ವಿಮಲ್ ಜಾಹೀರಾತು ಪ್ರಕರಣ; ಎಫ್​ಡಿಎ ನೋಟಿಸ್​ಗೆ ಉತ್ತರಿಸಿದ ಶಾರುಖ್ ಖಾನ್, ಅಜಯ್ ದೇವಗನ್ ಹಾಗೂ ಟೈಗರ್ ಶ್ರಾಫ್‌: ತುಕರಾಮ್ ಮುಂಡೆ ಏನಂದ್ರು? | Tukaram Mundhe

ನಿಷೇಧಿತ ಪಾನ್ ಮಸಾಲವನ್ನು ಜಾಹೀರಾತಿನ ಮೂಲಕ ಪರೋಕ್ಷವಾಗಿ ಪ್ರಚಾರ ಮಾಡಿದ್ದಕ್ಕಾಗಿ ಬಾಲಿವುಡ್​ ನಟರಾದ ಶಾರುಖ್ ಖಾನ್, ಅಜಯ್ ದೇವಗನ್ ಮತ್ತು ಟೈಗರ್ ಶ್ರಾಫ್ ಅವರಿಗೆ ಮಹಾರಾಷ್ಟ್ರ ಆಹಾರ ಮತ್ತು ಔಷಧ ಆಡಳಿತ ಮಂಡಳಿ(ಎಫ್​ಡಿಎ) ನೀಡಿದ ನೋಟಿಸ್​ಗೆ ಮೂವರು ನಟರು ಉತ್ತರಿಸಿದ್ದಾರೆ ಎಂದು ಬುಧವಾರ(ಸೆ. 30) ವರದಿಯಾಗಿದೆ.
ಬಾಲಿವುಡ್​ ನಟರಾದ ಶಾರುಖ್ ಖಾನ್, ಅಜಯ್ ದೇವಗನ್ ಮತ್ತು ಟೈಗರ್ ಶ್ರಾಫ್
ಬಾಲಿವುಡ್​ ನಟರಾದ ಶಾರುಖ್ ಖಾನ್, ಅಜಯ್ ದೇವಗನ್ ಮತ್ತು ಟೈಗರ್ ಶ್ರಾಫ್
Published on: 

ಮುಂಬೈ: ನಿಷೇಧಿತ ಪಾನ್ ಮಸಾಲವನ್ನು ಜಾಹೀರಾತಿನ ಮೂಲಕ ಪರೋಕ್ಷವಾಗಿ ಪ್ರಚಾರ ಮಾಡಿದ್ದಕ್ಕಾಗಿ ಬಾಲಿವುಡ್​ ನಟರಾದ ಶಾರುಖ್ ಖಾನ್, ಅಜಯ್ ದೇವಗನ್ ಮತ್ತು ಟೈಗರ್ ಶ್ರಾಫ್ ಅವರಿಗೆ ಮಹಾರಾಷ್ಟ್ರ ಆಹಾರ ಮತ್ತು ಔಷಧ ಆಡಳಿತ ಮಂಡಳಿ(ಎಫ್​ಡಿಎ) ನೀಡಿದ ನೋಟಿಸ್​ಗೆ ಮೂವರು ನಟರು ಉತ್ತರಿಸಿದ್ದಾರೆ ಎಂದು ಬುಧವಾರ(ಸೆ. 30) ವರದಿಯಾಗಿದೆ.

ಈ ಕುರಿತು ಮಾಹಿತಿ ನೀಡಿರುವ ಎಫ್​ಡಿಎ ಕಮಿಷನರ್ ತುಕರಾಮ್ ಮುಂಡೆ, ನೋಟಿಸ್‌ಗಳಿಗೆ ಸಂಬಂಧಿಸಿದಂತೆ ಮೂವರಿಂದಲೂ ಪ್ರತಿಕ್ರಿಯೆಗಳು ಬಂದಿವೆ. ಅವರಲ್ಲಿ ಇಬ್ಬರು ವಿಚಾರಣೆಗೆ ಕೋರಿದ್ದರು. ನಿನ್ನೆ ಅವರ ವಿಚಾರಣೆ ಪೂರ್ಣಗೊಂಡಿದ್ದು, ನಾವು ಮುಂದಿನ ಕ್ರಮ ಕೈಗೊಳ್ಳುತ್ತಿದ್ದೇವೆ ಎಂದು ತಿಳಿಸಿದ್ದಾರೆ.

Also Read
ಪ್ರಜಾಪ್ರಭುತ್ವ ಉಳಿಸಿ ಅಲ್ಲ, ವಂಶಪಾರಂಪರ್ಯ ಉಳಿಸಿ ಅಭಿಯಾನ: ಅ. 02ರ ಇಂಡಿಯಾ ಕೂಟದ ಅಭಿಯಾನಕ್ಕೆ ಬಿಜೆಪಿ ವ್ಯಂಗ್ಯ |BJP
ಬಾಲಿವುಡ್​ ನಟರಾದ ಶಾರುಖ್ ಖಾನ್, ಅಜಯ್ ದೇವಗನ್ ಮತ್ತು ಟೈಗರ್ ಶ್ರಾಫ್

ರಾಜ್ಯದಲ್ಲಿ ನಿಷೇಧಿಸಲ್ಪಟ್ಟಿರುವ 'ಪಾನ್ ಮಸಾಲಾ' ಉತ್ಪನ್ನವನ್ನು ವಿಮಲ್ ಎಲಾಚಿ ಜಾಹೀರಾತಿನ ಮೂಲಕ ಪರೋಕ್ಷವಾಗಿ ಪ್ರಚಾರ ಮಾಡುತ್ತಿದ್ದಾರೆ ಎಂಬ ಆರೋಪದ ಮೇಲೆ ಎಫ್​ಡಿಎ ಮೂವರಿಗೂ ನೋಟಿಸ್ ನೀಡಿತ್ತು. ಇನ್ನೂ ವಿಚಾರಣೆ ಕೋರಿದ ಆ ಇಬ್ಬರು ನಟರು ಯಾರು ಎಂಬುದನ್ನು ಎಫ್​ಡಿಎ ಬಹಿರಂಗಪಡಿಸಿಲ್ಲ.

2024ರಲ್ಲಿ ಮೂವರು ಬಾಲಿವುಡ್ ನಟರು ವಿಮಲ್ ಕಂಪನಿಯ ವಿಮಲ್​ ಎಲಾಚಿ ಕಣ ಕಣದಲ್ಲು ಕೇಸರಿ ಉತ್ಪನ್ನದ ಜಾಹೀರಾತಿನಲ್ಲಿ ಕಾಣಿಸಿಕೊಂಡಿದ್ದರು. ಜಾಹೀರಾತಿನಲ್ಲಿ ಬಳಸಲಾದ 'ವಿಮಲ್ ಎಲಾಚಿ ಎನ್ನುವ ಪದವು ವಿಮಲ್​ ಪಾನ್​ ಮಸಾಲದ ಜೊತೆ ನಂಟು ಕಲ್ಪಿಸುವ ರೀತಿಯಲ್ಲಿ ಬಳಕೆಯಾಗಿದೆ. ಇದು ಗ್ರಾಹಕರನ್ನು ತಪ್ಪು ದಾರಿಗೆಳೆಯಬಹುದು. ನಿಷೇಧಿತ ಉತ್ಪನ್ನದ ಬ್ರ್ಯಾಂಡ್‌ ಗುರುತನ್ನು ಪರೋಕ್ಷವಾಗಿ ಪ್ರಚಾರ ಮಾಡಲಾಗಿದೆ ಮೂವರಿಗೆ ಎಫ್​ಡಿಎ ನೋಟಿಸ್ ನೀಡಿತ್ತು (ಏಜೆನ್ಸೀಸ್).

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net