VIDEO: ಕರೊನಾ ಕಷ್ಟಕಾಲದಲ್ಲಿ ಉತ್ತಮರಾಗುತ್ತೀರೋ, ಮಧ್ಯಮರಾಗುತ್ತೀರೋ ಅಥವಾ ಅಧಮರಾಗುತ್ತೀರೋ- ಆಯ್ಕೆ ನಿಮ್ಮದು ಎನ್ನುತ್ತದೆ ಶ್ರೀಗುರುವಾಣಿ

Guruji 19 Epril 20
Published on

ಕರೊನಾ ಸೋಂಕು ಹರಡದಂತೆ ತಡೆಯಲು ನಾನಾ ರೀತಿಯಲ್ಲಿ ಜಾಗೃತಿ ಮೂಡಿಸುವ ಪ್ರಯತ್ನ ನಡೆದಿದೆ. ಇದೇ ವೇಳೆ ಮೈಸೂರಿನ ಅವಧೂತ ದತ್ತಪೀಠಂನ ಶ್ರೀ ಗಣಪತಿ ಸಚ್ಚಿದಾನಂದ ಸ್ವಾಮೀಜಿ ನಿತ್ಯವೂ ದಿಗ್ವಿಜಯ ನ್ಯೂಸ್​ನಲ್ಲಿ ಬೆಳಗ್ಗೆ ಚುಟುಕು ಪ್ರವಚನ ನೀಡುತ್ತಿದ್ದಾರೆ. ಈ ದಿನ ಅವರು ನಿಯಮ ಪಾಲನೆಯ ಪರಮ ಧರ್ಮದ ಕುರಿತು ವಿವರಣೆ ನೀಡಿದ್ದಾರೆ.

ಒಳ್ಳೆಯದನ್ನು ಕೇಳದೇ ಇರುವವನು ಅಧಮ. ಕೇಳುವವನು ಮಧ್ಯಮ. ಕೇಳಿ ಆಚರಿಸುವವನು ಉತ್ತಮ. ಕರೊನಾ ಕಷ್ಟಕಾಲದಲ್ಲಿ ಮನೆ ಬಿಟ್ಟು ಹೊರಗೆ ಬರಬೇಡಿ ಅಂತ ಹೇಳುವುದನ್ನು ಯಾರ್ಯಾರು ಪಾಲಿಸ್ತಾರೋ ಅವರೆಲ್ಲ ಉತ್ತಮರು. ಯಾರ ಮಾತನ್ನೂ ಕೇಳದವರು ಅಧಾಮಧಮರು. ನೀವೇನು ಆಗಬೇಕು ಎಂಬುದು ನಿಮ್ಮ ಆಯ್ಕೆ ಬಿಟ್ಟ ವಿಚಾರ.

ಸದ್ಯದ ಪರಿಸ್ಥಿತಿಯಲ್ಲಿ ಸರ್ಕಾರ ರೂಪಿಸಿರುವ ನಿಯಮಗಳನ್ನು ಪಾಲನೆ ಮಾಡಬೇಕಾದ್ದು ಪ್ರಜಾ ಧರ್ಮ. ಅದು ಪರಮ ಧರ್ಮವೂ ಹೌದು. ಪ್ರಾಣ ಉಳಿಸಲು ಸರ್ಕಾರ ರೂಪಿಸಿರುವ ನಿಯಮ, ಡಾಕ್ಟರ್​ಗಳ ಸೂಚನೆಯನ್ನು ನಾವು ಪಾಲಿಸಲೇ ಬೇಕು ಎನ್ನುವುದನ್ನು ವಿವರಿಸಿದ್ದಾರೆ ಸ್ವಾಮೀಜಿ. ಅವರ ಪ್ರವಚನದ ಪೂರ್ಣ ಪಾಠಕ್ಕಾಗಿ ಕೆಳಗಿನ ಲಿಂಕ್​ನಲ್ಲಿ ವಿಡಿಯೋ ವೀಕ್ಷಿಸಬಹುದು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net