ಶಾಸಕ ಮುನಿರಾಜುರವರ ಮನೆಯಲ್ಲಿ ಅದ್ದೂರಿ ಬೊಂಬೆ ಪ್ರದರ್ಶನ

ನವರಾತ್ರಿ ಅಂಗವಾಗಿ ವಿಶೇಷ ಪೂಜೆ ಸಲ್ಲಿಕೆ
A special Dasara doll exhibition has been organized at the residence of T. Dasarahalli MLA S. Muniraju. His wife Sujatha, daughter Swapna, and son-in-law B.S. Anil Kumar participated in the puja.
ಟಿ.ದಾಸರಹಳ್ಳಿ ಶಾಸಕ ಎಸ್. ಮುನಿರಾಜು ಅವರ ನಿವಾಸದಲ್ಲಿ ವಿಶೇಷ ದಸರಾ ಬೊಂಬೆ ಪ್ರದರ್ಶನ ಆಯೋಜಿಸಲಾಗಿದೆ. ಪತ್ನಿ ಸುಜಾತ, ಪುತ್ರಿ ಸ್ವಪ್ನ, ಅಳಿಯ ಬಿ.ಎಸ್.ಅನಿಲ್ ಕುಮಾರ್ ಪೂಜೆಯಲ್ಲಿ ಪಾಲ್ಗೊಂಡಿದ್ದರು.
Published on: 

ಬೆಂಗಳೂರು : ಶೆಟ್ಟಿಹಳ್ಳಿಯಲ್ಲಿರುವ ಟಿ.ದಾಸರಹಳ್ಳಿ ಶಾಸಕ ಎಸ್.ಮುನಿರಾಜು ಅವರ ನಿವಾಸದಲ್ಲಿ ನವರಾತ್ರಿ ಹಬ್ಬದ ಪ್ರಯುಕ್ತ ದಸರಾ ಬೊಂಬೆಗಳ ಅದ್ದೂರಿ ಪ್ರದರ್ಶನ ಏರ್ಪಡಿಸಲಾಗಿದೆ. ವಿವಿಧ ಬೊಂಬೆಗಳನ್ನು ಪ್ರತಿಷ್ಠಾಪಿಸಿ ಅವುಗಳಿಗೆ ಆಕರ್ಷಕ ಅಲಂಕಾರ ಮಾಡಿ 9 ದಿನಗಳ ಕಾಲ ಪ್ರತಿದಿನ ನವ ದುರ್ಗಾದೇವಿಯರ ಪೂಜೆ ಸಲ್ಲಿಸುವ ಮೂಲಕ ನವರಾತ್ರಿ ಆಚರಣೆ ಮಾಡಲಾಗುತ್ತದೆ.

ಈ ವೇಳೆ ಮಾತನಾಡಿದ ಶಾಸಕ ಮುನಿರಾಜು, ‘ಪ್ರತಿ ವರ್ಷದಂತೆ ಈ ವರ್ಷವೂ ಕೂಡ ನವರಾತ್ರಿ ಸಂದರ್ಭದಲ್ಲಿ ನಮ್ಮ ಮನೆಯಲ್ಲಿ ದಸರಾ ಬೊಂಬೆಗಳನ್ನು ಪ್ರತಿಷ್ಠಾಪಿಸಲಾಗಿದ್ದು, ವಿವಿಧ ಪೂಜಾ ವಿಧಿ ವಿಧಾನಗಳೊಂದಿಗೆ ನವ ದೇವಿಯರ ಪೂಜೆ ಮಾಡಿ, ನಾಡಿನ ಸಮಸ್ತ ಜನತೆಗೆ ಆರೋಗ್ಯ, ಐಶ್ವರ್ಯ, ಸಮೃದ್ಧವಾದ ಮಳೆ, ಬೆಳೆ ಕರುಣಿಸಲಿ ಎಂದು ದೇವರಲ್ಲಿ ಪ್ರಾರ್ಥನೆ ಸಲ್ಲಿಸಲಾಗಿದೆ’ ಎಂದರು.

ಪೂಜಾ ಕಾರ್ಯಕ್ರಮದಲ್ಲಿ ಸೂರಜ್ ಫೌಂಡೇಶನ್ ಅಧ್ಯಕ್ಷೆ ಸುಜಾತ ಮುನಿರಾಜು, ಪುತ್ರಿ ಸ್ವಪ್ನ ಮತ್ತು ಅಳಿಯ ಬಿ.ಎಸ್.ಅನಿಲ್ ಕುಮಾರ್ ಪಾಲ್ಗೊಂಡಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net