ಕುಶಲಕರ್ಮಿಗಳ ಸಬಲೀಕರಣಕ್ಕೆ ಕೇಂದ್ರ ಒತ್ತು-Shobha Karandlaje

ಶೋಭಾ ಕರಂದ್ಲಾಜೆ
ಶೋಭಾ ಕರಂದ್ಲಾಜೆ
Published on
ಬೆಂಗಳೂರು: ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ನಾಯಕತ್ವದಲ್ಲಿ ಖಾದಿ ಮತ್ತು ಗ್ರಾಮ ಕೈಗಾರಿಕೆ (ಕೆವಿಐ) ವಲಯವು ದೇಶಾದ್ಯಂತ ಉತ್ಪಾದನೆ, ಮಾರಾಟ ಹಾಗೂ ಉದ್ಯೋಗ ಒದಗಿಸುವಲ್ಲಿ ಗಮನಾರ್ಹ ಸಾಧನೆ ಮಾಡಿದೆ ಎಂದು ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಹೇಳಿದ್ದಾರೆ.
ಖಾದಿ ಮತ್ತು ಗ್ರಾಮೋದ್ಯೋಗ ಆಯೋಗ, ಜಾಲಹಳ್ಳಿಯ ಎಚ್‌ಎಂಟಿ ಮೈದಾನದಲ್ಲಿ ಭಾನುವಾರ ಆಯೋಜಿಸಿದ್ದ ರಾಷ್ಟ್ರಮಟ್ಟದ ‘ಖಾದಿ ಪ್ರದರ್ಶನ’ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಕುಶಲಕರ್ಮಿಗಳ ಕಲ್ಯಾಣಕ್ಕೆ ನಮ್ಮ ಸರ್ಕಾ ಒತ್ತು ನೀಡಿದೆ.ಗ್ರಾಮೀಣ ಪ್ರದೇಶಗಳಲ್ಲಿ ಸಾಂಪ್ರದಾಯಿಕ ಕೈಗಾರಿಕೆಗಳನ್ನು ಉಳಿಸಲು, ಬುಡಕಟ್ಟು ಜನಾಂಗ, ಗುಡ್ಡಗಾಡು ಪ್ರದೇಶಗಳು, ಪರಿಶಿಷ್ಟ ಜಾತಿ(ಎಸ್ಸಿ) ಮತ್ತು ಪರಿಶಿಷ್ಟ ಪಂಗಡದ (ಎಸ್ಟಿ) ಕುಶಲಕರ್ಮಿಗಳು ಸೇರಿ ಮಹಿಳೆಯರ ಜೀವನೋಪಾಯವನ್ನು ಸುಧಾರಿಸುವ ಗುರಿ ಹೊಂದಿದೆ. 2024-25ರಲ್ಲಿ ಕರ್ನಾಟಕದ 203 ಖಾದಿ ಸಂಸ್ಥೆಗಳು ಗಮನಾರ್ಹ ಬೆಳವಣಿಗೆ ಸಾಧಿಸಿದೆ. ಒಟ್ಟು 29,958 ಗ್ರಾಮೀಣ ಕುಶಲಕರ್ಮಿಗಳಿಗೆ ಉದ್ಯೋಗ ಒದಗಿಸಲಾಗಿದೆ ಎಂದರು.
ಕುಶಲಕರ್ಮಿಗಳ ತ್ವರಿತ ಬೆಳವಣಿಗೆ ಮತ್ತು ಗುಣಮಟ್ಟ ಉತ್ಪನ್ನ ತಯಾರಿಕೆಯಿಂದ ‘ಮೇಕ್ ಇನ್ ಇಂಡಿಯಾ’ ದೃಷ್ಟಿಕೋನ ಸಾಕಾರಗೊಳಿಸಲಾಗುತ್ತಿದೆ. ಹಲವು ಉಪಕ್ರಮಗಳ ಮೂಲಕ ಮಾರುಕಟ್ಟೆಯಲ್ಲಿ ಖಾದಿ ಉದ್ಯಮವು ಅಭಿವೃದ್ಧಿ ಹೊಂದುತ್ತಿದೆ. ಮುಂದಿನ ಪೀಳಿಗೆಗಳ ಭವಿಷ್ಯಕ್ಕಾಗಿ ಗ್ರಾಮೋದ್ಯೋಗ ಆಯೋಗ, ಕೆಲ ಕ್ರಮ ತೆಗೆದುಕೊಳ್ಳುತ್ತಿದೆ ಎಂದು ಕೇಂದ್ರ ಸಚಿವೆ ಮೆಚ್ಚುಗೆ ವ್ಯಕ್ತಪಡಿಸಿದರು.
ಕೆವಿಐಸಿಯ ಗ್ರಾಮೋದ್ಯೋಗ ವಿಕಾಸ ಯೋಜನೆಯಡಿ(ಜಿವಿಐ) 350 ಲಾನುಭವಿಗಳಿಗೆ 800 ಪರಿಕರಗಳನ್ನು ಕೇಂದ್ರ ಸಚಿವೆ ವಿತರಿಸಿದರು. ಖಾದಿ ಸಂಸ್ಥೆಗಳ ಪ್ರತಿನಿಧಿಗಳು ಮತ್ತು ಕುಶಲಕರ್ಮಿಗಳು ಸೇರಿ ಇಲಾಖೆ ಅಧಿಕಾರಿಗಳು ಉಪಸ್ಥಿತರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net