ರೇಣುಕಸ್ವಾಮಿ ಕೊಲೆ ಪ್ರಕರಣ ಮತ್ತೇರಡು ಸಾಕ್ಷ್ಯಗಳಿಂದ ವ್ಯತರಿಕ್ತ ಹೇಳಿಕೆ

ನ.30ಕ್ಕೆ ವಿಚಾರಣೆ ಮುಂದೂಡಿಕೆ
Actor Darshan
Actor Darshan
Published on: 

ಬೆಂಗಳೂರು: ರೇಣುಕಸ್ವಾಮಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ನ್ಯಾಯಾಲಯದ ವಿಚಾರಣೆ ಸಂದರ್ಭದಲ್ಲಿ ಪಟ್ಟಣಗೆರೆ ಶೆಡ್‌ನ ಭದ್ರತಾ ಸಿಬ್ಬಂದಿ ನರೇಂದ್ರ ಸಿಂಗ್ ಮತ್ತು ಕೆಲಸಗಾರ ಕಿರಣ್ ತಮ್ಮ ಹಿಂದಿನ ಹೇಳಿಕೆಗಳಿಗೆ ವ್ಯತರಿಕ್ತ ಹೇಳಿಕೆ ನೀಡಿದ್ದಾರೆ. ಹೀಗಾಗಿ ಇಬ್ಬರನ್ನು ಸರ್ಕಾರಿ ವಿಶೇಷ ಅಭಿಯೋಜಕರ ಮನವಿ ಮೇರೆಗೆ ಪ್ರತಿಕೂಲ ಸಾಕ್ಷಿಗಳನ್ನಾಗಿ ಬದಲಾಯಿಸಿ ಕೋರ್ಟ್ ಆದೇಶ ಹೊರಡಿಸಿದೆ.

ಕೊಲೆ ಪ್ರಕರಣ ಸಂಬಂಧ ಸೋಮವಾರ ಇಬ್ಬರು ಪ್ರಮುಖ ಸಾಕ್ಷಿಗಳಾದ ಶೆಡ್‌ನ ಕೆಲಸಗಾರ ಕಿರಣ್ ಮತ್ತು ಸೆಕ್ಯೂರಿಟಿ ಗಾರ್ಡ್ ನರೇಂದ್ರ ಸಿಂಗ್ ನಗರದ 59ನೇ ಸಿಸಿಹೆಚ್ ಕೋರ್ಟ್‌ಗೆ ಹಾಜರಾಗಿ ಹೇಳಿಕೆ ದಾಖಲಿಸಿದ್ದಾರೆ. ಈ ವೇಳೆ ಶೆಡ್‌ನ ಮಾಲೀಕ ವಿನಯ್ ಹೊರತು ಪಡಿಸಿ, ನಟ ದರ್ಶನ್ ಅಥವಾ ಪವಿತ್ರಾಗೌಡ ಸೇರಿ ಬೇರೆ ಯಾವುದೇ ಆರೋಪಿಗಳನ್ನು ಶೆಡ್‌ನಲ್ಲಿ ನೋಡಿಯೇ ಇಲ್ಲ ಎಂದು ಹೇಳಿಕೆ ನೀಡುವ ಮೂಲಕ ಅಚ್ಚರಿ ಮೂಡಿಸಿದ್ದಾರೆ.

ಸಾಕ್ಷಿ ಹೇಳಿಕೆ ಗೊಂದಲ:

ನ್ಯಾಯಾಲಯ ವಿಚಾರಣೆ ಆರಂಭವಾಗುತ್ತಿದ್ದಂತೆ ಮೊದಲಿಗೆ ಶೆಡ್‌ನ ಸೆಕ್ಯೂರಿಟಿ ಗಾರ್ಡ್ ನರೇಂದ್ರ ಸಿಂಗ್ ಅವರ ಹೇಳಿಕೆ ದಾಖಲಿಸಿಕೊಳ್ಳಲಾಯಿತು. ಈ ವೇಳೆ ವಿಡಿಯೋ ಕಾನ್ಫರೆನ್ಸ್ ಮೂಲಕ ಹಾಜರಾದ ದರ್ಶನ್, ಪವಿತ್ರಾಗೌಡ ಸೇರಿ ಇತರೆ ಆರೋಪಿಗಳನ್ನು ತೋರಿಸಿ, ಈ ವ್ಯಕ್ತಿಗಳನ್ನು ಘಟನೆ ದಿನ ನೋಡಿದ್ದಿರಾ ಎಂದು ಎಸ್‌ಸಿಪಿ ಪ್ರಸನ್ನ ಕುಮಾರ ಪ್ರಶ್ನಿಸಿದರು. ಆಗ ನರೇಂದ್ರ ಸಿಂಗ್, ಹಿಂದಿಯಲ್ಲೇ ನೋಡಿಯೇ ಇಲ್ಲ ಎಂದರು.

ಹಿಂದಿ ಬಿಟ್ಟು ಬೇರೆ ಭಾಷೆ ಬರೋದಿಲ್ವವೇ? ಎಂದು ಎಸ್‌ಪಿಪಿ ಕೇಳಿದ ಪ್ರಶ್ನೆಗೆ, ಹಿಂದಿ ಬಿಟ್ಟರೆ ಬೇರೆ ಭಾಷೆ ಬರೋದಿಲ್ಲ, ಕನ್ನಡವೂ ಅರ್ಥ ಆಗೋದಿಲ್ಲ ಎಂದು ನರೇಂದ್ರ ಸಿಂಗ್ ಹೇಳಿಕೆ ನೀಡಿದ್ದರು. ಬಳಿಕ ಸಾಕ್ಷಿ ಹೇಳಿಕೆಗಳನ್ನು ಭಾಷಾಂತಗೊಳಿಸಿ ವಿಚಾರಣೆ ನಡೆಸಲಾಯಿತು. ಆಗ 10ನೇ ಆರೋಪಿ ವಿನಯ್ ಹೊರತುಪಿಡಿಸಿ ದರ್ಶನ್, ಪವಿತ್ರಾಗೌಡ ಆಗಲಿ ಬೇರೆ ಯಾರನ್ನೂ ನಾನು ನೋಡಿಲ್ಲ. 2024ರ ಜೂನ್ 8ರಂದು ಶೆಡ್‌ನಲ್ಲಿ ಯಾವುದೇ ಘಟನೆ ನಡೆದಿಲ್ಲ ಎಂದು ಹೇಳಿಕೆ ನೀಡಿದರು. ಆಗ ಎಸ್‌ಪಿಪಿ, ಈ ಹಿಂದೆ ತಾವೇ ನ್ಯಾಯಾಧೀಶರ ಎದುರು ಸಿಆರ್‌ಪಿಸಿ 164 ಅಡಿ ಸ್ವಇಚ್ಚ ಹೇಳಿಕೆ ನೀಡಿದಾಗ ನೋಡಿದ್ದೇನೆ ಎಂದು ಹೇಳಿಕೆ ನೀಡಿದ್ದಿರಿ. ಇದೀಗ ಬದಲಾವಣೆ ಏಕೆ ಎಂದು ಪ್ರಶ್ನಿಸಿದರು. ಆಗ ನರೇಂದ್ರ ಸಿಂಗ್, ಅದು ಏನೆಂದು ಗೊತ್ತಿಲ್ಲ ಎಂದು ಹೇಳಿಕೆ ನೀಡಿದ್ದ. ನಂತರ ಮತ್ತೊಬ್ಬ ಸಾಕ್ಷಿ ಶೆಡ್‌ನ ಕೆಲಸಗಾರ ಕಿರಣ್, ಕೂಡ ಘಟನೆ ನಡೆದ ಬಗ್ಗೆ ಮಾಹಿತಿ ಇಲ್ಲ. ನಾನೇನು ನೋಡಿಲ್ಲ ಎಂದು ಹೇಳಿಕೆ ನೀಡಿದ್ದಾನೆ. ಆ ಬಳಿಕ ಕೋರ್ಟ್ ವಿಚಾರಣೆಯನ್ನು ನ.30ಕ್ಕೆ ಮುಂದೂಡಿತು.