ಮುಖಕ್ಕೆ ಪಂಚ್​, ಬೆನ್ನಿಗೆ ಒದ್ದ.. ಯುವ ಪ್ರೇಮಿಗಳ ಮೇಲೆ ಅಪ್ರಾಪ್ತರ ಅಟ್ಟಹಾಸ! ವಿಡಿಯೋ ವೈರಲ್ | Young couple

Young couple
ಮುಖಕ್ಕೆ ಪಂಚ್​, ಬೆನ್ನಿಗೆ ಗುದ್ದಿದ.. ಯುವ ಪ್ರೇಮಿಗಳ ಮೇಲೆ ಅಪ್ರಾಪ್ತರ ಅಟ್ಟಹಾಸ! ವಿಡಿಯೋ ವೈರಲ್ | Young couple
Published on: 

ಮುಂಬೈ: ಪಾರ್ಕ್​ನಲ್ಲಿ ಸಮಯ ಕಳೆಯುತ್ತಿದ್ದ ಪ್ರೇಮಿಗಳ ಮೇಲೆ ಅಪ್ರಾಪ್ತ ಬಾಲಕರ ಗುಂಪೊಂದು ಸುಖಾಸುಮ್ಮನೆ ಹಲ್ಲೆ ನಡೆಸಿರುವ ಘಟನೆ ಮುಂಬೈನ ಘಾಟ್ಕೋಪರ್‌ನಲ್ಲಿ ಶುಕ್ರವಾರ ಸಂಜೆ ವರದಿಯಾಗಿದೆ. ಅಪ್ರಾಪ್ತರು ಯುವ ಜೋಡಿಗೆ ದೊಣ್ಣೆಯಿಂದ ಹೊಡೆಯುವುದು, ಕೈನಿಂದ ಮುಖಕ್ಕೆ ಗುದ್ದುವ ವಿಡಿಯೋಗಳು ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿದೆ.

ಮುಂಬೈ ನಿವಾಸಿಗಳಾದ ಯುವಕ ಮತ್ತು ಯುವತಿ ಘಾಟ್ಕೋಪರ್‌ನ ಪಾರ್ಕ್​ನಲ್ಲಿ ಸಮಯ ಕಳೆಯುತ್ತಿದ್ದ ವೇಳೆ, ಅಲ್ಲಿಗೆ ಬಂದ ಎಂಟು ಮಂದಿ ಬಾಲಕರು ಅವರನ್ನು ಚುಡಾಯಿಸಿದ್ದಾರೆ ಎನ್ನಲಾಗಿದೆ. ಈ ವಿಚಾರಕ್ಕೆ ಪರಸ್ಪರ ವಾಗ್ವಾದ ನಡೆದಿದೆ. ಮಾತಿನ ಚಕಮಕಿ ತಾರಕಕ್ಕೇರುತ್ತಿದ್ದಂತೆ, ಅಪ್ರಾಪ್ತರು ಯುವಕನ ಮೇಲೆ ದೊಣ್ಣೆಯಿಂದ ಮತ್ತು ಕೈನಿಂದ ಗುದ್ದುವ ಮೂಲಕ ಹಲ್ಲೆ ಮಾಡಿದ್ದಾರೆ.

ಬಾಲಕರ ಗುಂಪಿನಲ್ಲಿದ್ದ ಓರ್ವ, ಯುವಕನ ಮೇಲೆ ದೊಣ್ಣೆಯಿಂದ ಹಲ್ಲೆ ನಡೆಸಿದರೆ, ಮತ್ತೊಬ್ಬ ಮುಖಕ್ಕೆ ಗುದ್ದುವುದು ದೃಶ್ಯದಲ್ಲಿ ಸೆರೆಯಾಗಿದೆ. ಈ ವೇಳೆ, ಅಸಹಾಯಕಳಾಗಿದ್ದ ಯುವತಿಯು ಮಧ್ಯಪ್ರವೇಶಿಸಿ, ಪ್ರಿಯಕರನಿಗೆ ಹೆಚ್ಚು ಪೆಟ್ಟು ಬೀಳದಂತೆ ಅಲ್ಲಿಂದ ಬೇಗ ಹೊರಗೆ ಕರೆದುಕೊಂಡು ಹೋಗುತ್ತಿರುವ ದೃಶ್ಯವೂ ವಿಡಿಯೋದಲ್ಲಿ ರೆಕಾರ್ಡ್​ ಆಗಿದೆ. ಈ ವೈರಲ್​ ವಿಡಿಯೋ ನೋಡಿದ ನೆಟ್ಟಿಗರು, ಅಪ್ರಾಪ್ತರ ವರ್ತನೆಗೆ ತೀವ್ರ ಆಕ್ರೋಶ ಹೊರಹಾಕಿದ್ದು, ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ಖಾಕಿಗೆ ಆಗ್ರಹಿಸಿದ್ದಾರೆ.

Also Read
ಆಸೆಯಂತೆ ಅಮೆರಿಕದಲ್ಲಿ ಸಿಕ್ತು ಕೈತುಂಬ ಸಂಬಳದ ಕೆಲಸ! ವಿಧಿಯ ಕ್ರೂರ ಆಟ ಒಂದೇ ವಾರಕ್ಕೆ ಉಸಿರು ಚೆಲ್ಲಿದ ಭಾರತೀಯ ಯುವಕ | Accident
Young couple

ಘಟನೆಗೆ ಸಂಬಂಧಿಸಿದಂತೆ ಘಾಟ್ಕೋಪರ್ ಪೊಲೀಸ್ ಠಾಣೆಯಲ್ಲಿ ಈಗಾಗಲೇ ಎಂಟು ಅಪ್ರಾಪ್ತರ ವಿರುದ್ಧ ಭಾರತೀಯ ನ್ಯಾಯ ಸಂಹಿತೆಯ (BNS) ಸೆಕ್ಷನ್‌ಗಳಾದ 189(2), 189(4), 118(1), 352 ಮತ್ತು 351(2) ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ. ಇನ್ನು, ಬಾಲಕರ ಪೋಷಕರಿಗೆ ಪೊಲೀಸರು ನೋಟಿಸ್ ಜಾರಿಗೊಳಿಸಿದ್ದು, ತಕ್ಷಣವೇ ಠಾಣೆಗೆ ಹಾಜರಾಗುವಂತೆ ಸೂಚಿಸಿದ್ದಾರೆ ಎನ್ನಲಾಗಿದೆ.

ಮುಂದಿನ ಕಾನೂನು ಪ್ರಕ್ರಿಯೆಯ ಸಲುವಾಗಿ ಎಂಟು ಮಂದಿ ಅಪ್ರಾಪ್ತರನ್ನು ಬಾಲ ನ್ಯಾಯ ಮಂಡಳಿ (Juvenile Justice Board) ಮುಂದೆ ಹಾಜರುಪಡಿಸಲಾಗುವುದು ಎಂದು ಪೊಲೀಸರು ತಿಳಿಸಿದ್ದಾಗಿ ವರದಿಯಾಗಿದೆ,(ಏಜೆನ್ಸೀಸ್).