ಉತ್ತರ ಕರ್ನಾಟಕ ವಿಷಯಕ್ಕೆ ಪಕ್ಷಾತೀತ ಧ್ವನಿ ಎತ್ತಿ Uttara Karnataka

ಉತ್ತರ ಕರ್ನಾಟಕದ ವಿಷಯ ಬಂದಾಗ ಪಕ್ಷಾತೀತವಾಗಿ ಎಲ್ಲರೂ ಧ್ವನಿಯಲ್ಲಿ ವಾತನಾಡಬೇಕು. ಸರ್ಕಾರದ ಮೇಲೆ ಒತ್ತಡ ಹೇರಿ ಹೆಚ್ಚು ಯೋಜನೆಗಳನ್ನು ಪಡೆದುಕೊಳ್ಳಬೇಕು ಎಂದು ಸಂಸದ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ.
Uttara Karnataka
ಅರಮನೆ ಮೈದಾನದಲ್ಲಿ ನಡೆದ ಉತ್ತರ ಕರ್ನಾಟಕ ಉತ್ಸವ ಕಾರ್ಯಕ್ರಮವನ್ನು ಬಸವರಾಜ ಬೊಮ್ಮಾಯಿ ಉದ್ಘಾಟಿಸಿದರು. ಲಕ್ಷ್ಮಣ ಸವದಿ, ಡಾ.ಸಿ. ಸೋಮಶೇಖರ, ಶಿವಕುವಾರ ಮೇಟಿ ಇದ್ದರು.folder
Published on: 

ಬೆಂಗಳೂರು: ಉತ್ತರ ಕರ್ನಾಟಕದ ವಿಷಯ ಬಂದಾಗ ಪಕ್ಷಾತೀತವಾಗಿ ಎಲ್ಲರೂ ಧ್ವನಿಯಲ್ಲಿ ವಾತನಾಡಬೇಕು. ಸರ್ಕಾರದ ಮೇಲೆ ಒತ್ತಡ ಹೇರಿ ಹೆಚ್ಚು ಯೋಜನೆಗಳನ್ನು ಪಡೆದುಕೊಳ್ಳಬೇಕು ಎಂದು ಸಂಸದ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ.

ಉತ್ತರ ಕರ್ನಾಟಕ ಸಂಘ ಸಂಸ್ಥೆಗಳ ಮಹಾ ಸಂಸ್ಥೆ ವತಿಯಿಂದ ನಗರದ ಅರಮನೆ ಮೈದಾನದಲ್ಲಿ ಭಾನುವಾರ ಏರ್ಪಡಿಸಿದ್ದ ‘ಉತ್ತರ ಕರ್ನಾಟಕ ಉತ್ಸವ’ವನ್ನು ಉದ್ಘಾಟಿಸಿ ಮಾತನಾಡಿದರು. ಉತ್ತರ ಕರ್ನಾಟಕದ ಮಣ್ಣು, ನೀರು, ಕೃಷಿ, ಕಲೆ ಫಲವತ್ತಾಗಿದೆ. ಸಕ್ಕರೆ ಉದ್ಯಮ ಸೇರಿ ಹಲವು ಕ್ಷೇತ್ರಗಳು ಇಲ್ಲಿಂದ ಪ್ರೇರಣೆ ಪಡೆದು ಬೆಳೆದಿವೆ. ರಾಜ್ಯವು ಸಮಗ್ರ ಅಭಿವೃದ್ಧಿ ಆದಾಗ ಮಾತ್ರ ಉತ್ತರ ಕರ್ನಾಟಕದ ಅಭಿವೃದ್ಧಿ ಸಾಧ್ಯ ಎಂದರು.

ಬೆಂಗಳೂರಿನ ಐಟಿ-ಬಿಟಿ ಕ್ಷೇತ್ರದಲ್ಲಿ ಶೇ.30-35 ಉತ್ತರ ಕರ್ನಾಟಕದ ಯುವಕರಿದ್ದಾರೆ. ಅವರಿಗೆ ಮತ್ತಷ್ಟು ಅವಕಾಶಗಳು ಸಿಗಬೇಕು. ಯುವಕರನ್ನು ದುಶ್ಚಟಗಳಿಂದ ರಕ್ಷಿಸಿ ಮುನ್ನಡೆಸಬೇಕು. ಹಿಂದಿನ ಕಾಲದಲ್ಲಿ ಮಠ ವಾನ್ಯಗಳು ಮತ್ತು ಶಿಕ್ಷಣ ಸಂಸ್ಥೆಗಳು ಕಟ್ಟಿದ ಅಡಿಪಾಯದಿಂದಾಗಿ ನಮ್ಮ ಜನ ವಿವಿಧ ರಂಗಗಳಲ್ಲಿ ಮುದುವರಿಯಲು ಸಾಧ್ಯವಾಗಿದೆ ಎಂದು ತಿಳಿಸಿದರು.

ಬೆಂಗಳೂರಿನಲ್ಲಿ ಮಹಾ ಸಂಸ್ಥೆಗೆ 3.5 ಎಕರೆ ಜಮೀನು ಮಂಜೂರಾತಿ ಮಾಡಿದ್ದು, ಅದರ ನೋಂದಣಿಗೆ ರಾಜ್ಯ ಸರ್ಕಾರ ಶೇ.10 ರಿಯಾಯಿತಿ ನೀಡಬೇಕು. ಉತ್ತರ ಕರ್ನಾಟಕದ ಜನ ಹಾಗೂ ವಿದ್ಯಾರ್ಥಿಗಳಿಗೆ ಅನುಕೂಲವಾಗುವಂತೆ ಜಾಗ ಗುರುತಿಸಲಾಗುತ್ತಿದೆ. ಅಲ್ಲಿ ಕಟ್ಟಡ ನಿರ್ಮಿಸಿ ಸ್ಪರ್ಧಾತ್ಮಕ ಪರೀಕ್ಷೆಗಳ ತರಬೇತಿ ಕೇಂದ್ರ ಸೇರಿ ವಿವಿಧ ಸೌಲಭ್ಯ ಕಲ್ಪಿಸಲಾಗುವುದು ಎಂದು ವಿವರಿಸಿದರು.

ಗಮನ ಸೆಳೆದ ಸಾಂಸ್ಕೃತಿಕ ಕಾರ್ಯಕ್ರಮ:

ಉತ್ಸವದ ಪ್ರಯುಕ್ತ ಕಲಾವಿದರಿಂದ ಡೊಳ್ಳು ಕುಣಿತ, ಮುಳ್ಳು ಹೆಜ್ಜೆ ಮೇಳ, ಕರಡಿ ಮಜಲು, ಗೊಂದಲಿಗರ ಪದ, ಮಲ್ಲಕಂಬ ಸಾಂಸ್ಕೃತಿಕ ಕಾರ್ಯಕ್ರಮಗಳು ನೆರವೇರಿದವು. ಉತ್ತರ ಕರ್ನಾಟಕದ ಭಾಗದ ವಿವಿಧ ಕ್ಷೇತ್ರದ ಸಾಧಕರಾದ ಎಸ್.ಎನ್. ಕಾತರಕಿ, ಬಸವರಾಜ ದಿಂಡೂರ, ಪಾಲಾಕ್ಷ ಬಾಣದ, ಬಸವರಾಜ ಬೀಳೂರು, ಎಂ.ವಿ. ನೆಗಳೂರ, ಕಲ್ಲಪ್ಪ ನವಣಿ ಅವರನ್ನು ಸನ್ಮಾನಿಸಲಾಯಿತು.

ಕಾರ್ಯಕ್ರಮದಲ್ಲಿ ಶರಣ ಸಾಹಿತ್ಯ ಪರಿಷತ್ ಅಧ್ಯಕ್ಷ ಡಾ.ಸಿ. ಸೋಮಶೇಖರ, ಮಹಾ ಸಂಸ್ಥೆಯ ಅಧ್ಯಕ್ಷ ಶಿವಕುವಾರ ಮೇಟಿ, ಪ್ರಧಾನ ಕಾರ್ಯದರ್ಶಿ ಶಂಕರ ಪಾಗೋಜಿ ಮತ್ತಿತರರು ಉಪಸ್ಥಿತರಿದ್ದರು.

ಕಬ್ಬು, ಮೆಕ್ಕೆಜೋಳ, ಮೆಣಸಿನಕಾಯಿ, ದ್ರಾಕ್ಷಿ, ದಾಳಿಂಬೆ ಬೆಳೆ ಹಾಗೂ ಸಹಕಾರ ಬ್ಯಾಂಕ್‌ಗಳ ಮೂಲಕ ಉತ್ತರ ಕರ್ನಾಟಕ ಬಲಿಷ್ಠವಾಗಿದೆ. ಯುವಕರು ಉದ್ಯೋಗಕ್ಕಾಗಿ ಬೆಂಗಳೂರಿಗೆ ವಲಸೆ ಬರುವುದನ್ನು ತಪ್ಪಿಸಲು ಉತ್ತರ ಕರ್ನಾಟಕದ ಜನಪ್ರತಿನಿಧಿಗಳು ಪಕ್ಷಾತೀತ, ಜಾತ್ಯಾತೀತವಾಗಿ ಒಗ್ಗೂಡಿ ಸರ್ಕಾರದ ಮೇಲೆ ಒತ್ತಡ ಹೇರಬೇಕು. - ಲಕ್ಷ್ಮಣ ಸವದಿ, ಸಚಿವ