ಬೆಂಗಳೂರು: 2025ರಲ್ಲಿ ಆರ್ಸಿಬಿ( RCB IPL) ಮೊದಲ ಬಾರಿಗೆ ಐಪಿಎಲ್ ಕಪ್ ಗೆದ್ದು ಕೊಂಡಿತ್ತು. ಈ ಹಿನ್ನೆಲೆ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ದಿಢೀರನೆ ವಿಜಯೋತ್ಸವ ಆಯೋಜಿಸಲಾಗಿತ್ತು. ತಮ್ಮ ನೆಚ್ಚಿನ ಕ್ರಿಕೆಟಿಗರನ್ನು ನೋಡಲು ಬಂದ ಫ್ಯಾನ್ಸ್ ಕಾಲ್ತುಳಿತಕ್ಕೆ ಒಳಗಾದರು. ಇದರಿಂದ 11 ಸಾವು, ಆಸ್ತಿ-ಪಾಸ್ತಿ ನಾಶವಾಗಿತ್ತು. ಇದರಿಂದ ಎಚ್ಚೆತ್ತುಕೊಂಡಿರುವ ಬೆಂಗಳೂರು ನಗರ ಪೊಲೀಸರು, ಮುನ್ನೆಚ್ಚರಿಕಾ ಕ್ರಮವಾಗಿ ಶುಕ್ರವಾರ ಮಹತ್ವದ ಸಾರ್ವಜನಿಕ ಮಾರ್ಗಸೂಚಿಯನ್ನು ಬಿಡುಗಡೆ ಮಾಡಿದ್ದಾರೆ.