ಕಳ್ಳತನ ಆರೋಪದ ಬಳಿಕವೂ ಬಾಕಿ ಸಂಬಳ? ‘ಡ್ರಾಮಾ ಮಾಡಬೇಡ’ ಎಂದ ಮನೆ ಯಜಮಾನಿ! | Maid Allegedly Stealing

ಮನೆಕೆಲಸದಾಕೆ ಕಳ್ಳತನ ಮಾಡಿದ್ದಾರೆ ಎನ್ನಲಾದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಕಳ್ಳತನದ ಆರೋಪದ ನಡುವೆಯೂ ಬಾಕಿ ಸಂಬಳ ನೀಡಿ ಆಕೆಯನ್ನು ಕಳುಹಿಸಿದ ಮಾಲೀಕರ ನಡೆಗೆ ನೆಟ್ಟಿಗರು ನಾನಾ ರೀತಿ ಕಾಮೆಂಟ್ ಮಾಡಿದ್ದಾರೆ.
Video regarding the theft allegation
‘ಡ್ರಾಮಾ ಮಾಡಬೇಡ’ ಎಂದ ಮಾಲೀಕ; ಕಳ್ಳತನ ಆರೋಪದ ವಿಡಿಯೋ ವೈರಲ್
Published on: 

Domestic Worker Viral Video: ಮನೆಕೆಲಸದಾಕೆ ಕಳ್ಳತನ ಮಾಡಿದ್ದಾಳೆ ಎಂಬ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ದೃಶ್ಯದಲ್ಲಿ ಮಹಿಳೆ ಮಾಲೀಕರ ಮುಂದೆ ಕೈಮುಗಿದು ಕ್ಷಮೆ ಕೇಳುತ್ತಿರುವಂತೆ ಕಾಣುತ್ತದೆ. ಈ ವೇಳೆ ಮಾಲೀಕ, ‘ಡ್ರಾಮಾ ಮಾಡಬೇಡ’ ಎಂದು ಹೇಳಿ, ಆಕೆಗೆ ಬಾಕಿ ಸಂಬಳ ಪಡೆದು ಹೋಗುವಂತೆ ಹೇಳಿದ್ದಾರೆ.

ವೈರಲ್ ವಿಡಿಯೊದ ಜೊತೆ ಹರಿದಾಡುತ್ತಿರುವ ಮಾಹಿತಿಯ ಪ್ರಕಾರ, ಮಹಿಳೆ ಕಳ್ಳತನ ಮಾಡುತ್ತಿದ್ದಾಗ ಸಿಕ್ಕಿಬಿದ್ದಿದ್ದಾರೆ ಎನ್ನಲಾಗಿದೆ. ಈ ಬಗ್ಗೆ ಪೊಲೀಸರಿಗೆ ದೂರು ನೀಡುವ ಬದಲು, ಆಕೆ ಕೆಲಸ ಮಾಡಿದ ದಿನಗಳ ಬಾಕಿ ಸಂಬಳ ಕೊಟ್ಟು ಕಳುಹಿಸಿದ್ದಾರೆ ಎಂದು ಹೇಳಲಾಗುತ್ತಿದೆ. ಆದರೆ, ಈ ಆರೋಪಗಳಿಗೆ ಇನ್ನೂ ದೃಢೀಕರಣ ಸಿಕ್ಕಿಲ್ಲ.

ವಿಡಿಯೋ ಹಂಚಿದ್ದೇಕೆ? ನೆಟ್ಟಿಗರ ಪ್ರಶ್ನೆ

ಮಾಲೀಕ ಮಹಿಳೆಯ ಮೇಲೆ ಹಲ್ಲೆ ಮಾಡದೆ, ಬಾಕಿ ಸಂಬಳ ಕೊಟ್ಟು ಕಳುಹಿಸಿರುವುದನ್ನು ಕೆಲವರು ಮೆಚ್ಚಿದ್ದಾರೆ. ಆದ್ರೆ, ಮಹಿಳೆಯನ್ನು ಸಾರ್ವಜನಿಕವಾಗಿ ಅವಮಾನ ಮಾಡಿಲ್ಲ ಅಂತ ಹೇಳುತ್ತಲೇ, ಆಕೆಯ ಮುಖ ಕಾಣುವಂತೆ ವಿಡಿಯೋವನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿದ್ದೇಕೆ ಎಂದು ಕೆಲವರು ಪ್ರಶ್ನಿಸಿದ್ದಾರೆ.

ಕಳ್ಳತನ ನಡೆದಿದ್ರೆ ಪೊಲೀಸರಿಗೆ ದೂರು ನೀಡಬೇಕಿತ್ತು ಎಂದು ಕೆಲವರು ಹೇಳಿದ್ದಾರೆ. ಇನ್ನು ಕೆಲವರು, ಯಾವುದೇ ಹಿಂಸಾಚಾರಕ್ಕೆ ಇಳಿಯದೆ ವಿಷಯವನ್ನು ಬಗೆಹರಿಸಿ, ಬಾಕಿ ಸಂಬಳ ಕೊಟ್ಟು ಕಳುಹಿಸಿರುವುದು ಸರಿಯಾಗಿದೆ ಎಂದಿದ್ದಾರೆ.

ಇದನ್ನೂ ಓದಿ: ‘ಬಾಲಕಿಯರ ಹಾಸ್ಟೆಲ್‌ನಲ್ಲೂ ಸುರಕ್ಷತೆ ಇಲ್ಲವೇ?’: ಎಲ್‌ಪಿಯು ಹಿಂಸಾಚಾರದ ಬಗ್ಗೆ ದೀಪ್ಕೆ ಕಳವಳ | Dipke on Women Safety

ಈ ಘಟನೆ ಮನೆಕೆಲಸದವರು ಹಾಗೂ ಮಾಲೀಕರ ನಡುವಿನ ನಂಬಿಕೆ, ಕೆಲಸದ ವಿಚಾರದ ಗಲಾಟೆ ಮತ್ತು ಇಂತಹ ಘಟನೆಗಳ ವಿಡಿಯೋವನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಳ್ಳುವ ಬಗ್ಗೆ ಚರ್ಚೆ ಹುಟ್ಟುಹಾಕಿದೆ.(ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net