ನಾಳೆಯಿಂದ ಕಬ್ಬನ್​ ಪಾರ್ಕ್ ಫಲಪುಷ್ಪ ಪ್ರದರ್ಶನ

ನಾಳೆಯಿಂದ ಕಬ್ಬನ್​ ಪಾರ್ಕ್ ಫಲಪುಷ್ಪ ಪ್ರದರ್ಶನ
Published on: 

ಬೆಂಗಳೂರು: ಫಲಪುಷ್ಪ ಪ್ರದರ್ಶನದ ಮೂಲಕ ಚಳಿಗಾಲವನ್ನು ಸ್ವಾಗತಿಸಲು ತೋಟಗಾರಿಕೆ ಇಲಾಖೆಯು ಈ ಬಾರಿ ಕಬ್ಬನ್ ಪಾರ್ಕ್ ನಲ್ಲಿ ದೊಡ್ಡ ಮಟ್ಟದಲ್ಲಿ ಸಿದ್ಧತೆ ನಡೆಸಿದ್ದು, ನ.25ರಿಂದ ಡಿ.7ರವರೆಗೆ ಮಕ್ಕಳ ದಿನಾಚರಣೆ ಹಾಗೂ ಕನ್ನಡ ರಾಜ್ಯೊತ್ಸವಗಳ ಥೀಮ್ಡಿ ಪ್ರದರ್ಶನ ಹಮ್ಮಿಕೊಳ್ಳಲಾಗಿದೆ.

ಹದಿಮೂರು ದಿನಗಳ ಈ ಪ್ರದರ್ಶನದಲ್ಲಿ ಸುಮಾರು 15 ಲಕ್ಷ ಹೂಗಳಿಂದ ವೀರ ವನಿತೆಯರು, ನಮ್ಮ ಮೆಟ್ರೋ ರೈಲು ಮಾದರಿ, ಹೊಯ್ಸಳ ವಾಸ್ತುಶಿಲ್ಪ, ಕಾರ್ಟೂನ್ ಪ್ರತಿಕೃತಿಗಳು ಆಷರ್ಕಕ ಕಲಾಕೃತಿಗಳು ಗಮನ ಸೆಳೆಯಲಿವೆ. ಜತೆಗೆ ಸಾಂಸ್ಕೃತಿಕ ಕಾರ್ಯಕ್ರಮಗಳು ಹಾಗೂ ಭಾರತೀಯ ಸೇನೆಯಿಂದ ಜಾಗೃತಿ ಪ್ರದರ್ಶನಗಳು ನಡೆಯಲಿವೆ.

ಬಾಲಭವನದ ಮುಂಭಾಗದಿಂದ ಜಯಚಾಮರಾಜೇಂದ್ರ ಒಡೆಯರ್ ವೃತ್ತದವರೆಗೆ ಪ್ರದರ್ಶನದ ಕಲಾಕೃತಿಗಳನ್ನು ಇರಿಸಲಾಗುತ್ತಿದೆ. ಶಾಲಾ ಮಕ್ಕಳು ಮತ್ತು ಪ್ರಕೃತಿ ಪ್ರಿಯರು ಸೇರಿ ಅಪಾರ ಸಂಖ್ಯೆಯ ಜನರನ್ನು ಆಕರ್ಷಿಸಲು ಹೂವಿನ ಪ್ರದರ್ಶನಕ್ಕೆ ಸಾಂಸ್ಕೃತಿಕ ಸ್ಪರ್ಶ ನೀಡಲಾಗುತ್ತಿದೆ. ಸಾವಿರಾರು ಹೂವಿನ ಕುಂಡಗಳು ಮತ್ತು ಆವರಣದಾದ್ಯಂತ ಯೋಜಿಸಲಾದ ಹಲವಾರು ಆಕರ್ಷಣೆಗಳೊಂದಿಗೆ ಪ್ರದರ್ಶನ ಜರುಗಲಿದೆ. ಇದಕ್ಕಾಗಿ ಲಕ್ಷಾಂತರ ಹೂವಿನ ಕುಂಡಗಳನ್ನು ವ್ಯವಸ್ಥೆ ಮಾಡಿಕೊಳ್ಳಲಾಗಿದೆ.

ಪ್ರದರ್ಶನದಲ್ಲಿ ಪೆಟೂನಿಯಾ, ಟೊರೇನಿಯಾ, ಸಾಲ್ವಿಯಾ, ಮಾರಿಗೋಲ್ಡ, ಕ್ರಸಾಂಥಿಮಮ್ ಮತ್ತು ಜರ್ಬೆರಾ ಸೇರಿ ಹಲವು ಬಗೆಯ ಆಕರ್ಷಕ ಹೂವುಗಳಿಂದ ತಯಾರಿಸಿದ ಕಲಾ ಕೃತಿಗಳು ಜನರ ಗಮನ ಸೆಳೆಯಲಿವೆ ಎನ್ನುತ್ತಾರೆ ತೋಟಗಾರಿಕೆ ಇಲಾಖೆ ಅಧಿಕಾರಿಗಳು.

ಪ್ರವೇಶ ಶುಲ್ಕ: ಪ್ರದರ್ಶನದಲ್ಲಿ ವಯಸ್ಕರಿಗೆ ಸಾಮಾನ್ಯ ದಿನಗಳಲಿ ್ಲ 50 ರೂ. ಮತ್ತು ರಜಾ ದಿನಗಳಲ್ಲಿ 80 ರೂ. ಶುಲ್ಕ ನಿಗದಿಪಡಿಸಲಾಗಿದೆ. ಎಲ್ಲ ದಿನಗಳಲ್ಲೂ ಮಕ್ಕಳಿಗೆ 20 ರೂ. ಹಾಗೂ ಶಾಲಾ ಮಕ್ಕಳಿಗೆ ಉಚಿತ ಪ್ರವೇಶ ಇರಲಿದೆ.

ವಾಹನ ನಿಲುಗಡೆ

ಸಾರ್ವಜನಿಕರ ಅನುಕೂಲಕ್ಕಾಗಿ ಪೇ ಆಂಡ್ ಪಾರ್ಕ್ ವ್ಯವಸ್ಥೆ ಕಲ್ಪಿಸಲಾಗಿದ್ದು, ಎನ್ಜಿಒ ಹಾಲ್ ವೃತ್ತದ ಬಳಿ, ಕ್ವೀನ್ಸ್ ಪಾರ್ಕ್ ಬಳಿ, ಹೈಕೋರ್ಟ್ ರ್ಪಾಂಗ್ ಆವರಣ, ಶ್ರೀ ಕಂಠೀರವ ಕ್ರೀಡಾಂಗಣದ ಆವರಣ, ಸೇಂಟ್ ಜೋಸೆಫ್ ಶಾಲೆಯ ಆವರಣದಲ್ಲಿ ವಾಹನ ನಿಲುಗಡೆಗೆ ವ್ಯವಸ್ಥೆ ಮಾಡಲಾಗಿದೆ.

ಕಬ್ಬನ್ ಪಾರ್ಕ್ನಲ್ಲಿ ಕಳೆದ ವರ್ಷ ಸರಳವಾಗಿ ಪ್ರದರ್ಶನ ನಡೆಸಲಾಗಿತ್ತು. ಈ ಬಾರಿ ಮಕ್ಕಳ ದಿನಾಚರಣೆ ಮತ್ತು ಕನ್ನಡ ರಾಜ್ಯೊತ್ಸವ ಥೀಮ್ ಅಡಿಯಲ್ಲಿ ಆಯೋಜಿಸಲಾಗುತ್ತಿದೆ. ಹಿಂದಿಗಿಂತ ಉತ್ತಮ ಸ್ಪಂದನೆ ದೊರೆಯುವ ಹಾಗೂ ಹೆಚ್ಚಿನ ಸಂಖ್ಯೆಯಲ್ಲಿ ಜನರು ಭೇಟಿ ನೀಡುವ ನಿರೀಕ್ಷೆ ಇದೆ.

| ಜಿ. ಕುಸುಮಾ ತೋಟಗಾರಿಕೆ ಇಲಾಖೆ ಉಪನಿರ್ದೇಶಕಿ ಹಾಗೂ ಕಬ್ಬನ್ಪಾರ್ಕ್ನ ಉಸ್ತುವಾರಿ