ಭಾಷೆ, ಸಾಹಿತ್ಯ ರಕ್ಷಣೆಗೆ ಸೃಜನಶೀಲ ಪ್ರಯತ್ನ ಅಗತ್ಯ

ರಾಜ್ಯದಲ್ಲಿ ಭಾಷೆ ಮತ್ತು ಸಾಹಿತ್ಯದ ರಕ್ಷಣೆಗೆ ಸೃಜನಶೀಲ ಪ್ರಯತ್ನಗಳು ತುರ್ತಾಗಿ ಆಗಬೇಕಿದೆ. ಇಲ್ಲದಿದ್ದರೆ ಅಳಿವಿನ ಅಂಚಿನಲ್ಲಿ ಕಾಣಬೇಕಾಗುತ್ತದೆ ಎಂದು ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಡಾ. ಪುರುಷೋತ್ತಮ ಬಿಳಿಮಲೆ ಹೇಳಿದ್ದಾರೆ.
Creative efforts are needed to safeguard language and literature.
ಶ್ರೀಕೃಷ್ಣರಾಜ ಪರಿಷತ್​ ಸಭಾಂಗಣದಲ್ಲಿ ಬುಧವಾರ ನಡೆದ ಕನ್ನಡ ಸಾಹಿತ್ಯ ಪರಿಷತ್​ ಪರೀೆ, ಡಿಪ್ಲೊಮಾ ಪರೀೆಯ ರ್ಯಾಂಕ್​ ಹಾಗೂ ಪಿಎಚ್​ಡಿ ಪದವಿ ಪಡೆದವರಿಗೆ ಪ್ರತಿಭಾ ಪುರಸ್ಕಾರ ನೀಡಲಾಯಿತು. ಡಾ.ಪುರುಷೋತ್ತಮ ಬಿಳಿಮಲೆ, ಕೆ.ಎಂ.ದಯಾನಂದ, ಡಾ.ಕೆ.ಎಂ.ವಸುಂದರ ಇದ್ದರು.folder
Published on: 

ಬೆಂಗಳೂರು: ರಾಜ್ಯದಲ್ಲಿ ಭಾಷೆ ಮತ್ತು ಸಾಹಿತ್ಯದ ರಕ್ಷಣೆಗೆ ಸೃಜನಶೀಲ ಪ್ರಯತ್ನಗಳು ತುರ್ತಾಗಿ ಆಗಬೇಕಿದೆ. ಇಲ್ಲದಿದ್ದರೆ ಅಳಿವಿನ ಅಂಚಿನಲ್ಲಿ ಕಾಣಬೇಕಾಗುತ್ತದೆ ಎಂದು ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಡಾ. ಪುರುಷೋತ್ತಮ ಬಿಳಿಮಲೆ ಹೇಳಿದ್ದಾರೆ.

ನಗರದ ಶ್ರೀಕೃಷ್ಣರಾಜ ಪರಿಷತ್​ ಸಭಾಂಗಣದಲ್ಲಿ ಕನ್ನಡ ಸಾಹಿತ್ಯ ಪರಿಷತ್​ ಹಮ್ಮಿಕೊಂಡಿದ್ದ ಕನ್ನಡ ಪ್ರವೇಶ, ಕಾವ, ಜಾಣ, ರತ್ನ ಹಾಗೂ ಶಾಸನ ಶಾಸ್ತ್ರ ಡಿಪ್ಲೊಮಾ ಪರೀಕ್ಷೆಯ ರ್ಯಾಂಕ್​ ಹಾಗೂ ಪಿಎಚ್​ಡಿ ಪದವಿ ಪಡೆದವರಿಗೆ ಪ್ರತಿಭಾ ಪುರಸ್ಕಾರ ಕಾರ್ಯಕ್ರಮದಲ್ಲಿ ಮಾತನಾಡಿದರು. ಕನ್ನಡ ಭಾಷೆಯನ್ನು ಕೇವಲ ವ್ಯವಹಾರಿಕವಾಗಿ ನೋಡದೆ, ಸಂಸತಿ ಮತ್ತು ನಮ್ಮ ಬೇರುಗಳ ಜತೆ ಜೋಡಿಸುವ ನಿಟ್ಟಿನಲ್ಲಿ ಸರ್ಕಾರ ಹಾಗೂ ಸಮಾಜ ಒಟ್ಟಾಗಿ ಕೆಲಸ ಮಾಡಬೇಕು. ಆಗ ಮಾತ್ರ ಭಾಷೆ ಗಟ್ಟಿಯಾಗಿ ಉಳಿಯಲು ಸಾಧ್ಯ ಎಂದರು.

ಜಾಗತಿಕರಣ ಮತ್ತು ಮಾರುಕಟ್ಟೆ ಕೇಂದ್ರಿತ ಇಂಗ್ಲಿಷ್​ ಭಾಷೆಯ ಪ್ರಭಾವದಿಂದಾಗಿ ದೇಶದಲ್ಲಿ ಸುಮಾರು 254 ಮಾತೃ ಭಾಷೆಗಳು ಕಾಣೆಯಾಗಿವೆ. ನಮ್ಮ ರಾಜ್ಯದಲ್ಲೂ ಕೊಡವ, ಕೊಂಕಣಿ ಸೇರಿ ಹಲವು ಭಾಷೆಗಳ ಬಳಕೆ ಕಡಿಮೆಯಾಗಿದೆ. ಮಂಗಳೂರು ವಿಶ್ವವಿದ್ಯಾಲಯದ ಕೆಲ ಭಾಷಾ ವಿಭಾಗಗಳು ಬಂದ್​ ಆಗಿದೆ. ಭಾಷೆ, ಸಾಹಿತ್ಯದ ಮೇಲೆ ಜಾಗತಿಕರಣ ಪ್ರಭಾವ ಬೀರುತ್ತಿವೆ ಎಂದು ತಿಳಿಸಿದರು.

ಖತಾರ್​ನಲ್ಲಿ ಸುಮಾರು 70 ಶಿಕ್ಷಕರು 140ಕ್ಕೂ ಹೆಚ್ಚು ಮಕ್ಕಳಿಗೆ ಕನ್ನಡ ಭಾಷೆೆ ಬೋಧಿಸುತ್ತಿದ್ದಾರೆ. ಮನೆಯಿಂದ ಹೊರಬಂದರೆ ಕನ್ನಡ ವಾತಾವರಣ ಸಿಗುವ ಕೆಲಸ ಆಗಬೇಕು. ಹೊರಗಿನವರಿಗೆ ಪ್ರೋತ್ಸಾಹ ನೀಡಲು ಸಾಹಿತ್ಯ ಪರಿಷತ್​, ಸರ್ಕಾರ, ಶಿಕ್ಷಣ ಇಲಾಖೆ, ಕನ್ನಡ ಮತ್ತು ಸಂಸತಿ ಇಲಾಖೆಯಿಂದ ಪಠ್ಯ ನಿಗದಿಪಡಿಸಿ ಪ್ರಮಾಣಪತ್ರ ನೀಡುವ ಕೆಲಸ ಆಗಬೇಕು. ಆಗ ಕಲಿಸುವ ಹಾಗೂ ಕಲಿಯುವ ಆಸಕ್ತಿ ಹೆಚ್ಚುತ್ತದೆ ಎಂದು ಅಭಿಪ್ರಾಯಪಟ್ಟರು.

ಕನ್ನಡ ಭಾಷೆಗೆ ಹಲವು ದಶಕಗಳ ಇತಿಹಾಸವಿದ್ದು, ಉತ್ತಮ ಕಾದಂಬರಿ, ಕಾವ್ಯಗಳಿದ್ದು ಬಳಕೆಯಾಗಬೇಕು. ಮಕ್ಕಳಿಗೆ ಪ್ರಾಥಮಿಕ ಹಂತದಿಂದಲೇ ಕನ್ನಡ ಬಳಕೆ ಕುರಿತು ಅಇರುವ ಮೂಡಿಸಬೇಕಾದ ಕೆಲಸ ಆಗಬೇಕು. - ಡಾ.ಕೆ.ಎಂ.ವಸುಂದರ, ನಿರ್ದೇಶಕಿ, ಕನ್ನಡ ಮತ್ತು ಸಂಸತಿ ಇಲಾಖೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net