ಮದುವೆಯ ವಾಯ್ದೆ ನೀಡಿ ಶೋಷಿಸಿದ ಮದರಸಾ ಶಿಕ್ಷಕನ ವಿರುದ್ಧ ರೇಪ್​ ಕೇಸ್

fir
Published on

ಲಖನೌ: ಮದರಸಾ ಶಿಕ್ಷಕನೊಬ್ಬ ಪ್ರೀತಿಸುತ್ತಿದ್ದ ಯುವತಿಯನ್ನು ಮದುವೆಯಾಗುವುದಾಗಿ ನಂಬಿಸಿ ಹಲವು ಬಾರಿ ಲೈಂಗಿಕವಾಗಿ ಶೋಷಿಸಿದ ಆರೋಪ ಕೇಳಿಬಂದಿದೆ. ಉತ್ತರ ಪ್ರದೇಶದ ಬರೇಲಿ ಜಿಲ್ಲೆಯ ಶೀಶ್​ಗಡ್ ಪೊಲೀಸರು ಶಿಕ್ಷಕನ ವಿರುದ್ಧ ಅತ್ಯಾಚಾರದ ಪ್ರಕರಣ ದಾಖಲಿಸಿದ್ದಾರೆ ಎನ್ನಲಾಗಿದೆ.

ಸಂತ್ರಸ್ತ ಮಹಿಳೆಯು ನಾಲ್ಕು ವರ್ಷಗಳ ಹಿಂದೆ ಪ್ರದೇಶದ ಮದರಸಾಗೆ ಹೋಗಿದ್ದು, ಆರೋಪಿಯು ಆಕೆಯ ಜೊತೆಗೆ ಓದುತ್ತಿದ್ದ. ಆತ ನಂತರ ಮದರಸಾದಲ್ಲೇ ಶಿಕ್ಷಕನಾಗಿ ಸೇರಿಕೊಂಡಿದ್ದು, ಇಬ್ಬರಿಗೂ ಪ್ರೇಮಾಂಕುರವಾಯಿತು. ಮದುವೆಯಾಗುವುದಾಗಿ ನಂಬಿಸಿದ ಆತ ಮತ್ತೆ ಮತ್ತೆ ಲೈಂಗಿಕವಾಗಿ ಶೋಷಿಸಿದ್ದು, ಇದರಿಂದಾಗಿ ಒಮ್ಮೆ ಗರ್ಭಪಾತ ಕೂಡ ಒಳಗೊಂಡಿರುವುದಾಗಿ ಸಂತ್ರಸ್ತೆಯು ದೂರಿನಲ್ಲಿ ಹೇಳಿದ್ದಾಳೆ.

ನಂತರದಲ್ಲಿ ಮದುವೆಯಾಗಲು ಕೇಳಿಕೊಂಡು ಆತನ ಮನೆಗೆ ಹೋದ ಸಂತ್ರಸ್ತೆಗೆ ಆರೋಪಿಯು ಪ್ರಾಣ ಬೆದರಿಕೆ ಹಾಕಿ, ಅಲ್ಲಿಂದ ಹೊರಟುಹೋಗುವಂತೆ ಎಚ್ಚರಿಕೆ ನೀಡಿದ ಎಂದೂ ಆರೋಪಿಸಲಾಗಿದೆ. ಆರೋಪಿ ಶಿಕ್ಷಕನ ಮೇಲೆ ರೇಪ್​ ಪ್ರಕರಣ ದಾಖಲಿಸಲಾಗಿದೆ ಎಂದು ಎಸ್ಪಿ ರೋಹಿತ್​ ಸಿಂಗ್ ಸಜ್ವಾನ್ ತಿಳಿಸಿದ್ದಾರೆ. (ಏಜೆನ್ಸೀಸ್)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net