ಬೃಹತ್ ಬೌಲ್ ಆಫ್ ಹೈಜಿಯಾ ಮಾನವಾಕೃತಿ

ರಾಷ್ಟ್ರೀಯ ಫಾರ್ಮಸಿ ಸಪ್ತಾಹದಲ್ಲಿ 700ಜನ ಭಾಗಿ
As part of National Pharmacy Week, the Faculty of Pharmacy at Ramaiah University of Applied Sciences set a record by bringing together over 700 people to form a massive human representation of the 'Bowl of Hygieia'.
ರಾಷ್ಟ್ರೀಯ ಫಾರ್ಮಸಿ ಸಪ್ತಾಹ ಅಂಗವಾಗಿ ರಾಮಯ್ಯ ಯೂನಿವರ್ಸಿಟಿ ಆಫ್ ಅಪ್ಲೈಡ್ ಸೈನ್ಸಸ್‌ನ ಫಾರ್ಮಸಿ ಫ್ಯಾಕಲ್ಟಿಯವರು 700ಕ್ಕೂ ಹೆಚ್ಚು ಮಂದಿ ಒಗ್ಗೂಡಿ ಬೃಹತ್ ಬೌಲ್ ಆಫ್ ಹೈಜಿಯಾ ಮಾನವಾಕೃತಿ ನಿರ್ಮಿಸಿ ದಾಖಲೆ ಮಾಡಿದ್ದಾರೆ.
Published on: 

ಬೆಂಗಳೂರು : ರಾಷ್ಟ್ರೀಯ ಫಾರ್ಮಸಿ ಸಪ್ತಾಹ 2026ರ ಅಂಗವಾಗಿ ರಾಮಯ್ಯ ಯೂನಿವರ್ಸಿಟಿ ಆಫ್ ಅಪ್ಲೈಡ್ ಸೈನ್ಸಸ್‌ನ ಫಾರ್ಮಸಿ ಫ್ಯಾಕಲ್ಟಿ ಆಯೋಜಿಸಿದ್ದ ಫಾರ್ಮಟೋಪಿಯಾ 2026 ಕಾರ್ಯಕ್ರಮದಲ್ಲಿ 700ಕ್ಕೂ ಹೆಚ್ಚು ಮಂದಿ ಒಗ್ಗೂಡಿ ಬೃಹತ್ ಬೌಲ್ ಆಫ್ ಹೈಜಿಯಾ ಮಾನವಾಕೃತಿ ನಿರ್ಮಿಸುವ ಮೂಲಕ ಗಮನ ಸೆಳೆದರು. ಈ ವಿಶಿಷ್ಟ ಪ್ರಯತ್ನಕ್ಕೆ ಇಂಗ್ಲೆಂಡ್‌ನ ವರ್ಲ್ಡ್ ರೆಕಾರ್ಡ್ ಆಫ್ ಎಕ್ಸಲೆನ್ಸ್‌ನಿಂದ ಅಧಿಕೃತ ಮಾನ್ಯತೆ ದೊರೆಯುವ ನಿರೀಕ್ಷೆ ಇದೆ.

ನ.16ರಿಂದ 20ರವರೆಗೆ ನಡೆದ 5ದಿನಗಳ ಕಾರ್ಯಕ್ರಮದಲ್ಲಿ ಫಾರ್ಮಸಿ ವಿದ್ಯಾರ್ಥಿಗಳು, ಬೋಧಕ ಸಿಬ್ಬಂದಿ ಹಾಗೂ ಇತರರು ಪಾಲ್ಗೊಂಡಿದ್ದರು. ವಿಶ್ವದಲ್ಲೇ ಮೊದಲ ಬಾರಿಗೆ ಫಾರ್ಮಸಿಯ ಸಾಂಕೇತಿಕ ಚಿಹ್ನೆಯನ್ನು ಇಷ್ಟು ದೊಡ್ಡ ಪ್ರಮಾಣದಲ್ಲಿ ಮಾನವಾಕೃತಿಯಾಗಿ ರೂಪಿಸಲಾಗಿದ್ದು, ಔಷಧ ಸುರಕ್ಷತೆ, ರೋಗಿಗಳ ಆರೋಗ್ಯ ಮತ್ತು ಸಾರ್ವಜನಿಕ ಆರೋಗ್ಯ ಸೇವೆಯಲ್ಲಿ ಫಾರ್ಮಾಸಿಸ್ಟ್‌ಗಳ ಮಹತ್ವವನ್ನು ಸಾರುವುದು ಇದರ ಉದ್ದೇಶವಾಗಿತ್ತು.

ಫಾರ್ಮಸಿ ಫ್ಯಾಕಲ್ಟಿ ಡೀನ್ ಡಾ.ಭರತ್ ಶ್ರೀನಿವಾಸನ್ ಮಾತನಾಡಿ, ರೋಗಿಗಳ ಸುರಕ್ಷತೆ ಮತ್ತು ಆರೋಗ್ಯ ಸೇವೆಯಲ್ಲೂ ಪ್ರತಿಯೊಬ್ಬ ಫಾರ್ಮಾಸಿಸ್ಟ್‌ನ ಪಾತ್ರ ಮಹತ್ವದ್ದಾಗಿದೆ. ಈ ಉಪಕ್ರಮವು ಉದಯೋನ್ಮುಖ ಫಾರ್ಮಾಸಿಸ್ಟ್‌ಗಳ ಸಾಮೂಹಿಕ ಶಕ್ತಿ, ನಾಯಕತ್ವ ಮತ್ತು ಆರೋಗ್ಯಕರ ಭವಿಷ್ಯ ನಿರ್ಮಿಸುವ ಬದ್ಧತೆಯನ್ನು ಪ್ರತಿಬಿಂಬಿಸುತ್ತದೆ ಎಂದರು.

ರಿಜಿಸ್ಟ್ರಾರ್ ಎಸ್. ಅಶೋಕ್ ರಾವ್, ಉಪನ್ಯಾಸಕರು, ಸಿಬ್ಬಂದಿಗಳು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.

ಸಾಂಪ್ರದಾಯಿಕ ಶಿಕ್ಷಣದ ಗಡಿಗಳನ್ನು ಮೀರಿ ನಾವೀನ್ಯತೆ ಮತ್ತು ಅನುಭವಾಧಾರಿತ ಕಲಿಕೆಗೆ ವಿಶ್ವವಿದ್ಯಾಲಯ ಆದ್ಯತೆ ನೀಡುತ್ತಿದೆ. ಇಂತಹ ಸಾಮೂಹಿಕ ಪ್ರಯತ್ನಗಳು ವಿದ್ಯಾರ್ಥಿಗಳನ್ನು ಜವಾಬ್ದಾರಿಯುತ ಆರೋಗ್ಯ ವೃತ್ತಿಪರರನ್ನಾಗಿ ರೂಪಿಸಲು ನೆರವಾಗುತ್ತವೆ.
ಪ್ರೊ.ಕುಲದೀಪ್ ಕುಮಾರ್ ರೈನಾ, ಉಪಕುಲಪತಿ