ಆರೋಗ್ಯ ಕಾರಣವಲ್ಲ; ಇಡಿ ನೋಟಿಸ್ ಬೆದರಿಕೆಯಿಂದ ಜಗದೀಪ್ ಧನಕರ್ ಹಠಾತ್ ರಾಜೀನಾಮೆ: ಸಂಜಯ್ ರಾವತ್ ಪುಸ್ತಕದಲ್ಲಿ ಆರೋಪ | Sanjay Raut

ಜಗದೀಪ್ ಧನಕರ್ ಮತ್ತು ಸಂಜಯ್ ರಾವತ್
ಜಗದೀಪ್ ಧನಕರ್ ಮತ್ತು ಸಂಜಯ್ ರಾವತ್
Published on
ನವದೆಹಲಿ: ಕಳೆದ ವರ್ಷ ಉಪರಾಷ್ಟ್ರಪತಿ ಸ್ಥಾನಕ್ಕೆ ಜಗದೀಪ್ ಧನಕರ್ ಅವರ ಹಠಾತ್ ರಾಜೀನಾಮೆಗೆ ಆರೋಗ್ಯ ಸಮಸ್ಯೆ ಕಾರಣವಲ್ಲ, ಇಡಿ ನೋಟಿಸ್ ಬೆದರಿಕೆಯ ಬಳಿಕ ರಾಜೀನಾಮೆ ನೀಡಬೇಕಾಯ್ತು ಎಂದು ಶಿವಸೇನಾ(ಯುಬಿಟಿ) ನಾಯಕ ಸಂಜಯ್ ರಾವತ್(Sanjay Raut) ತಮ್ಮ ಹೊಸ ಪುಸ್ತಕದಲ್ಲಿ ಆರೋಪಿಸಿದ್ದಾರೆ.
ಪತ್ರಾ ಚಾಲ್ ಪುನರಾಭಿವೃದ್ಧಿ ಯೋಜನೆಗೆ ಸಂಬಂಧಿಸಿದಂತೆ ಹಗರಣ ನಡೆದಿದೆ ಎಂಬ ಆರೋಪದ ಮೇಲೆ ಇಡಿಯಿಂದ ಬಂಧನಕ್ಕೊಳಗಾಗಿ ಜೈಲಿನಲ್ಲಿದ್ದಾಗ ನರ್ಕಚಾ ಸ್ವರ್ಗ್ ಎಂಬ ಪುಸ್ತಕವನ್ನು ಮರಾಠಿಯಲ್ಲಿ ಬರೆದಿದ್ದ ಸಂಜಯ್ ರಾವತ್, ಅದನ್ನು ಅನ್‌ಲೈಕ್ಲಿ ಪ್ಯಾರಡೈಸ್‌ ಎಂಬ ಹೆಸರಿನಲ್ಲಿ ಇಂಗ್ಲೀಷ್​ನಲ್ಲಿ ಪ್ರಕಟಿಸಲು ಮುಂದಾಗಿದ್ದು, ನಾಳೆ(ಮಾ. 23) ನವದೆಹಲಿಯಲ್ಲಿ ಪುಸ್ತಕ ಬಿಡುಗಡೆಯಾಗಲಿದೆ. ರಾಹುಲ್ ಗಾಂಧಿ ಕಾರ್ಯಕ್ರಮದಲ್ಲಿ ಭಾಗವಹಿಸುವ ಸಾಧ್ಯತೆ ಇದೆ.
ಪುಸ್ತಕದಲ್ಲಿ ಹಲವು ವಿಚಾರಗಳ ಬಗ್ಗ ಬರೆದಿದ್ದಾರೆದ ಎನ್ನಲಾಗಿದ್ದು, ಅದರಲ್ಲಿ ಮಾಜಿ ಉಪರಾಷ್ಟ್ರಪತಿ ಜಗದೀಪ್ ಧನಕರ್ ಅವರ ರಾಜೀನಾಮೆ ಬಗ್ಗೆಯೂ ಉಲ್ಲೇಖಿಸಿದ್ದು, ಜಾರಿ ನಿರ್ದೇಶನಾಲಯದ (ಇಡಿ) ನೋಟಿಸ್ ಬೆದರಿಕೆಯಿಂದಾಗಿ ಅವರು ರಾಜೀನಾಮೆ ನೀಡಬೇಕಾಯ್ತು ಎಂದು ಪುಸ್ತಕದಲ್ಲಿ ಆರೋಪಿಸಿದ್ದಾರೆ.
ಕೇಂದ್ರ ಸರ್ಕಾರದ ವಿರುದ್ಧ ಅವಿಶ್ವಾಸ ನಿರ್ಣಯದ ವಿಪಕ್ಷಗಳ ನೋಟಿಸ್​ಗೆ ಸಂಬಂಧಿಸಿದಂತೆ ಸರ್ಕಾರ ಮತ್ತು ಅವರ ನಡುವೆ ಮನಸ್ಥಾಪ ಬಂದಿದ್ದು, ಧಂಖರ್ ಕ್ರಮ ಕೈಗೊಳ್ಳಲು ನಿರಾಕರಿಸಿದರು. ಆದರೆ ಧನಕರ್ ಮತ್ತು ಅವರ ಪತ್ನಿ ಜೈಪುರದಲ್ಲಿ ಆಸ್ತಿಯೊಂದನ್ನು ಮಾರಾಟ ಮಾಡಿದ್ದರು. ಅದರಲ್ಲಿನ ಸ್ವಲ್ಪ ಹಣವನ್ನು ವಿದೇಶಕ್ಕೆ ಕಳುಹಿಸಿದ್ದುರು. ಅದಕ್ಕೆ ಸಂಬಂಧಿಸಿದಂತೆ ಜಾರಿ ನಿರ್ದೇಶನಾಲಯ ನೋಟಿಸ್ ಸಿದ್ದಪಡಿಸಿ ಅವರ ಮೇಲೆ ಒತ್ತಡ ಹೇರಿತ್ತು. 
ಇದರಿಂದಾಗಿಯೇ ಅವರು ರಾಜೀನಾಮೆ ನೀಡಬೇಕಾಯಿತು ಎಂದು ಪುಸ್ತಕದಲ್ಲಿ ಉಲ್ಲೇಖಿಸಿದ್ದಾರೆ. ಹಾಗೆಯೇ ಚುನಾವಣಾ ಆಯೋಗದ ಮಾಜಿ ಸದಸ್ಯ ಅಶೋಕ್ ಲಾವಾ ಅವರಿಗೂ ಇಡಿ ಕ್ರಮದ ಬೆದರಿಕೆ ಹಾಕಲಾಗಿದೆ ಎಂದು  ಸಂಜಯ್ ರಾವತ್ ಆರೋಪಿಸಿದ್ದಾರೆ (ಏಜೆನ್ಸೀಸ್). 
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net