ಬೆಂಗಳೂರಿನ ನಾಲ್ಕು ದಿಕ್ಕಿನಲ್ಲೂ ಏರ್‌ಪೋರ್ಟ್ ಅಗತ್ಯ; ಕ್ಯಾಪ್ಟನ್ ಗೋಪಿನಾಥ್ ಅಭಿಮತ

ಕರ್ನಾಟಕ ಬ್ರಾಹ್ಮಣ ಅಭಿವೃದ್ಧಿ ಮಂಡಳಿ ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ಕ್ಯಾಪ್ಟನ್ ಗೋಪಿನಾಥ್ ಅವರನ್ನು ಸನ್ಮಾನಿಸಲಾಯಿತು. ಮಂಡಳಿ ಅಧ್ಯಕ್ಷ ಅಸಗೋಡು ಜಯಸಿಂಹ, ಎಂಡಿ ಕೆ.ದೀಪಶ್ರೀ ಮತ್ತಿತರರಿದ್ದರು.
ಕರ್ನಾಟಕ ಬ್ರಾಹ್ಮಣ ಅಭಿವೃದ್ಧಿ ಮಂಡಳಿ ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ಕ್ಯಾಪ್ಟನ್ ಗೋಪಿನಾಥ್ ಅವರನ್ನು ಸನ್ಮಾನಿಸಲಾಯಿತು. ಮಂಡಳಿ ಅಧ್ಯಕ್ಷ ಅಸಗೋಡು ಜಯಸಿಂಹ, ಎಂಡಿ ಕೆ.ದೀಪಶ್ರೀ ಮತ್ತಿತರರಿದ್ದರು.
Published on

ಪ್ರಮುಖ ಮುಖ್ಯಾಂಶಗಳು

  • ಬೆಂಗಳೂರಿನ ನಾಲ್ಕು ದಿಕ್ಕಿನಲ್ಲೂ ವಿಮಾನ ನಿಲ್ದಾಣ ಸ್ಥಾಪಸಿ
  • ಉದ್ಯಮಿ ಕ್ಯಾಪ್ಟನ್ ಗೋಪಿನಾಥ್ ಹೇಳಿಕೆ
  • ಬ್ರಾಹ್ಮಣ ಅಭಿವೃದ್ಧಿ ಮಂಡಳಿಯಲ್ಲಿ ಸನ್ಮಾನ

ಬೆಂಗಳೂರು:ಕರ್ನಾಟಕದ ಸಮಗ್ರಬೆಳವಣಿಗೆ ದೃಷ್ಠಿಯಿಂದ ಬೆಂಗಳೂರಿನನಾಲ್ಕು ದಿಕ್ಕಿನಲ್ಲೂ ವಿಮಾನನಿಲ್ದಾಣ ಸ್ಥಾಪನೆಯ ಅಗತ್ಯವಿದೆಉದ್ಯಮಿ ಕ್ಯಾಪ್ಟನ್ ಗೋಪಿನಾಥ್ಹೇಳಿದ್ದಾರೆ.

ಕರ್ನಾಟಕರಾಜ್ಯ ಬ್ರಾಹ್ಮಣ ಅಭಿವೃದ್ಧಿಮಂಡಳಿ ಸೋಮವಾರ ಏರ್ಪಡಿಸಿದ್ದಸನ್ಮಾನ ಸ್ವೀಕರಿಸಿ ಮಾತನಾಡಿದರು.

ರಕ್ಷಣಾಸ್ವಾವಲಂಬನೆ ದೃಷ್ಟಿಯಿಂದಮಾಡಬಹುದಾದ ಅಭಿವೃದ್ಧಿ ಕಾರ್ಯಗಳಿಗೆಬೆಂಗಳೂರು ಅತ್ಯಂತ ಪ್ರಶಸ್ತವಾಗಿದೆ.ಇದನ್ನು ಸರ್ಕಾರಮನಗಂಡು ಇಲ್ಲಿ ವಿಮಾನ ತರಬೇತಿಶಾಲೆಗಳನ್ನು ಆರಂಭಿಸಬೇಕು.ಮಹಾರಾಜರುದೂರದೃಷ್ಟಿಯಿಂದ ಜಾಗ ಕೊಟ್ಟುಆರಂಭಿಸಿದ ಸರ್ಕಾರಿ ವಿಮಾನ ತರಬೇತಿಶಾಲೆ ಇಂದು ದುರವಸ್ಥೆಯ ತಾಣವಾಗಿದೆ.ಕಾಣದ ಕೈಗಳುಮಹಾರಾಜರ ದೂರದೃಷ್ಠಿಯ ಪ್ರತಿಷ್ಟಿತಸರ್ಕಾರಿ ವಿಮಾನ ತರಬೇತಿ ಶಾಲೆಯನ್ನುಮುಚ್ಚುವ ಪ್ರಯತ್ನಕ್ಕೆ ಒತ್ತಡಹಾಕುತ್ತಿವೆ,ಇದು ಸರಿಯಲ್ಲ.ಯಾವ ಉದ್ದೇಶಕ್ಕೆತರಬೇತಿ ಶಾಲೆ ಆರಂಭಿಸಲಾಗಿದೆಯೋಅದು ಮುಂದುವರೆಯಬೇಕು.ಲಂಡನ್ ನಗರದಲ್ಲಿ6 ವಿಮಾನನಿಲ್ದಾಣಗಳಿವೆ.ಅದೇ ರೀತಿಹಾಂಗ್‌ಕಾಂಗ್ ನಲ್ಲಿ 5ವಿಮಾನ ನಿಲ್ದಾಣಗಳಿವೆ.ಪುಟ್ಟ ರಾಷ್ಟ್ರಮಾಲ್ಡೀವ್ಸೃ್ನಲ್ಲಿ 2ಕ್ಕಿಂತ ಹೆಚ್ಚುವಿಮಾನ ನಿಲ್ದಾಣಗಳಿವೆ.ಹೀಗಾಗಿ ರಾಜ್ಯದಸಮಗ್ರ ಬೆಳವಣಿಗೆ ಮತ್ತು ಯುವಕರಿಗೆಉದ್ಯೋಗ ಅವಕಾಶ ಈ ಎರಡೂ ಕಾರಣಗಳಿಂದರಾಜ್ಯದ ಬೇರೆ ಬೇರೆ ಭಾಗದಲ್ಲೂತರಬೇತಿ ಶಾಲೆ ಆರಂಭಿಸಬೇಕು.ಹೆಚ್‌ಎಎಲ್ವಿಮಾನ ನಿಲ್ದಾಣವನ್ನು ಯಾವುದೇಕಾರಣಕ್ಕೂ ಮುಚ್ಚಬಾರದು ಅದಕ್ಕೆಮತ್ತಷ್ಟು ಶಕ್ತಿ ತುಂಬಬೇಕುಎಂದು ಗೋಪಿನಾಥ ತಿಳಿಸಿದ್ದಾರೆ.

ಈಸಂದರ್ಭದಲ್ಲಿ ಮಂಡಳಿಯ ಅಧ್ಯಕ್ಷಅಸಗೋಡು ಜಯಸಿಂಹ,ವ್ಯವಸ್ಥಾಪಕನಿರ್ದೇಶಕಿ ಕೆ.ದೀಪಶ್ರೀಮತ್ತಿತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net