

ಆಳಂದ: ಕ್ಷೇತ್ರದ ಸಮಗ್ರ ಅಭಿವೃದ್ಧಿಗೆ ಸರ್ಕಾರ ಸಾಕಷ್ಟು ಅನುದಾನ ನೀಡುತ್ತಿದ್ದು, ಶಿಕ್ಷಣ ಹಾಗೂ ಆರೋಗ್ಯ, ನೀರಾವರಿ ಕ್ಷೇತ್ರದ ಸುಧಾರಣೆಗೆ ಹೆಚ್ಚಿನ ಆದ್ಯತೆ ನೀಡಲಾಗುತ್ತಿದೆ ಎಂದು ಶಾಸಕ ಬಿ.ಆರ್.ಪಾಟೀಲ್ ಹೇಳಿದರು. ಪಟ್ಟಣದ ಚೆಕ್ ಪೋಸ್ಟ್ ಬಳಿ 1.50 ಕೋಟಿ ರೂ. ವೆಚ್ಚದಲ್ಲಿ ಆಳಂದ ಮುಖ್ಯ ರಸ್ತೆಯಿಂದ ಕೊರಳ್ಳಿವರೆಗಿನ 1 ಕಿಮೀ ರಸ್ತೆ ಕಾಮಗಾರಿಗೆ ಚಾಲನೆ ನೀಡಿ ಮಾತನಾಡಿದ ಅವರು, ಇದು 3 ಕಿಮೀ ರಸ್ತೆಯಾಗಿದ್ದು, ಮೊದಲ ಹಂತವಾಗಿ 1 ಕಿಮೀ ಮಾರ್ಗದ ಕಾಮಗಾರಿಗೆ ಚಾಲನೆ ನೀಡಲಾಗಿದೆ. ಇನ್ನು ಎರಡು ತಿಂಗಳಲ್ಲಿ ಸಂಪೂರ್ಣ ಕಾಮಗಾರಿ ಶುರುವಾಗಲಿದೆ. ಗುಣಮಟ್ಟದ ಜತೆಗೆ ನಿಗದಿತ ಅವಧಿಯಲ್ಲಿ ಕೆಲಸ ಮುಗಿಸಬೇಕು ಎಂದು ತಾಕೀತು ಮಾಡಿದರು. ಗ್ಯಾರಂಟಿ ಅನುಷ್ಠಾನ ಸಮಿತಿ ತಾಲೂಕು ಅಧ್ಯಕ್ಷ ಶಿವಪುತ್ರಪ್ಪ ಪಾಟೀಲ್ ಮುನ್ನಳ್ಳಿ, ಪಿಡಬ್ಲುಡಿ ಇಲಾಖೆ ಎಇಇ ಹೊನ್ನೇಶ ಅಳ್ಳಗಿ, ಪ್ರಮುಖರಾದ ಸಿದ್ದು ಪಾಟೀಲ್, ಮಜರ್ ಹುಸೇನ್, ಸಿದ್ದರಾಮ ಪ್ಯಾಟಿ, ಗುರುಶರಣ ಪಾಟೀಲ್, ಬಾಬುರಾವ ಗೊಬ್ಬರ, ರಾಜಶೇಖರ್ ಯಂಕಂಚಿ, ಆಸ್ಮಿತಾ ಚಿಟಗುಪ್ಪಕರ, ಸಲಾಂ ಮುಗುಟ, ಪಾಶಾ ಗುತ್ತೇದಾರ್, ಶರಣಬಸಪ್ಪ ವಾಗೆ, ಸತೀಶ ಪನಶೆಟ್ಟಿ, ಅಮ್ಜದ್ ಅಲಿ ಕರಜಗಿ, ಲಕ್ಷ್ಮಣ ಝಳಕಿ ಇತರರಿದ್ದರು.