ಪಾಕ್‌ನಿಂದ ಬಂದ ಸೀಮಾ ಹೈದರ್ ಮೇಲೆ ಗಂಡನಿಂದ ಹಲ್ಲೆ; ವಿಡಿಯೋ ನೋಡಿ

seema haidra
Published on

ನವದೆಹಲಿ: ತನ್ನ ಪ್ರೇಮಿಗಾಗಿ ಪಾಕಿಸ್ತಾನ ಗಡಿದಾಟಿ ಭಾರತಕ್ಕೆ ಬಂದು ಸುದ್ದಿಯಾಗಿದ್ದ ಸೀಮಾ ಹೈದರ್​ ತೀವ್ರವಾಗಿ ಹಲ್ಲೆಗೊಳಗಾಗಿರುವ ವಿಡಿಯೋ ಒಂದು ಹರಿದಾಡುತ್ತಿದೆ. ಪತಿ ಸಚಿನ್ ಹಲ್ಲೆ ಮಾಡಿದ್ದಾನೆ ಎಂಬ ಮಾಹಿತಿಗಳು ಸೋಶಿಯಲ್​​ ಮೀಡಿಯಾದಲ್ಲಿ ವೈರಲ್​ ಆಗಿದೆ.

ಈ ವಿಡಿಯೋದಲ್ಲಿ ಸೀಮಾ ಅವರ ಮುಖದ ಮೇಲಿನ ಗಾಯದ ಗುರುತುಗಳನ್ನು ಗಮನಿಸಬಹುದು. ಸೀಮಾ ಹೈದರ್ ಊದಿಕೂಂಡಿರುವ ಕಣ್ಣುಗಳನ್ನು, ಒಡೆದಿರುವ ತುಟಿಗಳನ್ನು ತೋರಿಸಿದ್ದಾಳೆ. ಬಲಬಾಗದ ಕಣ್ಣಿನ ಕೆಳಬಾಗ ಊದಿಕೊಂಡಿದೆ. ರಕ್ತ ಹೆಪ್ಪುಗಟ್ಟಿದೆ. ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ.

ಪತಿ ಸಚಿನ್ ಪ್ರೀತಿ ಅರಸಿ ಪಾಕಿಸ್ತಾನದಿಂದ ಭಾರತಕ್ಕೆ ಬಂದ ಸೀಮಾ ಮೇಲೆ ಕೈಮಾಡಿದ್ದಾನೆ ಎಂದು ವದಂತಿಗಳನ್ನು ಹಬ್ಬಲಾಗುತ್ತಿದೆ. ಈ ಮೂಲಕ ಭಾರತದಲ್ಲಿ ಮಹಿಳೆಯರು ಸುರಕ್ಷಿತವಾಗಿಲ್ಲ ಎಂಬುದನ್ನು ಅಂತಾರಾಷ್ಟ್ರೀಯ ಮಟ್ಟದಲ್ಲಿ ಬಿಂಬಿಸುವ ಪ್ರಯತ್ನವನ್ನು ಈ ವಿಡಿಯೋ ಮೂಲಕ ಮಾಡಲಿದೆ ಎಂದು ಹೇಳಲಾಗುತ್ತಿದೆ. ಆದರೆ ಇದು ಅಸಲಿ ವಿಡಿಯೋ ಅಲ್ಲ ಎಂದು ತಂತ್ರಜ್ಞಾನ ಹೇಳುತ್ತಿದೆ. ಇದು ಡೀಫ್ ಫೇಕ್ ವಿಡಿಯೋ ಎಂದು ವರದಿಯಾಗಿದೆ.

2020 ರಲ್ಲಿ PUBG ಗೇಮ್ ಮೂಲಕ ಗ್ರೇಟರ್ ನೋಯ್ಡಾದ ರಬುಪುರ ಗ್ರಾಮದ ಸಚಿನ್ ಮೀನಾ ಅವರಿಗೆ ಪರಿಚಸ್ಥರಾದ ಪಾಕಿಸ್ತಾನದ ಸೀಮಾ ಹೈದರ್. ಇಬ್ಬರ ಸ್ನೇಹವು ಗಾಢವಾಯಿತು ಮತ್ತು ಅಂತಿಮವಾಗಿ ಅದು ಪ್ರೀತಿಗೆ ತಿರುಗಿತು. ನೇಪಾಳದ ಮೂಲಕ ಭಾರತಕ್ಕೆ ಸೀಮಾ ನಾಲ್ಕು ಮಕ್ಕಳೊಂದಿಗೆ ಬಂದಿದ್ದಳು.

ಪಬ್‌ಜಿ ಆಟದ ಮೂಲಕ ಪರಿಚಸ್ಥರಾದ ಪಾಕಿಸ್ತಾನದ ಸೀಮಾ ಹೈದರ್ ಹಾಗೂ ಭಾರತದ ಸಚಿನ್ ಇದೀಗ ಹೊಸ ಬದುಕು ಕಟ್ಟಿಕೊಂಡಿದ್ದಾರೆ. ತನ್ನ ಮಕ್ಕಳೊಂದಿಗೆ ಭಾರತಕ್ಕೆ ಬಂದ ಸೀಮಾ ಹೈದರ್, ಸಚಿನ್ ಮದುವೆಯಾಗಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net