ಯಲಹಂಕ ಬಂಗಲೆ ಆಸ್ತಿ ವಿವಾದ: ತಂಗಿ ಶರ್ಮಿಳಾ ರೆಡ್ಡಿ ವಿರುದ್ಧ ಕೋರ್ಟ್ ಮೆಟ್ಟಿಲೇರಿದ ಆಂಧ್ರ ಮಾಜಿ ಸಿಎಂ ಜಗನ್ | Ex CM Jagan

ಆಂಧ್ರಪ್ರದೇಶ ಮಾಜಿ ಸಿಎಂ ಜಗನ್​ಮೋಹನ್ ರೆಡ್ಡಿ ಕುಟುಂಬಕ್ಕೆ ಸಂಬಂಧಿಸಿದಂತೆ ಬೆಂಗಳೂರಿನ ಯಲಹಂಕದಲ್ಲಿ ಬಂಗಲೆಯ ಆಸ್ತಿಯ ವಿವಾದ ದಿನೇ ದಿನೇ ಉಲ್ಬಣಗೊಳ್ಳುತ್ತಿದ್ದು, ಈ ವಿವಾದ ಈಗ ಕೋರ್ಟ್ ಮೆಟ್ಟಿಲೇರಿದೆ ಎಂದು ಶನಿವಾರ(ನ. 21) ವರದಿಯಾಗಿದೆ.
ಯಲಹಂಕ ಬಂಗಲೆ ಆಸ್ತಿ ವಿವಾದ: ತಂಗಿ ಶರ್ಮಿಳಾ ರೆಡ್ಡಿ ವಿರುದ್ಧ ಕೋರ್ಟ್ ಮೆಟ್ಟಿಲೇರಿದ ಆಂಧ್ರ ಮಾಜಿ ಸಿಎಂ ಜಗನ್ | Ex CM Jagan
Published on: 

ಬೆಂಗಳೂರು: ಆಂಧ್ರಪ್ರದೇಶ ಮಾಜಿ ಸಿಎಂ ಜಗನ್​ಮೋಹನ್ ರೆಡ್ಡಿ ಕುಟುಂಬಕ್ಕೆ ಸಂಬಂಧಿಸಿದಂತೆ ಬೆಂಗಳೂರಿನ ಯಲಹಂಕದಲ್ಲಿ ಬಂಗಲೆಯ ಆಸ್ತಿಯ ವಿವಾದ ದಿನೇ ದಿನೇ ಉಲ್ಬಣಗೊಳ್ಳುತ್ತಿದ್ದು, ಈ ವಿವಾದ ಈಗ ಕೋರ್ಟ್ ಮೆಟ್ಟಿಲೇರಿದೆ ಎಂದು ಶನಿವಾರ(ನ. 21) ವರದಿಯಾಗಿದೆ.

ವೈಎಸ್ಆರ್​ಸಿಪಿ ಮುಖ್ಯಸ್ಥ ವೈ.ಎಸ್. ಜಗನ್ ಮೋಹನ್ ರೆಡ್ಡಿ ತಮ್ಮ ಸಹೋದರಿ ಶರ್ಮಿಳಾ ಬೆಂಗಳೂರಿನ ಯಲಹಂಕದ ಬಂಗಲೆ ಪ್ರವೇಶಿಸದಂತೆ ತಡೆಯಲು ನ್ಯಾಯಾಲಯದ ಮೊರೆ ಹೋಗಿದ್ದಾರೆ ಎಂದು ತಿಳಿದು ಬಂದಿದೆ. ದೇವನಹಳ್ಳಿ ನ್ಯಾಯಾಲಯದಲ್ಲಿ ಜಗನ್ ಸಿಲಿಕಾನ್ ಬಿಲ್ಡರ್ಸ್ ಲಿಮಿಟೆಡ್ ಹೆಸರಿನಲ್ಲಿ ಅರ್ಜಿ ಸಲ್ಲಿಸಿದ್ದಾರೆ ಎನ್ನಲಾಗಿದೆ.

ಶರ್ಮಿಳಾ ತಮ್ಮ ಮಗಳು ಅಂಜಿಲಿ ವಿವಾಹ ಸಿದ್ಧತೆಯ ಭಾಗವಾಗಿ ಭಾನುವಾರ ಯಲಹಂಕ ಬಂಗಲೆಗೆ ಹೋಗಲು ಸಿದ್ಧತೆ ನಡೆಸುತ್ತಿದ್ದಾರೆ. ಈ ವಿಷಯ ತಿಳಿದ ಜಗನ್, ಬಂಗಲೆ ಪ್ರವೇಶಿಸದಂತೆ ತಡೆಯಾಜ್ಞೆ ನೀಡುವಂತೆ ನ್ಯಾಯಾಲಯವನ್ನು ಕೋರಿದ್ದಾರೆ ಎನ್ನಲಾಗಿದೆ.

Also Read
ಬಿಜೆಪಿಗೆ ಸೇರ್ಪಡೆಯಾದ ಕ್ರಿಕೆಟಿಗ ಯುಜುವೇಂದ್ರ ಚಾಹಲ್: ಪಕ್ಷದ ರಾಷ್ಟ್ರೀಯ ಒಬಿಸಿ ಮೋರ್ಚಾ ಸಮಿತಿಯಲ್ಲಿ ಸ್ಥಾನ | Yuzvendra Chahal
ಯಲಹಂಕ ಬಂಗಲೆ ಆಸ್ತಿ ವಿವಾದ: ತಂಗಿ ಶರ್ಮಿಳಾ ರೆಡ್ಡಿ ವಿರುದ್ಧ ಕೋರ್ಟ್ ಮೆಟ್ಟಿಲೇರಿದ ಆಂಧ್ರ ಮಾಜಿ ಸಿಎಂ ಜಗನ್ | Ex CM Jagan

ಇನ್ನೂ ವಾಸ್ತವವಾಗಿ, ಶರ್ಮಿಳಾ ತಮ್ಮ ಪುತ್ರಿ ಅಂಜಿಲಿಯ ವಿವಾಹವನ್ನು ಇದೇ ಬಂಗಲೆಯಲ್ಲಿ ನಡೆಸಬೇಕೆಂದು ಬಯಸಿದ್ದರು. ಆಮಂತ್ರಣ ಪತ್ರಿಕೆಗಳನ್ನು ಸಹ ಅದಕ್ಕೆ ಅನುಗುಣವಾಗಿ ಮುದ್ರಿಸಲಾಗಿತ್ತು. ಆದಾಗ್ಯೂ, ಜಗನ್ ಈ ವಿವಾಹ ಸಮಾರಂಭಕ್ಕೆ ಆಕ್ಷೇಪ ವ್ಯಕ್ತಪಡಿಸಿದರು. ಮತ್ತು ಅಂತಿಮವಾಗಿ ವಿವಾಹ ಸ್ಥಳವನ್ನು ಬದಲಾಯಿಸಬೇಕಾಯಿತು.

ಜಗನ್ ಈ ಹಿಂದೆ ಪತ್ರ ಬರೆದು, ತಾನು ವಾಸಿಸುತ್ತಿರುವ ಆವರಣದಲ್ಲಿ ವಿವಾಹ ನಡೆದರೆ ಭದ್ರತಾ ಸಮಸ್ಯೆಗಳಾಗುತ್ತವೆ. ಮತ್ತು ತನ್ನ ಕುಟುಂಬದ ಸುರಕ್ಷತೆಗಾಗಿ ಅಲ್ಲಿ ಮದುವೆ ನಡೆಯಬಾರದು. ನನ್ನ ಮಕ್ಕಳ ಮದುವೆಯನ್ನು ಸಹ ನಾನು ಇಲ್ಲಿ ಮಾಡಲ್ಲ ಎಂದು ಹೇಳಿದ್ದರು.

ಮತ್ತೊಂದೆಡೆ, 2019ರಲ್ಲಿ ಸಹಿ ಹಾಕಲಾದ ಒಪ್ಪಂದದ ಪ್ರಕಾರ, ಯಲಹಂಕ ಆಸ್ತಿಯ ಮೇಲೆ ತಮಗೆ ಹಕ್ಕಿದೆ ಎಂದು ಶರ್ಮಿಳಾ ವಾದಿಸುತ್ತಿದ್ದಾರೆ. ಈ ನಿಟ್ಟಿನಲ್ಲಿ, ಅವರ ತಾಯಿ ವಿಜಯಮ್ಮ ಕೂಡ ಈ ಹಿಂದೆ ಶರ್ಮಿಳಾ ಅವರನ್ನು ಬೆಂಬಲಿಸಿ ಹೇಳಿಕೆ ನೀಡಿದ್ದಾರೆ. ಯಲಹಂಕ ಭೂಮಿ ಶರ್ಮಿಳಾ ಅವರಿಗೆ ಸೇರಿದ್ದು ಮತ್ತು ಆಸ್ತಿಗಳ ಹಂಚಿಕೆಯ ಬಗ್ಗೆ ಅವರಿಗೆ ಸ್ಪಷ್ಟತೆ ಇದೆ ಎಂದು ಹೇಳಿದ್ದಾರೆ (ಏಜೆನ್ಸೀಸ್).