ಕೋಲಾರ ರೋಟರಿ ಕ್ಲಬ್​ಗೆ ಚಾಂಪಿಯನ್​ ಕ್ಲಬ್​ ಪ್ರಶಸ್ತಿ

'Champion Club' Award for Kolar Rotary Club
'Champion Club' Award for Kolar Rotary Club
Published on

ಕೋಲಾರ:

ಆರೋಗ್ಯ, ಶಿಕ್ಷಣ, ಪರಿಸರ, ಮಹಿಳಾ ಸಬಲೀಕರಣ, ಕಾಮಧೇನು ಯೋಜನೆ ಸೇರಿ 200ಕ್ಕೂ ಹೆಚ್ಚು ಸಮಾಜ ಸೇವಾ ಕಾರ್ಯಕ್ರಮಗಳನ್ನು ಯಶಸ್ವಿಯಾಗಿ ನಡೆಸಿಕೊಂಡು ಬಂದ ಹಿನ್ನೆಲೆಯಲ್ಲಿ ಕೋಲಾರ ರೋಟರಿ ಕ್ಲಬ್​ಗೆ ರೋಟರಿ 3191 ಸಂಸ್ಥೆಯು ಪ್ರತಿಷ್ಠಿತ "ಚಾಂಪಿಯನ್​ ಕ್ಲಬ್​ ಪ್ರಶಸ್ತಿ' ಸೇರಿ 17 ಅವಾರ್ಡಗಳನ್ನು ನೀಡಿ ಗೌರವಿಸಿದೆ ಎಂದು ಜಿಲ್ಲಾ ರೋಟರಿ ಕ್ಲಬ್​ ಮಾಜಿ ಅಧ್ಯಕ್ಷ ಎಸ್​.ಎಂ. ಚಂದ್ರಶೇಖರ್​ ತಿಳಿಸಿದರು.

ರೋಟರಿ ಭವನದಲ್ಲಿ ಇತ್ತೀಚೆಗೆ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಮಾತನಾಡಿ, ಪ್ರತಿಯೊಬ್ಬರೂ ಸೇವಾ ಮನೋಭಾವದಿಂದ ವಿವಿಧ ೇತ್ರಗಳಲ್ಲಿ ಸಲ್ಲಿಸಿದ ಗಣನೀಯ ಸೇವಾ ಕಾರ್ಯಕ್ರಮಗಳನ್ನು ಗುರುತಿಸಿ 7 ಸ್ಟಾರ್​ ಪ್ಲಾಟಿನಂ ಪ್ರೆಸಿಡೆಂಟ್​ ಅವಾರ್ಡ್​, ಡೈಮಂಡ್​ ಅವಾರ್ಡ್​, ಬೆಸ್ಟ್​ ಗ್ರಾಮೀಣ ಕ್ಲಬ್​ ಅವಾರ್ಡ್​ ಸೇರಿ 17 ಪ್ರಶಸ್ತಿ ಪಡೆದುಕೊಳ್ಳುವ ಮೂಲಕ ಕ್ಲಬ್​ನ ಗೌರವ ಹೆಚ್ಚಾಗಿದೆ ಎಂದರು.
ವಲಯ ಪ್ರಾಂತಪಾಲ ಎಚ್​.ರಾಮಚಂದ್ರಪ್ಪ, ರೋಟೆರಿಯನ್​ಗಳಾದ ಸಿ.ಆರ್​.ಅಶೋಕ್​, ನಾಗನಂದ ಕೆಂಪರಾಜ್​, ರಮೇಶ್​ ಕುಮಾರ್​, ಶ್ರೀನಿವಾಸರೆಡ್ಡಿ, ವೆಂಕಟೇಶಪ್ಪ, ರಂಗೇಗೌಡ, ಸಿ.ಕೆ. ನಾಗೇಶ್​, ಶಿವಪ್ಪ, ಚಂದ್ರು ಇದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net