ಆತ್ಮಹತ್ಯೆಯನ್ನಾದರೂ ಮಾಡಿಕೊಳ್ಳುತ್ತೇನೆ ಅದರೆ ಬಿಜೆಪಿ ಸೇರುವುದಿಲ್ಲ ಎಂದ ನಾಯಕ

sougat
Published on

ಕೋಲ್ಕತ: ಪಶ್ಚಿಮ ಬಂಗಾಳದಲ್ಲಿ ಮಮತಾ ಬ್ಯಾನರ್ಜಿ ಅವರ ಸರ್ಕಾರವನ್ನು ತೊರೆದು ಬಿಜೆಪಿ ಸೇರಲು ಟಿಎಂಸಿ ನಾಯಕರು ಸಿದ್ಧರಿದ್ದಾರೆ. ಯಾವುದೇ ಸಮಯದಲ್ಲಿ ಅವರು ಬಿಜೆಪಿ ಸೇರಿಕೊಳ್ಳಬಹುದು ಎಂದು ಹೇಳಿದ್ದ ಬಿಜೆಪಿ ನಾಯಕನ ಹೇಳಿಕೆಗೆ ಟಿಎಂಸಿ ನಾಯಕ ಸೌಗತ ರಾಯ್​ ಖಡಕ್​ ಉತ್ತರ ಕೊಟ್ಟಿದ್ದಾರೆ.

ಇದು ಬಿಜೆಪಿಯ ಪ್ರಚಾರ ಕಲೆ. ಈ ರೀತಿ ಅರೋಪಗಳನ್ನು ಮಾಡುವಲ್ಲಿ ಬಿಜೆಪಿಯ ಅರ್ಜುನ್​ ಸಿಂಗ್​ ಬಾಹುಬಲಿ ಇದ್ದಂತೆ. ನಾನು ರಾಜಕೀಯವನ್ನು ತ್ಯಜಿಸಿ ಸಾಯಲು ಸಿದ್ಧನಿದ್ದೇನಾದರೂ ಬಿಜೆಪಿ ಸೇರಲು ಎಂದಿಗೂ ಸಿದ್ಧನಿಲ್ಲ. ಅವರ ಜತೆ ನನ್ನ ಜೀವನದಲ್ಲಿ ಕೈ ಜೋಡಿಸುವ ಮಾತೇ ಇಲ್ಲ. ಅವರೆಂದುಕೊಂಡಿರವ ಮಾರಾಟದ ಸರಕು ನಾನಲ್ಲ ಎಂದು ಸೌಗತ ರಾಯ್​ ಪ್ರತಿಕ್ರಿಯೆ ಕೊಟ್ಟಿದ್ದಾರೆ.

ಸೌಗತ ರಾಯ್​ ಅವರು ಕ್ಯಾಮೆರಾ ಎದುರಿಗೆ ಮಾತ್ರ ಟಿಎಂಸಿ ನಾಯಕರಾಗಿ ಕಾರ್ಯನಿರ್ವಹಿಸುತ್ತಾರೆ. ಕ್ಯಾಮೆರಾ ತೆಗೆದರೆ ಅವರು ಬಿಜೆಪಿಯವರೇ, ಮುಂದಿನ ವರ್ಷ ನಡೆಯಲಿರುವ ವಿಧಾನಸಭಾ ಚುನಾವಣೆಗೆ ಸೌಗತ್​ ರಾಯ್​ ಮತ್ತು ನಾಲ್ವರು ಸಂಸದರು ಬಿಜೆಪಿ ಪರವಾಗಿ ಇರಲಿದ್ದಾರೆ ಎಂದು ಬಿಜೆಪಿ ಸಂಸದ ಅರ್ಜುನ್​ ಸಿಂಗ್ ಅವರು ಹೇಳಿದ್ದರು. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net