ಚಿಕ್ಕ ವಯಸ್ಸಿನಲ್ಲೇ ಸಂಸ್ಕೃತಿ ಬಿತ್ತಲು 'ಮಕ್ಕಳ ವಚನ ಮೇಳ' ಪೂರಕ

ವಚನ ಜ್ಯೋತಿ ಬಳಗದ ಕಾರ್ಯಕ್ಕೆ ಶಾಸಕ ಎಸ್.ಟಿ. ಸೋಮಶೇಖರ್ ಮೆಚ್ಚುಗೆ
MLA S.T. Somashekhar, the organization's president Pinakapani, and others were present at the 'Children's Vachana Mela' for the year 2026, organized by the Vachanajyothi Balaga.
ವಚನಜ್ಯೋತಿ ಬಳಗ ಆಯೋಜಿಸಿದ್ದ 2026ನೇ ಸಾಲಿನ ಮಕ್ಕಳ ವಚನ ಮೇಳದಲ್ಲಿ ಶಾಸಕ ಎಸ್.ಟಿ.ಸೋಮಶೇಖರ್ ಬಳಗದ ಅಧ್ಯಕ್ಷ ಪಿನಾಕಪಾಣಿ ಮತ್ತಿತರರಿದ್ದರು.
Published on: 

ಬೆಂಗಳೂರು : ಮನಸ್ಸು ಕೆಡಿಸುವ ಹತ್ತಾರು ಕೆಟ್ಟ ವ್ಯವಸ್ಥೆಗಳ ನಡುವೆ ತಿಳಿಗನ್ನಡದಲ್ಲಿ ಮಹಾತ್ಮ ಬಸವಣ್ಣನವರ ವಿಚಾರಗಳನ್ನು ಎಳೆಯ ಮನಸ್ಸುಗಳಲ್ಲಿ ಬಿತ್ತಲು ಮಕ್ಕಳ ವಚನ ಮೇಳ ಪೂರಕವಾಗಿದೆ ಎಂದು ಶಾಸಕ ಎಸ್.ಟಿ ಸೋಮಶೇಖರ್ ಹೇಳಿದರು.

ವಚನಜ್ಯೋತಿ ಬಳಗ ಕಲಾಗ್ರಾಮದಲ್ಲಿ ಏರ್ಪಡಿಸಿದ್ದ ಮಕ್ಕಳ ವಚನ ಮೇಳದ ಸಮಾರೋಪ ಸಮಾರಂಭದಲ್ಲಿ ಮಾತನಾಡಿದರು.

ನಾಲ್ಕು ದಿನಗಳು ಐದು ವೇದಿಕೆಗಳಲ್ಲಿ ಸಾವಿರಾರು ಮಕ್ಕಳಿಗೆ ಕನ್ನಡದ ಸಾಂಸ್ಕೃತಿಕ ಸಂಪತ್ತನ್ನು ಉಣಬಡಿಸಿದ ಮಕ್ಕಳ ವಚನ ಮೇಳ ಸಾರ್ಥಕವಾಗಿದೆ. ಮುಂದಿನ ದಿನಗಳಲ್ಲಿ ತಾವೂ ಒಂದು ದಿನ ವಚನ ಮೇಳವನ್ನು ನಡೆಸುವುದಾಗಿ ಸೋಮಶೇಖರ್ ಭರವಸೆ ನೀಡಿದರು.

ಆಶಯ ನುಡಿಗಳನ್ನಾಡಿದ ವಚನಜ್ಯೋತಿ ಬಳಗದ ಅಧ್ಯಕ್ಷ ಪಿನಾಕಪಾಣಿ, ಹಣ ಮತ್ತು ಅಧಿಕಾರದ ಬಲವಿಲ್ಲದೆ ಬಳಗ ನಿರಂತರವಾಗಿ ಚಟುವಟಿಕೆಗಳನ್ನು ನಡೆಸುತ್ತಿದ್ದು 12 ವಚನ ಸ್ಪರ್ಧೆಗಳಲ್ಲಿ 5 ಸಾವಿರಕ್ಕೂ ಹೆಚ್ಚು ವಿದ್ಯಾರ್ಥಿಗಳು ಭಾಗವಹಿಸಿದ್ದು ಎಲ್ಲರಿಗೂ ಪ್ರಶಂಸಾ ಪತ್ರ ನೀಡಲಾಗಿದೆ ಎಂದರು.

ಕಾರ್ಯಕ್ರಮದಲ್ಲಿ ವೀರಶೈವ ಲಿಂಗಾಯತ ಮಹಾಸಭಾ ಬೆಂಗಳೂರು ನಗರ ಅಧ್ಯಕ್ಷ ನವೀನಕುಮಾರ್ ಬಿಡದಿ, ಬಿಬಿಎಂಪಿ ಮಾಜಿ ಸದಸ್ಯ ಡಾ. ರಾಜು, ಉದ್ಯಮಿ ಎಂ.ಮಾದಯ್ಯ, ಜ್ಣಾನಯೋಗ ಕೇಂದ್ರದ ಎನ್.ಎಂ. ಶಿವಕುಮಾರ್, ಭದ್ರಾವತಿ ಬಸವ ಕೇಂದ್ರದ ಬಸವರಾಜಯ್ಯ, ಸ್ವಾಭಿಮಾನಿ ಮಹಿಳಾ ಟ್ರಸ್ಟಿನ ಡಾ.ಅನುಪಮಾ ಮತ್ತಿತರರು ಪಾಲ್ಗೊಂಡಿದ್ದರು.