ನೀನು ಇಲ್ಲದ ಜೀವನ ಖಾಲಿ ಖಾಲಿ... ಗರ್ಲ್​ಫ್ರೆಂಡ್​ ನಿಧನದ ಸುದ್ದಿ ಕೇಳಿ ಸಾವಿನ ಹಾದಿ ಹಿಡಿದ ಯುವಕ

Lovers
Published on

ಹೈದರಾಬಾದ್​: ಗರ್ಲ್​ಫ್ರೆಂಡ್​ ಮೃತಪಟ್ಟ ಸುದ್ದಿ ಕೇಳಿ ಅದನ್ನು ಅರಗಿಸಿಕೊಳ್ಳದ ಯುವಕನೊಬ್ಬ ನೀನು ಇಲ್ಲದ ಜೀವನ ಖಾಲಿ ಖಾಲಿ...ನಾನು ಕೂಡ ನಿನ್ನೊಂದಿಗೆ ಬರುತ್ತಿದ್ದೇನೆ ಎಂದು ಡೆತ್​ನೋಟ್​ ಬರೆದಿಟ್ಟು ಆತ್ಮಹತ್ಯೆ ಮಾಡಿಕೊಂಡಿರುವ ತೆಲಂಗಾಣದ ಮಂಚಿರಾಳ ಜಿಲ್ಲೆಯಲ್ಲಿ ಕಳೆದ ಬುಧವಾರ (ಫೆ.9) ನಡೆದಿದೆ.

ಫೆ. 2ರಂದು ರವಿ (18) ಎಂಬಾತ ಕುಶ್ನಪಲ್ಲಿ ಗ್ರಾಮದಲ್ಲಿ ಕೀಟನಾಶಕ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದ. ಚಿಕಿತ್ಸೆ ಫಲಕಾರಿಯಾಗದೇ ಫೆ.9ರಂದು ಆಸ್ಪತ್ರೆಯಲ್ಲೇ ಕೊನೆಯುಸಿರೆಳೆದಿದ್ದಾನೆ. ವೆಮನಪಲ್ಲಿ ಮಂಡಲದ ಬುಯ್ಯರಮ್​ ಗ್ರಾಮದ ಸತ್ಯಶ್ರೀ ಎಂಬಾಕೆಯನ್ನು ಸುಮಾರು ಒಂದು ವರ್ಷದಿಂದ ರವಿ ಲವ್​ ಮಾಡುತ್ತಿದ್ದ. ಆದರೆ, ಫೆ. 2ರಂದು ಸತ್ಯಶ್ರೀ ಅನಾರೋಗ್ಯದಿಂದ ಮೃತಪಟ್ಟಿದ್ದಳು.

ಸತ್ಯಶ್ರೀ ಮೃತಪಟ್ಟ ದಿನವೇ ವಿಷ ಕುಡಿದು ಅಸ್ವಸ್ಥಗೊಂಡಿದ್ದ ರವಿಯನ್ನು ಕುಟುಂಬಸ್ಥರು ಮಂಚಿರಳ ಆಸ್ಪತ್ರೆ ಸೇರಿದ್ದ. ಬಳಿಕ ಕರೀಮ್​ನಗರ ಆಸ್ಪತ್ರೆಗೆ ಹೆಚ್ಚಿನ ಚಿಕಿತ್ಸೆಗೆಂದು ದಾಖಲಿಸಲಾಗಿತ್ತು. ಆದರೆ, ಚಿಕಿತ್ಸೆ ಫಲಿಸದೇ ಇ9ದೀಗ ಮೃತಪಟ್ಟಿದ್ದಾರೆ. ಈ ಸಂಬಂಧ ದೂರು ದಾಖಲಾಗಿದ್ದು, ತನಿಖೆ ಆರಂಭಿಸಲಾಗಿದೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net