ಜಪಾನ್ ಪ್ರಧಾನಿಯೊಟ್ಟಿಗೆ ಬುಲೆಟ್ ರೈಲಿನಲ್ಲಿ 'ಪ್ರಧಾನಿ ಮೋದಿ' ಪ್ರಯಾಣ| japanese

japan modi
Published on

ಟೋಕಿಯೊ; ಜಪಾನ್ ಭೇಟಿಯ ಎರಡನೇ ದಿನದಂದು ಪ್ರಧಾನಿ ನರೇಂದ್ರ ಮೋದಿ ಅವರು ಜಪಾನ್ ಪ್ರಧಾನಿ ಶಿಗೇರು ಇಶಿಬಾ ಅವರೊಂದಿಗೆ ಬುಲೆಟ್ ರೈಲಿನಲ್ಲಿ ಪ್ರಯಾಣ ನಡೆಸಿದರು.ಜೊತೆಗೆ ಪೂರ್ವ ಜಪಾನ್ ರೈಲ್ವೆ ಕಂಪನಿಯಲ್ಲಿ ಪ್ರಸ್ತುತ ತರಬೇತಿ ಪಡೆಯುತ್ತಿರುವ ಭಾರತೀಯ ರೈಲು ಚಾಲಕರನ್ನು ಸಹ ಭೇಟಿಯಾಗಿದ್ದಾರೆ.

ಇನ್ನೂ ಪ್ರಧಾನಿ ನರೇಂದ್ರ ಮೋದಿ ಸೆಂಡೈಗೆ ತೆರಳುವ ಮುನ್ನ ಟೋಕಿಯೊದಲ್ಲಿ 16 ಜಪಾನಿನ ಪ್ರಾಂತ್ಯಗಳ ರಾಜ್ಯಪಾಲರನ್ನು ಸಹ ಭೇಟಿ ಮಾಡಿದರು. ಈ ಸಮಯದಲ್ಲಿ ಭಾರತ ಹಾಗೂ ಜಪಾನ್ ಜಾಗತಿಕ ಪಾಲುದಾರಿಕೆಯ ಅಡಿಯಲ್ಲಿ ರಾಜ್ಯ ಹಾಗೂ ಪ್ರಾಂತ್ಯ ಸಹಕಾರವನ್ನು ಬಲಪಡಿಸಲು ಕರೆ ನೀಡಿದರು.

(ಏಜೆನ್ಸೀಸ್)

ಬುಲೆಟ್ ರೈಲಿನಲ್ಲಿ, ಇಬ್ಬರೂ ಪ್ರಧಾನಿಗಳು ಟೋಕಿಯೊದಿಂದ ಸೆಂಡೈ ನಗರಕ್ಕೆ ಪ್ರಯಾಣಿಸಿದರು. ಸೆಂಡೈ ತಲುಪಿದಾಗ ಪ್ರಧಾನಿ ಮೋದಿ ಜಪಾನ್‌ನಲ್ಲಿ ತರಬೇತಿ ಪಡೆಯುತ್ತಿರುವ ಭಾರತೀಯ ಲೋಕೋ ಪೈಲಟ್‌ಗಳನ್ನು ಸಹ ಭೇಟಿಯಾದರು. ಬುಲೆಟ್ ರೈಲು ಪ್ರಯಾಣದ ಕುರಿತು, ವಿದೇಶಾಂಗ ವ್ಯವಹಾರಗಳ ವಕ್ತಾರ ರಣಧೀರ್ ಜೈಸ್ವಾಲ್ ಪ್ರತಿಕ್ರಿಯಿಸಿದ್ದು, ಇದು ಸ್ನೇಹ ಮತ್ತು ಪ್ರಗತಿಯ ಪ್ರಯಾಣ ಎಂದಿದ್ದಾರೆ. ಭಾರತ ಹಾಗೂ ಜಪಾನ್ ಸ್ನೇಹವನ್ನು ಸಂಕೇತಿಸುವ ವಿಶಿಷ್ಟ ಸೂಚನೆಯಾಗಿ, ಪ್ರಧಾನಿ ನರೇಂದ್ರ ಮೋದಿ ಮತ್ತು ಪ್ರಧಾನಿ ಶಿಗೇರು ಇಶಿಬಾ ಅವರು ಒಟ್ಟಿಗೆ ಪ್ರಯಾಣಿಸಿದರು ಎಂದು ಹೇಳಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net