ರಂಭಾಪುರಿ ಪೀಠದ ಧ್ರುವ ನಕ್ಷತ್ರ ಶ್ರೀ ಶಿವಾನಂದ ಜಗದ್ಗುರುಗಳ ಪೀಠಾರೋಹಣ ಶತಮಾನೋತ್ಸವ

ಶ್ರೀ ಉಜ್ಜಯಿನಿ ಜಗದ್ಗುರು ಸಿದ್ಧಲಿಂಗ ಭಗವತ್ಪಾದರು 1925ರಲ್ಲಿ ಶ್ರೀರಂಭಾಪುರಿ ಪೀಠದ 118ನೇ ಜಗದ್ಗುರುಗಳಾಗಿ ಶ್ರೀಶಿವಾನಂದ ಭಗವತ್ಪಾದರಿಗೆ ಪಟ್ಟಾಭಿಷೇಕ ನೆರವೇರಿಸಿದರು.
ಶ್ರೀ ಉಜ್ಜಯಿನಿ ಜಗದ್ಗುರು ಸಿದ್ಧಲಿಂಗ ಭಗವತ್ಪಾದರು 1925ರಲ್ಲಿ ಶ್ರೀರಂಭಾಪುರಿ ಪೀಠದ 118ನೇ ಜಗದ್ಗುರುಗಳಾಗಿ ಶ್ರೀಶಿವಾನಂದ ಭಗವತ್ಪಾದರಿಗೆ ಪಟ್ಟಾಭಿಷೇಕ ನೆರವೇರಿಸಿದರು.
Published on

ಪ್ರಮುಖ ಮುಖ್ಯಾಂಶಗಳು

  • ಶ್ರೀ ರಂಭಾಪುರಿ ಪೀಠದ ಧ್ರುವ ನಕ್ಷತ್ರ, ನವನಿರ್ಮಾಣ ಶಿಲ್ಪಿ
  • ಶ್ರೀಜಗದ್ಗುರು ಶಿವಾನಂದ ರಾಜೇಂದ್ರ ಶಿವಾಚಾರ್ಯ ಭಗವತ್ಪಾದರು
  • ವೀರಸಿಂಹಾಸನ ಪೀಠಾರೋಹಣದ ಶತಮಾನೋತ್ಸವ

ಶ್ರೀರಂಭಾಪುರಿ ಪೀಠದ ನವನಿರ್ಮಾಣಶಿಲ್ಪಿ ಎಂದು ಪ್ರಖ್ಯಾತರಾದಶ್ರೀ ಜಗದ್ಗುರು ಶಿವಾನಂದ ರಾಜೇಂದ್ರಭಗವತ್ಪಾದರ ಸಾಧನೆಯ ಸತ್ಕಾರ್ಯಗಳನ್ನುನೆನಪಿಸಿಕೊಳ್ಳುವುದೇ ಒಂದುಸೌಭಾಗ್ಯ. ಪೂಜ್ಯರುವೀರಸಿಂಹಾಸನವನ್ನೇರಿ 100ಸಂವತ್ಸರಗಳುಪೂರ್ಣಗೊಂಡಿರುವ ಹಿನ್ನೆಲೆಯಲ್ಲಿಇದೇ ನ.27ರಂದುಬಾಳೆಹೊನ್ನೂರು ಶ್ರೀರಂಭಾಪುರಿಧರ್ಮಪೀಠದಲ್ಲಿ ಪೀಠಾರೋಹಣಶತಮಾನೋತ್ಸವ ನಡೆಯಲಿದ್ದುತನ್ನಿಮಿತ್ತ ಈ ನುಡಿನಮನ

ಭಾರತೀಯಸಂಸ್ಕೃತಿ ಮತ್ತು ಪರಂಪರೆ ಅತ್ಯಂತಪಾವಿತ್ರ್ಯತೆಯನ್ನು ಹೊಂದಿದ್ದು,ಧರ್ಮ ಮತ್ತುದೇಶ ಮನುಷ್ಯನ ಎರಡು ಕಣ್ಣುಗಳಿದ್ದಂತೆ.ದೇಶ ಮತ್ತು ಧರ್ಮಉಳಿದರೆ ನಾಡಿನ ಸಂಸ್ಕೃತಿ ಉಳಿಯಲುಸಾಧ್ಯವೆಂದರಿತು,ಭಕ್ತಿ ಹಸಿವುಳ್ಳಜನರಿಗೆ ಸನ್ಮಾರ್ಗ ತೋರಿದವರುಶ್ರೀ ಶಿವಾನಂದ ಜಗದ್ಗುರುಗಳು. ಸಮಸ್ತ ಜನರ ಭೋಗಮೋಕ್ಷಗಳಿಗೆ ಧರ್ಮವೇ ಮೂಲವೆಂದುನಂಬಿ ನಡೆದ ಅವರು,ಕಾಯಕ ಮತ್ತುದಾಸೋಹದ ಮೂಲಕ ಜನಾಂಗದ ಶ್ರೇಯೋಭಿವೃದ್ಧಿಯಕನಸು ಕಂಡವರು.ಶ್ರೀಜಗದ್ಗುರುರೇಣುಕಾಚಾರ್ಯರ ಧಾರ್ಮಿಕ ಮತ್ತುಸಾಮಾಜಿಕ ಚಿಂತನೆಗಳಿಗೆ ಜೀವತುಂಬಿ, ಅಹಿಂಸಾದಿಧ್ಯಾನ ಪರ್ಯಂತರವಾದ ದಶ ಧರ್ಮಸೂತ್ರಗಳು ಬಾಳಿನ ಭಾಗ್ಯೋದಯಕ್ಕೆಅಡಿಪಾಯವೆಂದರಿತು ಬೀಜ ಬಿತ್ತಿಬೆಳೆಸಿದವರು.ವೀರಶೈವ ಸಂಸ್ಕೃತಿಯಸಂರಕ್ಷಣೆಗಾಗಿ ಜಗದೋದ್ಧಾರಗೈದಚಿಂತನಶೀಲರು.ದುಷ್ಟ ಶಕ್ತಿಗಳನಿರ್ಮೂಲನೆಗಾಗಿ ವೀರಭದ್ರನಂತೆಹೋರಾಡಿ ಶಾಂತಿ ಸನ್ಮಂಗಲ ಉಂಟುಮಾಡಿದವರು. ಜಾತಿಜನಾಂಗಗಳ ಗಡಿ ಮೀರಿ ಮಾನವೀಯಉದಾತ್ತ ಮೌಲ್ಯಗಳನ್ನು ಬೆಳೆಸಿಬಲಿಸಿದವರು.ಜನಹಿತಕ್ಕಾಗಿಪ್ರಗತಿಪರ ಕಾರ್ಯಗಳಿಗೆ ಶ್ರೀಕಾರಹಾಕಿ, ಬಾಳೆಂಬಕಾಯಿಯನ್ನು ಹಣ್ಣಾಗಿಸಿ ಫಲಪ್ರಾಪ್ತಿ ಕರುಣಿಸಿದವರು.ಬದುಕಿನ ಉನ್ನತಿಗೆಉತ್ತಮ ಸಂಸ್ಕಾರ ಮತ್ತು ಸಂಸ್ಕೃತಿಅಡಿಪಾಯವೆಂದರಿತು,ವೈಚಾರಿಕತೆಮತ್ತು ವೈಜ್ಞಾನಿಕತೆ ನೆಪದಲ್ಲಿಧರ್ಮ ಸಂಸ್ಕೃತಿ ಮರೆಯದಂತೆಎಚ್ಚರಿಸಿದವರು.

ಸೈದ್ಧಾಂತಿಕನೆಲೆಗಟ್ಟಿನ ಮೇಲೆ ಸಶಕ್ತ ಮತ್ತುಸದೃಢ ಸಮಾಜ ಕಟ್ಟಿ ಬೆಳೆಸಬೇಕೆಂಬಸಂಕಲ್ಪ ತೊಟ್ಟ ಶ್ರೀ ಶಿವಾನಂದಜಗದ್ಗುರಗಳು,ಸತ್ಯಾನ್ವೇಷಣೆಯಹಾದಿಯಲ್ಲಿ ನಡೆದಾಗ ಜೀವನ ಮೌಲ್ಯಗಳುಸಮೃದ್ಧಿಯಾಗುತ್ತವೆ ಎಂಬ ಸತ್ಯವನ್ನುಸಾಧಿಸಿ ತೋರಿದ್ದರು.ಅಸತ್ಯದಿಂದಸತ್ಯದೆಡೆಗೆ,ಕತ್ತಲೆಯಿಂದಬೆಳಕಿನೆಡೆಗೆ ಮೃತ್ಯುವಿನಿಂದಅಮೃತ್ವದ ಕಡೆಗೆ ಕರೆದೊಯ್ಯಲುಬೆಳಕು ತೋರಿ, ದೇಹವನ್ನುದುಡಿಮೆಗೆ,ಮನಸ್ಸನ್ನುಭಗವಂತನಿಗೆ ಅರ್ಪಿಸಿ ಶಾಂತಿಮಾರ್ಗದೆಡೆಗೆ ಮುನ್ನಡೆಸಿದವರು.ಸದ್ವರ್ತನೆಸೌಹಾರ್ದತೆ ಶಾಂತಿ ಸಮೃದ್ಧಿಗಳಸಫಲತೆಗೆ ವೀರಶೈವ ಧರ್ಮದ ಕೊಡುಗೆಅಮೂಲ್ಯವೆಂಬುದನ್ನು ಜನಮನದಲ್ಲಿಬಿತ್ತಿ ಬೆಳೆದಿದ್ದರು.

ಕಾಶಿಯಲ್ಲಿಕಲಿತ ಪ್ರಖಾಂಡ ಪಂಡಿತರು

ವೀರಶೈವಧರ್ಮ ವೃಕ್ಷದ ತಾಯ್ಬೇರು ಪಂಚಪೀಠಗಳು. ಶ್ರೀಜಗದ್ಗುರು ರಂಭಾಪುರಿ ವೀರಸಿಂಹಾಸನಮಹಾಪೀಠದ 118ನೇಜಗದ್ಗುರುಗಳಾದ ಶ್ರೀ ಶಿವಾನಂದಭಗವತ್ಪಾದರು ಅಂದಿನ ಬಳ್ಳಾರಿಜಿಲ್ಲೆ ಹಿರೇಹಾಳು ಹಿರೇಮಠದವೇ.ಮೂ.ಸಿದ್ಧವೀರಯ್ಯ,ಸಿದ್ಧವೀರಮ್ಮದಂಪತಿಗಳ ಪುಣ್ಯಗರ್ಭದಿಂದ ಜನಿಸಿಬಂದವರು. ಇವರಪೂರ್ವದ ಹೆಸರು ಸದಾಶಿವ.ಕಿರಿಯ ವಯಸ್ಸಿನಲ್ಲಿಬಾಳಿನ ಕನಸು ಕಟ್ಟಿ ಸಾಧನೆಯಹಾದಿಯಲ್ಲಿ ಸಾಗಿದವರು.ಸಂಸ್ಕೃತಅಧ್ಯಯನಕ್ಕಾಗಿ ಅಬ್ಬಿಗೇರಿಮತ್ತು ಸೊಲ್ಲಾಪುರದಲ್ಲಿ ಹೋಗಿಅತ್ಯುನ್ನತ ಜ್ಞಾನ ಸಂಪಾದನೆಗಾಗಿಕಾಶಿ ಕ್ಷೇತ್ರಕ್ಕೆ ದಯಮಾಡಿಸಿಅಧ್ಯಯನಗೈದವರು.ವಿದ್ಯಾವಾಚಸ್ಪತಿಗಳಾದಪೂಜ್ಯರು ಅಂದಿನ ಕಾಶಿ ಪೀಠದ ಜಗದ್ಗುರು ಶಿವಲಿಂಗ ಶಿವಾಚಾರ್ಯಭಗವತ್ಪಾದರ ಹೃದಯ ಕಾರುಣ್ಯ ಪಡೆದು,ಕಾಶಿ ಪೀಠದ ಆಡಳಿತವ್ಯವಸ್ಥೆಯನ್ನು ನಿರ್ವಹಿಸಿದವರು.ಪೂಜ್ಯರ ವಿದ್ವತ್ದರ್ಶನಕ್ಕೆ ಸಾಕ್ಷಿ ‘ವೀರಶೈವೇಂದುಶೇಖರ’ಸಂಸ್ಕೃತ ಗ್ರಂಥ.ಜ್ಯೋತಿರ್ಲಿಂಗಕ್ಷೇತ್ರವಾದ ಪರಳಿ ವ್ಯಾಜ್ಯದಲ್ಲಿವೀರಶೈವ ಧರ್ಮ ಸಂಸ್ಕೃತಿಗೆಶ್ರೇಯಸ್ಸು ತಂದವರು ಇವರು.ವೀರಶೈವ ಸಿದ್ಧಾಂತದಶಾಸೀಯ ಮಾನ್ಯತೆಯನ್ನು ಜಾಗತಿಕವಾಗಿಸಾಭೀತು ಪಡಿಸುವಲ್ಲಿ ಶ್ರೀಶಿವಾನಂದ ಭಗವತ್ಪಾದರು ಯಶಸ್ವಿಯಾಗಿದ್ದರು.

 ಮೈಸೂರುಮಹಾರಾಜರ ಸಹಕಾರ

ಸೌಂದರ್ಯಸದ್ಗುಣಗಳ ಗಣಿಯಾದ ಶ್ರೀಶಿವಾನಂದಜಗದ್ಗುರುಗಳು ಮೈಸೂರು ಮಹಾರಾಜರಸಹಕಾರದಿಂದ ಪೀಠವನ್ನು ಸಮೃದ್ಧವಾಗಿಕಟ್ಟಿ ಬೆಳೆಸುವಲ್ಲಿ ಹಗಲಿರುಳುಶ್ರಮಿಸಿದರು.ನಾಲ್ವಡಿ ಕೃಷ್ಣರಾಜಒಡೆಯರ್ ಸಮರ್ಪಿಸಿದ 80ಎಕರೆ ಭೂಮಿಯಲ್ಲಿಕಾಫಿ ತೋಟ ನಿರ್ಮಿಸಿ ಕೃಷಿಕ್ರಾಂತಿಗೆಮುನ್ನುಡಿ ಬರೆದರು.ಜಗದ್ಗುರುಶಿವಾನಂದ ಎಸ್ಟೇಟ್ ಹೆಸರಿನಲ್ಲಿಇಂದಿಗೂ ಆ ಕಾಫೀ ತೋಟ ವಿಜೃಂಭಿಸುತ್ತಿದೆ.ಬೆಂಗಳೂರುಮಹಾನಗರದಲ್ಲಿ ಶ್ರೀ ಜಗದ್ಗುರುರೇಣುಕಾಚಾರ್ಯ ವಿದ್ಯಾಸಂಸ್ಥೆಗೆಅಂಕುರಾರ್ಪಣ ಮಾಡಿರುವುದು ಅವರಜೀವನ ಸಾಧನೆಯ ಮಹತ್ವದ ಹೆಜ್ಜೆ.ಶಿಥಿಲಗೊಂಡಶ್ರೀಪೀಠದ ಕಟ್ಟಡವನ್ನು ಪುನರ್ನಿರ್ಮಿಸಿ ನವ ನಿರ್ಮಾಣ ಶಿಲ್ಪಿಎಂಬ ಖ್ಯಾತಿಗೆ ಒಳಗಾದವರು.ಇನ್ನೂ ಹಲವಾರುರಚನಾತ್ಮಕ ಕಾರ್ಯಗಳನ್ನು ನಿರ್ವಹಿಸಿದಶ್ರೀಶಿವಾನಂದ ಜಗದ್ಗುರುಗಳು1946ರಶ್ರಾವಣ ಶುದ್ಧ ಚೌತಿಯಂದುಲಿಂಗೈಕ್ಯರಾದರು.ಅವರು ಬದುಕಿರುವಾಗಲೇಪಾಲಿಕೊಪ್ಪ ಹಿರೇಮಠದ ಶ್ರೀಗಂಗಾಧರಶಿವಾಚಾರ್ಯರ ಹೆಸರಿಗೆ ಮೃತ್ಯುಪತ್ರ ಬರೆದಿಟ್ಟ ಕಾರಣ ಶ್ರೀವೀರಗಂಗಾಧರಜಗದ್ಗುರುಗಳು ಪೀಠಾರೋಹಣ ಮಾಡಿಧರ್ಮ ಧ್ವಜವನ್ನು ಮುಗಿಲೆತ್ತರದಲ್ಲಿಮೆರೆಸಿದ್ದನ್ನು ಯಾರೂ ಮರೆಯುವಂತಿಲ್ಲ.

ಶ್ರೀಜಗದ್ಗುರು ಸಿದ್ಧಲಿಂಗ ಭಗವತ್ಪಾದರತಪಸ್ಸಿನ ಫಲ

ಸುದೀರ್ಘಇತಿಹಾಸ ಪರಂಪರೆ ಹೊಂದಿರುವಶ್ರೀರಂಭಾಪುರಿ ಪೀಠಕ್ಕೆ ಬಂದೊದಗಿದ್ದಅನಿಶ್ಚಿತತೆಯನ್ನು ನಿವಾರಿಸಿ,ಪೀಠದ ಪರಂಪರೆಯನ್ನುಮರು ಸ್ಥಾಪಿಸಿದ ಕೀರ್ತಿ ಉಜ್ಜಯಿನಿಲಿಂಗೈಕ್ಯ ಜಗದ್ಗುರು ಶ್ರೀಸಿದ್ಧಲಿಂಗ ಭಗವತ್ಪಾದರಿಗೆಸಲ್ಲುತ್ತದೆ.

ಶ್ರೀರಂಭಾಪುರಿಪೀಠದ 117ನೇಜಗದ್ಗುರು ಪಂಚಾಕ್ಷರ ಶಿವಾಚಾರ್ಯಭಗವತ್ಪಾದರು ಆಕಸ್ಮಿಕವಾಗಿಲಿಂಗೈಕ್ಯರಾದಾಗ;ಎದುರಾಗಿದ್ದಹಲವರ ಪೈಪೋಟಿಯನ್ನು ಬದಿ ಸರಿಸಿ,ನಾಗನೂರುವೇ.ಬ್ರ.ಕಾಶೀನಾಥಶಾಸ್ತ್ರಿಗಳ ಮೂಲಕ ಮೈಸೂರುನಾಲ್ವಡಿ ಕೃಷ್ಣರಾಜ ಒಡೆಯರಿಗೆಸತ್ಯ ಸಂಗತಿಯ್ನನು ಮನವರಿಕೆಮಾಡಿ, ಕಾಶೀಪೀಠದಲ್ಲಿದ್ದ ಹಿರೇಹಾಳು ಸದಾಶಿವಶಾಸ್ತ್ರಿಗಳನ್ನು ಕರೆಯಿಸಿ1925ರಲ್ಲಿ118ನೇಜಗದ್ಗುರುಗಳನ್ನಾಗಿ ಪೀಠಾರೋಹಣನೆರವೇರಿಸಿದರು.ಈ ಮಹತ್ಕಾರ್ಯದಸಂಕಲ್ಪವನ್ನು ಮಾಡಿ ಚಿಕ್ಕಮಗಳೂರುಜಿಲ್ಲೆಯ ತರಿಕೆರೆ ತಾಲೂಕಿನಬುಕ್ಕಾಂಬುದಿ ಬೆಟ್ಟದಲ್ಲಿ ಕಠಿಣತಪಸ್ಸು ಮಾಡಿದ ಶ್ರೀಸಿದ್ಧಲಿಂಗಭಗವತ್ಪಾದರು ತಮ್ಮ ಅನುಷ್ಠಾನಮಂಗಲಗೊಳಿಸಿ ನೇರವಾಗಿ ಶ್ರೀರಂಭಾಪುರಿಪೀಠಕ್ಕೆ ಆಗಮಿಸಿ ಪೀಠಾರೋಹಣನೆರವೇರಿಸಿದರು.ಪೂಜ್ಯರ ಅನುಷ್ಠಾನಕ್ಕೂ100 ವರ್ಷಗಳುಪೂರೈಸಿದ್ದು,.23ರಂದುಬುಕ್ಕಾಂಬುದಿ ಬೆಟ್ಟದಲ್ಲಿಶ್ರೀರಂಭಾಪುರಿ ಮತ್ತು ಶ್ರೀಉಜ್ಜಯಿನಿಜಗದ್ಗುರುಗಳ ಸಾನ್ನಿಧ್ಯದಲ್ಲಿಅನುಷ್ಠಾನ ಶತಮಾನೋತ್ಸವಹಮ್ಮಿಕೊಳ್ಳಲಾಗಿದೆ.

.23ರಂದುಬುಕ್ಕಾಂಬುದಿಯಲ್ಲಿ ಆರಂಭಗೊಳ್ಳುವಶತಮಾನೋತ್ಸವ ಕಾರ್ಯಕ್ರಮವುಮುಂದುವರೆದು ನ.27ರಂದುಶ್ರೀರಂಭಾಪುರಿ ಪೀಠದಲ್ಲಿಶ್ರೀಶಿವಾನಂದ ಜಗದ್ಗುರುಗಳುಪೀಠಾರೋಹಣ ಶತಮಾನೋತ್ಸವ ನಡೆಯಲಿದೆ.ಅಂದಿನ ಕಾರ್ಯಕ್ರಮಕ್ಕೆ ಶ್ರೀ ಉಜ್ಜಯಿನಿ,ಶ್ರೀಕೇದಾರ,ಶ್ರೀಶೈಲ,ಶ್ರೀಕಾಶಿ ಪೀಠದಜಗದ್ಗುರುಗಳು ದಯಮಾಡಿಸಲಿದ್ದು,ಪಂಚಪೀಠಾಧೀಶ್ವರರಸಾನ್ನಿಧ್ಯದಲ್ಲಿ ನಾಡಿನ ಶಿವಾಚಾರ್ಯರಬಳಗ, ಸದ್ಭಕ್ತರಸಮೂಹ ಪಾಲ್ಗೊಳ್ಳಲಿದೆ.ಮೈಸೂರುಸಂಸ್ಥಾನದೊಂದಿಗಿನ ತಲೆಮಾರುಗಳಧಾರ್ಮಿಕ ಸಂಬಂಧಕ್ಕೆ ಸಾಕ್ಷಿಎಂಬಂತೆ ರಾಜವಂಶಸ್ಥ ಹಾಗೂ ಸಂಸದಯದುವೀರ ಕೃಷ್ಣದತ್ತ ಒಡೆಯರ್ಸಮಾರಂಭವನ್ನು ಉದ್ಘಾಟಿಸಲಿದ್ದು,ಕೇಂದ್ರ ಸಚಿವವಿ.ಸೋಮಣ್ಣಮತ್ತಿತರ ಗಣ್ಯರು ಮುಖ್ಯ ಅತಿಥಿಗಳಾಗಿಆಗಮಿಸಲಿದ್ದಾರೆ. ಶತಮಾನೋತ್ಸವದಪರ್ವಕಾಲದಲ್ಲಿ ಜಗದ್ಗುರುರಂಭಾಪುರಿ ಪೀಠದ ಧ್ರುವ ನಕ್ಷತ್ರದಂತಿದ್ದಲಿಂಗೈಕ್ಯ ಶಿವಾನಂದ ಜಗದ್ಗುರುಗಳ ಅಂತ:ಕರುಣದಕೃಪಾಶೀರ್ವಾದ ಎಲ್ಲರ ಮೇಲಿರಲಿಎಂದು ಹಾರೈಸುತ್ತೇವೆ

 ಶ್ರೀ ರಂಭಾಪುರಿ ಡಾವೀರಸೋಮೇಶ್ವರ ಜಗದುರುಗಳುಬಾಳೆಹೊನ್ನೂರು

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net