

ಉತ್ತರ ಕನ್ನಡ : ಸತತವಾಗಿ ಸುರಿದ ಮಳೆಗೆ ಶಿಡ್ಲಗುಂಡಿ ತಾತ್ಕಾಲಿಕ ಸೇತುವೆ ಮಂಗಳವಾರ ಕೊಚ್ಚಿಹೋಗಿದೆ.
ಯಲ್ಲಾಪುರ ಹಾಗೂ ಮುಂಡಗೋಡು ನಡುವೆ ಸಂಪರ್ಕ ಕಲ್ಪಿಸಲು ಶಿಡ್ಲಗುಂಡಿ ಗ್ರಾಮದ ಬಳಿ ಸೇತುವೆ ನಿರ್ಮಿಸಲಾಗಿತ್ತು. ಕಳೆದ ವರ್ಷ ಆಗಸ್ಟ್ನಲ್ಲಿ ಸುರಿದ ಭಾರಿ ಮಳೆಗೆ ಸೇತುವೆ ಕೊಚ್ಚಿ ಹೋಗಿತ್ತು. ಆಗ ಸ್ಥಳೀಯ ಆಡಳಿತ ತಾತ್ಕಾಲಿಕ ಸೇತುವೆ ನಿರ್ಮಿಸಿ ಎರಡು ಪಟ್ಟಣಗಳ ನಡುವೆ ಸಂಚಾರ ಕಲ್ಪಿಸಿತ್ತು. ಮಂಗಳವಾರ ಸುರಿದ ಭಾರಿ ಮಳೆಗೆ ತಾತ್ಕಾಲಿಕ ಸೇತುವೆ ಕೂಡ ಕೊಚ್ಚಿ ಹೋಗಿದೆ.