

ಸೂಲಿಬೆಲೆ :
ಮಹಿಳೆಯರು ವಿವಿಧ ಉದ್ಯಮಗಳಲ್ಲಿ ತೊಡಗಿಸಿಕೊಂಡು ಆರ್ಥಿಕ ಸ್ವಾವಲಂಬಿಗಳಾಗಿ ಜೀವನ ಕಟ್ಟಿಕೊಳ್ಳಬೇಕು ಎಂದು ಕೆನರಾ ಬ್ಯಾಂಕ್ ಉಪಪ್ರಬಂಧಕ ಕೃಷ್ಣ ಚೈತನ್ಯ ರೆಡ್ಡಿ ಸಲಹೆ ನೀಡಿದರು.
ಸೂಲಿಬೆಲೆ ಹೋಬಳಿ ಸೊಣ್ಣಹಳ್ಳಿಪುರ ಕೆನರಾ ಬ್ಯಾಂಕ್ ಸ್ವ ಉದ್ಯೋಗ ತರಬೇತಿ ಕೇಂದ್ರದಲ್ಲಿ ಹಮ್ಮಿಕೊಂಡಿದ್ದ ಬ್ಯೂಟಿ ಪಾರ್ಲರ್ ಹಾಗೂ ಎಂಬ್ರಾಯಿಡರ್ ತರಬೇತಿ ಶಿಬಿರದ ಸಮಾರೋಪದಲ್ಲಿ ಮಾತನಾಡಿದರು.
30 ದಿನಗಳ ಬ್ಯೂಟಿ ಪಾರ್ಲರ್ ತರಬೇತಿ ಮುಗಿಸಿರುವ ಮಹಿಳೆಯರು ತಮ್ಮ ಸ್ವ&ಉದ್ಯೋಗ ಪ್ರಾರಂಭಿಸುವ ಮೂಲಕ ಜೀವನ ರೂಪಿಸಿಕೊಳ್ಳುವುದು ಹಾಗೂ ಜನಪರವಾದ ಕಾಳಜಿಯಿಂದ ಆರ್ಥಿಕವಾದ ನೆಲೆಗಟ್ಟಿನಲ್ಲಿ ಮತ್ತಷ್ಟು ಜನರಿಗೆ ದಾರಿದೀಪವಾಗಬೇಕ ಎಂದರು.
ಕೆನರಾ ಬ್ಯಾಂಕ್ ಸ್ವ&ಉದ್ಯೋಗ ಸಂಸ್ಥೆಯ ರವಿಕುಮಾರ್ ಮಾತನಾಡಿ, ಗ್ರಾಮೀಣ ಭಾಗದ ಮಹಿಳೆಯರು ಮತ್ತು ಪುರುಷರಿಗಾಗಿ ನಾನಾ ರೀತಿಯ ತರಬೇತಿಗಳನ್ನು ಹಮ್ಮಿಕೊಳ್ಳುವಮೂಲಕ ಸ್ವ ಉದ್ಯೋಗ ಸೃಷ್ಟಿಸಲಾಗುತ್ತಿದೆ ಹಾಗೂ ವ್ಯಾಪ್ತಿಯ ಬ್ಯಾಂಕ್ಗಳಲ್ಲಿ ಸಾಲ ಮಂಜೂರಾತಿ ಸಹ ಮಾಡಿಸಿಕೊಡುತ್ತೇವೆ ಎಂದರು. ಮುಖ್ಯಶಿಕ್ಷಕಿ ಉಮಾದೇವಿ, ಶಾಲಾ ಅಧ್ಯಕ್ಷ ಚಂದ್ರಪ್ಪ, ಮಹಾಲಕ್ಷಿ$್ಮ, ಚೈತ್ರಾ, ನಾಗೇಶ್, ಸುಗುಣ, ಮುನಿಕೃಷ್ಣ ಇತರರು ಇದ್ದರು.