಿಕಾರಿ ಸೌಮ್ಯಾ, ಡೇರಿ ನೌಕರರ ಸಂಘದ ಅಧ್ಯಕ್ಷ ವಿಜಯಕುಮಾರ್ ಇತರರು ಇದ್ದರು.
ಕೊರಟಿ ಡೇರಿ ಮುಖ್ಯ ಕಾರ್ಯನಿರ್ವಾಹಕ ಶಶಿಕುಮಾರ್ ಅವರ ಆಕಾಲಿಕ ಮರಣದ ಹಿನ್ನೆಲೆಯಲ್ಲಿ ಬಮುಲ್ ನಿರ್ದೇಶಕ ಬಿ.ವಿ.ಸತೀಶಗೌಡ ವೈಯಕ್ತಿಕವಾಗಿ 1 ಲಕ್ಷ ಹಾಗೂ ಶಾಸಕ ಶರತ್ ಬಚ್ಚೇಗೌಡ 1 ಲಕ್ಷ ರೂ. ಧನ ಸಹಾಯಮಾಡಿದ್ದು, ಒಕ್ಕೂಟದಿಂದ 3 ಲಕ್ಷ ರೂ. ಸಿಗಲಿದೆ.
— > ವಿನಯ್ಕುಮಾರ್ ವ್ಯವಸ್ಥಾಪಕ, ಹೊಸಕೋಟೆ ಶಿಬಿರ