

ಹಾಸನ: ಜಿಲ್ಲಾ ಉಸ್ತುವಾರಿ ಸಚಿವ ಮಾಧುಸ್ವಾಮಿ ಹಾಗೂ ವೈದ್ಯಕೀಯ ಶಿಕ್ಷಣ ಸಚಿವ ಡಾ. ಸುಧಾಕರ್ ಅವರ ಜತೆ ಊಟಕ್ಕೆ ತೆರಳುತ್ತಿದ್ದ ಅರಸೀಕೆರೆ ಶಾಸಕ ಶಿವಲಿಂಗೇಗೌಡ ಅವರನ್ನು ಹಿಮ್ಸ್ ನಿರ್ದೇಶಕರು ತಡೆದ ಘಟನೆ ಜರುಗಿದೆ.
ಕಾರ್ಯಕ್ರಮದಲ್ಲಿ ಶಾಸಕರಾದ ಶಿವಲಿಂಗೇಗೌಡ , ಬಾಲಕೃಷ್ಣ, ಎಮ್ ಎಲ್ ಸಿ ಗೋಪಾಲಸ್ವಾಮಿ ಪಾಲ್ಗೊಂಡಿದ್ದರು. ನಂತರ ಜನಪ್ರತಿನಿಧಿಗಳಿಗೆ ಊಟದ ವ್ಯವಸ್ಥೆ ಮಾಡಲಾಗಿತ್ತು. ಸಚಿವರ ಜತೆ ಶಾಸಕರು ಊಟಕ್ಕೆ ತೆರಳುತ್ತಿದ್ದರು. ಈ ವೇಳೆ ಹಿಮ್ಸ್ ನಿರ್ದೇಶಕ ರವಿಕುಮಾರ್ ಶಿವಲಿಂಗೇಗೌಡರನ್ನು ತಡೆದು ಇಲ್ಲಿ ಸಚಿವರಿಗೆ ಮಾತ್ರ ಊಟದ ವ್ಯವಸ್ಥೆ ಮಾಡಲಾಗಿದೆ. ನಿಮಗೆ ಬೇರೆ ಕಡೆ ವ್ಯವಸ್ಥೆ ಮಾಡಲಾಗಿದೆ ಎಂದರು.
ಇದನ್ನೂ ಓದಿ ಬೆಳಗಾವಿಯಲ್ಲಿ ಮತ್ತೆ ಧಾರಾಕಾರ ಮಳೆ
ಇದಕ್ಕೆ ಶಿವಲಿಂಗೇಗೌಡ ಆಕ್ರೋಶಗೊಂಡು ನಾವು ಜನಪ್ರತಿನಿಧಿಗಳು. ನಾವೇನು ಊಟಕ್ಕೆ ಗತಿ ಇಲ್ಲದೆ ಇಲ್ಲಿಗೆ ಬಂದಿಲ್ಲ. ನೀನು ಯಾವ ಸೀಮೆ ನಿರ್ದೇಶಕ, ಎಲ್ಲ ಜನಪ್ರತಿನಿಧಿಗಳಿಗೂ ಒಂದೇ ಕಡೆ ಊಟದ ವ್ಯವಸ್ಥೆ ಮಾಡಬೇಕಿತ್ತು ಅಂತ ಆಕ್ರೋಶ ವ್ಯಕ್ತಪಡಿಸಿದರು.
ಇದಕ್ಕೆ ಪ್ರತಿಯಾಗಿ ನಿರ್ದೇಶಕ ರವಿ ಕುಮಾರ್ ಕೂಡ ಶಾಸಕರಿಗೆ ಎದುರು ಉತ್ತರ ನೀಡಿದರು. ಕೊನೆಗೆ ಮೂವರು ಶಾಸಕರು ಊಟ ಮಾಡದೆ ಹೊರಗೆ ತೆರಳಿದರು.