2028ಕ್ಕೆ ರಾಜ್ಯದಲ್ಲಿ ಮೈತ್ರಿ ಸರ್ಕಾರ ಬಂದ್ರೆ ಯಾರಾಗ್ತಾರೆ ಸಿಎಂ? ಮಾಜಿ ಸಿಎಂ ಬಿಎಸ್​ವೈ ಕೊಟ್ಟ ಉತ್ತರವಿದು | BS Yediyurappa

ಬಿಜೆಪಿ ಕಡೆ ಒಲವು ಹೊಂದಿದ್ದರಿಂದ ಮುಂದಿನ ಬಾರಿ ರಾಜ್ಯದಲ್ಲಿ ಬಿಜೆಪಿ-ಜೆಡಿಎಸ್ ಮೈತ್ರಿಕೂಟದ ಎನ್​ಡಿಎ (NDA) ಸರ್ಕಾರ ಅಧಿಕಾರಕ್ಕೆ ಬರಲಿದೆ. ನಮ್ಮ ಮೈತ್ರಿ ಕೂಟ ಅಧಿಕಾರಕ್ಕೆ ಬರುವುದು ಖಚಿತ. ಅದರಲ್ಲಿ ಎರಡನೇ ಮಾತಿಲ್ಲ ಎಂದರು.
BS Yediyurappa
2028ಕ್ಕೆ ರಾಜ್ಯದಲ್ಲಿ ಮೈತ್ರಿ ಸರ್ಕಾರ ಬಂದ್ರೆ ಯಾರಾಗ್ತಾರೆ ಸಿಎಂ?
Published on: 

ಕಲಬುರ್ಗಿ: 2028ರ ವಿಧಾನಸಭಾ ಚುನಾವಣೆಗೆ ಸಾಕಷ್ಟು ತಯಾರಿಗಳು ತೆರೆಮೆರೆಯಲ್ಲಿ ಆರಂಭಗೊಂಡಿದ್ದು, ಇದೀಗ ಕಾಂಗ್ರೆಸ್​, ಬಿಜೆಪಿ ಭಾರಿ ಪೈಪೋಟಿ ಕೊಡುವುದಕ್ಕಿಂತ ಯಾರ ಸರ್ಕಾರ ಬರಬಹುದು ಎಂಬುದನ್ನು ಅದಾಗಲೇ ಬಹುತೇಕ ಫಿಕ್ಸ್ ಮಾಡಿಕೊಂಡಿವೆ. ಈ ಕುರಿತಂತೆ ಕೇಳಿಬರುತ್ತಿರುವ ಒಂದಷ್ಟು ಪ್ರಶ್ನೆಗಳಿಗೆ ಕುತೂಹಲಕಾರಿ ರೀತಿಯಲ್ಲೇ ಉತ್ತರಗಳು ಲಭಿಸುತ್ತಿವೆ. ಇದಕ್ಕೆ ಮಾಜಿ ಸಿಎಂ ಹಾಗೂ ಬಿಜೆಪಿ ಸಂಸದೀಯ ಮಂಡಳಿ ಸದಸ್ಯರಾದ ಬಿಎಸ್​ ಯಡಿಯೂರಪ್ಪ (BS Yediyurappa) ಅವರು ನೀಡಿರುವ ಹೇಳಿಕೆ ಕೂಡ ಒಂದು.

ಬಿಜೆಪಿ ಕಡೆ ಒಲವು...

ಈಶಾನ್ಯ ಶಿಕ್ಷಕರ ಕ್ಷೇತ್ರದ ಅಭ್ಯರ್ಥಿ ಶಶೀಲ್ ನಮೋಶಿ ನಾಮಪತ್ರ ಸಲ್ಲಿಕೆಯಲ್ಲಿ ಭಾಗಿಯಾಗಲು ನಗರಕ್ಕೆ ಆಗಮಿಸಿದ ವೇಳೆ ಮಾತನಾಡಿದ ಬಿಎಸ್​ವೈ, "ರಾಜ್ಯದಲ್ಲಿ ಕಾಂಗ್ರೆಸ್ ದುರಾಡಳಿತದಿಂದ ಜನರು ಕಂಗೆಟ್ಟಿದ್ದಾರೆ. ಹೀಗಾಗಿ, ಬಿಜೆಪಿ ಕಡೆ ಒಲವು ಹೊಂದಿದ್ದರಿಂದ ಮುಂದಿನ ಬಾರಿ ರಾಜ್ಯದಲ್ಲಿ ಬಿಜೆಪಿ-ಜೆಡಿಎಸ್ ಮೈತ್ರಿಕೂಟದ ಎನ್​ಡಿಎ (NDA) ಸರ್ಕಾರ ಅಧಿಕಾರಕ್ಕೆ ಬರಲಿದೆ. ನಮ್ಮ ಮೈತ್ರಿ ಕೂಟ ಅಧಿಕಾರಕ್ಕೆ ಬರುವುದು ಖಚಿತ. ಅದರಲ್ಲಿ ಎರಡನೇ ಮಾತಿಲ್ಲ" ಎಂದರು.

ಯಾರು ಸಿಎಂ ಆಗುತ್ತಾರೆ?

"ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ ಅವರು ಮೈತ್ರಿ ಸರ್ಕಾರದ ಮುಂದಿನ ಮುಖ್ಯಮಂತ್ರಿ ಎನ್ನುವ ಕುರಿತು ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು, ಚುನಾವಣೆ ಬಳಿಕ ಯಾರು ಸಿಎಂ ಆಗುತ್ತಾರೆ ಎಂಬುದನ್ನು ನಿರ್ಧರಿಸಲಾಗುವುದು ಎಂದು ಈಗಾಗಲೇ ಬಿ.ವೈ. ವಿಜಯೇಂದ್ರ ಸ್ಪಷ್ಟಪಡಿಸಿದ್ದಾರೆ. ಮೊದಲು‌ ನಾವು ಒಗ್ಗೂಡಿ ಚುನಾವಣೆಯನ್ನು ಎದುರಿಸುತ್ತೇವೆ. ನಮ್ಮ ಬಳಿ ಬಿಜೆಪಿ, ಜೆಡಿಎಸ್ ಎರಡು ಒಂದೇ ಎಂಬ ಅಭಿಪ್ರಾಯವಿದೆ. ಸಿಎಂ ಯಾರಾಗಬೇಕು ಎನ್ನುವುದು ನಂತರ ತೀರ್ಮಾನ ಆಗುತ್ತದೆ" ಎಂದರು.

Also Read
2028ರ ಚುನಾವಣೆಗೆ ನಿಲ್ಲಿ! ವರುಣ ಜನರ ಮಾತಿಗೆ ಮಾಜಿ ಸಿಎಂ ಸಿದ್ದರಾಮಯ್ಯ ಕೊಟ್ಟ ರಿಯಾಕ್ಷನ್​ ಹೀಗಿತ್ತು | Siddaramaiah
BS Yediyurappa

ಇನ್ನು, ಸಿಎಂ ಡಿ.ಕೆ. ಶಿವಕುಮಾರ್​ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ ಬಿಎಸ್​ವೈ, "ಹಣ ಬಲದಿಂದ, ಹೆಂಡದಿಂದ ಎಲ್ಲ ಪಡೆಯುವ ಗುಂಗಿನಲ್ಲಿದ್ದಾರೆ. ಇನ್ಮುಂದೆ ಅದೆಲ್ಲ‌ ನಡೆಯೋದಿಲ್ಲ" ಎಂದು ಹೇಳಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net